ತೆಲಂಗಾಣ ರಾಜ್ಯ ರಚನೆ ಹೊಸ ಸಮಸ್ಯೆ ಉಲ್ಬಣ: ಶೇಷಮೂರ್ತಿ ಅವಧಾನಿ

| Published : Mar 27 2024, 01:02 AM IST

ತೆಲಂಗಾಣ ರಾಜ್ಯ ರಚನೆ ಹೊಸ ಸಮಸ್ಯೆ ಉಲ್ಬಣ: ಶೇಷಮೂರ್ತಿ ಅವಧಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬಚಾವತ್ ಜಲತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರು ಪಡೆಯಲು ಕಾನೂನು ತಜ್ಞರ ಸಲಹೆ ಪಡೆದುಕೊಂಡು ಕಲಬುರಗಿ ಹೈಕೋರ್ಟ್‌ನಲ್ಲಿ ದಾವೆ ಹೂಡಬೇಕೆಂದು ಶ್ರಮಜೀವಿ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚವಡಾಪುರ

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬಚಾವತ್ ಜಲತೀರ್ಪಿನ ಪ್ರಕಾರ ನಮ್ಮ ಪಾಲಿನ ನೀರು ಪಡೆಯಲು ಕಾನೂನು ತಜ್ಞರ ಸಲಹೆ ಪಡೆದುಕೊಂಡು ಕಲಬುರಗಿ ಹೈಕೋರ್ಟ್‌ನಲ್ಲಿ ದಾವೆ ಹೂಡಬೇಕೆಂದು ಶ್ರಮಜೀವಿ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಸಲಹೆ ನೀಡಿದರು.

ಅಫಜಲ್ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮೆಗೆ ನೀರು ಹರಿಸಿ, ರೈತರ ಜೀವ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು ಮಹಾರಾಷ್ಟ್ರದಿಂದ ನಮ್ಮ ಪಾಲಿನ ನೀರು ನಮಗೆ ಬಿಡುವಲ್ಲಿ ಅವರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಾವು ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡುವ ಬದಲಾಗಿ ಕಲಬುರಗಿ ಹೈಕೋರ್ಟ್‌ನಲ್ಲಿ ದಾವೆ ಹೂಡೋಣ. ಹೈಕೋರ್ಟ್‌ ಕೂಡ ಪಕ್ಕದ ರಾಜ್ಯಕ್ಕೆ ಸಲಹೆ ನೀಡುವಷ್ಟು ಶಕ್ತಿ ಹೊಂದಿದೆ. ಒಂದು ವೇಳೆ ಮಹಾರಾಷ್ಟ್ರದವರು ಬಚಾವತ್ ತೀರ್ಪು ಹಾಗೂ ಕಲಬುರಗಿ ಹೈಕೋರ್ಟ್ ತೀರ್ಪು ದಿಕ್ಕರಿಸಿ ಸುಪ್ರೀಂ ಮೆಟ್ಟಿಲೇರಿದಿರೆ ನಾವು ಗೆಲುವು ಸಾಧಿಸಲು ಇನ್ನಷ್ಟು ಅನುಕೂಲವಾಗಲಿದೆ ಎಂದ ಅವರು ಶಿವಕುಮಾರ ನಾಟಿಕಾರ ಉಪವಾಸ ಸತ್ಯಾಗ್ರಹ ಮಾಡಿದ್ದರ ಫಲವಾಗಿ ಬರೀದಾಗಿದ್ದ ಭೀಮೆಗೆ 1 ಟಿಎಂಸಿ ನೀರು ಹರಿಯುವಂತಾಗಿದೆ ಎಂದರು.

ಹಿರಿಯ ವರದಿಗಾರರಾದ ಶೇಷಮೂರ್ತಿ ಅವಧಾನಿ ಮಾತನಾಡಿ, ಭೀಮಾ ನದಿ ನೀರು ಹಂಚಿಕೆ ಈ ಮೊದಲು ಕರ್ನಾಟಕ ಮಹಾರಾಷ್ಟ್ರ ಹಾಗೂ ಆಂದ್ರ ಪ್ರದೇಶಕ್ಕೆ ಸೀಮಿತವಾಗಿತ್ತು. ಬಚಾವತ್ ತೀರ್ಪಿನ ಪ್ರಕಾರ ನಮಗೆ 15 ಟಿಎಂಸಿ ನೀರು ಬಳಕೆಗೆ ಲಭ್ಯವಾಗಬೇಕೆಂದರು.

