ಸಾರಾಂಶ
ರೋಟರಿ ಮಿಡ್‌ಟೌನ್‌ನ ಕ್ಲಬ್‌ನ ಅಧ್ಯಕ್ಷರಾಗಿ ರೊ ಡಾ. ತೇಜಸ್ವಿ ಅವರು ಪದಗ್ರಹಣ ಮಾಡಿದರು. ಇದೇ ವೇಳೆ ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ಇಡೀ ವಿಶ್ವದಲ್ಲಿ ಅನೇಕ ಉತ್ತಮ ಕಾರ್ಯಗಳನ್ನು ನಿಭಾಯಿಸುತ್ತಿದ್ದು ಇಂತಹ ಪ್ರತಿಷ್ಠಿತ ಕ್ಲಬ್ಬಿನ ಅಧ್ಯಕ್ಷರಾಗಿ ಪದಗ್ರಹಣ ಪಡೆದಿರುವುದು ಹೆಮ್ಮೆಯ ವಿಚಾರ. ಮುಂದಿನ ಒಂದು ವರ್ಷ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಇಂಗಿತ ಹೊಂದಿದ್ದು ಅದಕ್ಕೆ ಎಲ್ಲರೂ ಸಹಕರಿಸುವುದಕ್ಕಾಗಿ ವಿನಂತಿಸಿಕೊಂಡರು.
ಕನ್ನಡಪ್ರಭ ವಾರ್ತೆ ಹಾಸನ
ನಂದಗೋಕುಲದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಮಿಡ್‌ಟೌನ್‌ನ ಕ್ಲಬ್‌ನ ಅಧ್ಯಕ್ಷರಾಗಿ ರೊ ಡಾ. ತೇಜಸ್ವಿ ಅವರು ಪದಗ್ರಹಣ ಮಾಡಿದರು.ಇದೇ ಸಂದರ್ಭದಲ್ಲಿ ಎಸ್.ಎಲ್.ಜಿ ಬೇಕರಿಯ ರೊ ವೆಂಕಟೇಶ್ ಅವರನ್ನು ಕಾರ್ಯದರ್ಶಿಯಾಗಿ, ರೊ ಮಹೇಶ್ ಅವರನ್ನು ಖಜಾಂಚಿಯಾಗಿ ನೇಮಿಸಲಾಯಿತು.ತದನಂತರ ರೊ ಡಾ. ತೇಜಸ್ವಿ ಮಾತನಾಡಿ, ರೋಟರಿ ಇಂಟರ್ ನ್ಯಾಷನಲ್ ಸಂಸ್ಥೆ ಇಡೀ ವಿಶ್ವದಲ್ಲಿ ಅನೇಕ ಉತ್ತಮ ಕಾರ್ಯಗಳನ್ನು ನಿಭಾಯಿಸುತ್ತಿದ್ದು ಇಂತಹ ಪ್ರತಿಷ್ಠಿತ ಕ್ಲಬ್ಬಿನ ಅಧ್ಯಕ್ಷರಾಗಿ ಪದಗ್ರಹಣ ಪಡೆದಿರುವುದು ಹೆಮ್ಮೆಯ ವಿಚಾರ. ಮುಂದಿನ ಒಂದು ವರ್ಷ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುವ ಇಂಗಿತ ಹೊಂದಿದ್ದು ಅದಕ್ಕೆ ಎಲ್ಲರೂ ಸಹಕರಿಸುವುದಕ್ಕಾಗಿ ವಿನಂತಿಸಿಕೊಂಡರು.
ಒಂದು ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಇಡೀ ವರ್ಷ ಅದರ ಪ್ರಗತಿಗೆ ಶ್ರಮಪಡಲು ಪ್ರಯತ್ನ ಪಡುತ್ತೇವೆ, ಸಾವಿರಕ್ಕೂ ಹೆಚ್ಚು ಹಣ್ಣಿನ ಗಿಡಗಳು, ಮಿಯವಾಕಿ ಫಾರೆಸ್ಟ್, ರಸ್ತೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಕಾರ್ಯಕ್ರಮ, ಪರಿಸರ ಹಾಗೂ ಜಲ ಉಳಿವಿಗಾಗಿ ಕಾರ್ಯಕ್ರಮ ಹೀಗೆ ಅನೇಕ ಕಾರ್ಯಕ್ರಮಗಳನ್ನು ಯೋಚಿಸಲಾಗಿದೆ ಎಂದು ತಿಳಿಸಿದರು.ಅದಕ್ಕೆ ಪೂರಕವಾಗುವಂತೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಉತ್ತರ ಬಡಾವಣೆ ಇಲ್ಲಿನ ಮಕ್ಕಳಿಗಾಗಿ ಲ್ಯಾಪ್‌ಟಾಪ್ ಹಸ್ತಾಂತರ ಮಾಡಲಾಯಿತು.ಇದೇ ಸಂದರ್ಭದಲ್ಲಿ ಸರ್ಕಾರಿ ಕನ್ನಡ ಶಾಲೆಯ ಉಳಿವಿಗಾಗಿ ಶ್ರಮಿಸುತ್ತಿರುವ ಅನು ಅಕ್ಕ ಅವರಿಗೂ ಕೂಡ ಗೌರವ ಸಮರ್ಪಿಸಿ ಅವರು ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿ ಅವರ ಕಾರ್ಯಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ನಿಕಟ ಪೂರ್ವ ಅಧ್ಯಕ್ಷರು ರೊ ಮಮತಾ ಪಾಟೀಲ್ ಅವರು ಮಾತಾಡಿ, ಕಳೆದ ವರ್ಷ ಕ್ಲಬ್ ವತಿಯಿಂದ 300ಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೂ ಮುಂದಿನ ತಂಡಕ್ಕೆ ಶುಭಾಶಯಗಳು ಕೋರಿದರು.ಇದೇ ಸಂದರ್ಭದಲ್ಲಿ ರೊ ಸಂತೋಷ್, ರೊ ವಿಕ್ರಂ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ರೊ ಡಾ. ಸುನಿತಾ ನಿಕಟಪೂರ್ವ ಕಾರ್ಯದರ್ಶಿ ಉಪಸ್ಥಿತರಿದ್ದರು.