ಅಫಜಲ್ಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮೆಗೆ ನೀರು ಹರಿಸಿ, ರೈತರ ಜೀವ ಉಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಈಗ ಆಂಧ್ರ ಪ್ರದೇಶ ಇಬ್ಬಾಗವಾಗಿ ಸೀಮಾಂದ್ರ ತೆಲಂಗಾಣ ಎರಡು ರಾಜ್ಯಗಳ ರಚನೆಯಾಗಿದ್ದರಿಂದ ಮೂರು ರಾಜ್ಯಗಳಿಗೆ ಹಂಚಿಕೆ ಆಗಿದ್ದ ನೀರು ಈಗ ನಾಲ್ಕು ರಾಜ್ಯಗಳಿಗೆ ಹಂಚಿಕೆಯಾಗಲಿದೆ. ಹೀಗಾಗಿ ನಮ್ಮ ಪಾಲಿನ ನೀರು ಕಡಿಮೆಯಾಗಲಿದೆಯೇ? ಹೆಚ್ಚಾಗಲಿದೆಯೇ? ಎನ್ನುವ ಸಾಧಕ ಬಾಧಕಗಳ ಕುರಿತು ಕೂಡ ನಾವು ಈಗಿನಿಂದಲೇ ಗಂಭೀರವಾಗಿ ಚಿಂತಿಸಬೇಕು ಎಂದರು.

ಈ ವರ್ಷ ಬರಗಾಲ ಬಂದಿದೆ ಎಂದು ನಾಟಿಕಾರರಂತ ಹೋರಾಟಗಾರರು ಉಪವಾಸ ಕುಳಿತಿದ್ದರ ಪ್ರತಿಫಲವಾಗಿ ಬರೀದಾಗಿದ್ದ ಭೀಮೆಗೆ 1 ಟಿಎಂಸಿ ನೀರು ಹರಿದು ಬಂದಿದೆ. ಭವಿಷ್ಯದಲ್ಲಿ ಎಂತಹ ಭೀಕರ ದಿನಗಳು ಬರುತ್ತವೋ ಗೊತ್ತಿಲ್ಲ. ಹೀಗಾಗಿ ಸಮಗ್ರ ಕಾನೂನು ಹೋರಾಟ ಮಾಡದ ಹೊರತು ಭೀಮಾ ನದಿ ಪಾತ್ರದ ನಮಗೆ ಶಾಶ್ವತ ನೀರಿನ ಪರಿಹಾರ ಸಿಗುವುದು ಕಷ್ಟಸಾಧ್ಯವಾಗಲಿದೆ ಎಂದು ಕಳವಳ ವ್ಯಕ್ತ ಪಡಿಸಿದರು.

ಶಿವಕುಮಾರ ನಾಟಿಕಾರ ಮಾತನಾಡಿ ಸರ್ಕಾರಕ್ಕೆ ಭೀಮಾ ನದಿ ನೀರಿನ ಸಮಸ್ಯೆ ಸಮಸ್ಯೆಯೇ ಎನಿಸುತ್ತಿಲ್ಲ. ಕಾವೇರಿ ಜಲವಿವಾದ ಆದಾಗ ಬೆಂಗಳೂರು, ಮೈಸೂರು ಭಾಗದ ರಾಜಕಾರಣಿಗಳು, ಜನರೆಲ್ಲ ಕೂಡಿ ಬೀದಿಗೀಳಿದು ಹೋರಾಟ ಮಾಡುತ್ತಾರೆ. ಉತ್ತರ ಕರ್ನಾಟಕದ ಭೀಮಾ ನದಿ ಬತ್ತಿ ಈ ಭಾಗದ ಜನ ಜಾನುವಾರುಗಳು ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾದರೂ ಯಾರೊಬ್ಬರೂ ಚಕಾರ ಎತ್ತುವುದಿಲ್ಲ ಇದಕ್ಕಿಂತ ದುರಂತ ನಮಗೆ ಇನ್ನೊಂದಿಲ್ಲ. ಇನ್ನೂ ಮುಂದಾದರೂ ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು. ಬಚಾವತ್ ಜಲತೀರ್ಪಿ ಪ್ರಕಾರ ನಮ್ಮ ಹಕ್ಕಿನ ನೀರು ಪಡೆಯಲು ಮುಂದಾಗಬೇಕು ಇಲ್ಲದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ಕೆಟ್ಟ ದಿನಗಳನ್ನು ನಾವು ಎದುರಿಸಬೇಕಾಗುತ್ತದೆ. ಅಂತಹ ಕೆಟ್ಟ ದಿನಗಳು ಬರುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಬಸವರಾಜ ಚಾಂದಕವಟೆ, ಬಸಣ್ಣ ಗುಣಾರಿ, ಶಾಂತು ಅಂಜುಟಗಿ, ಚಿದಾನಂದ ಮಠ, ರಾಜು ಚವ್ಹಾಣ, ಸಂತೋಷ ದಾಮಾ, ಮಲ್ಲಿಕಾರ್ಜುನ ಸಿಂಗೆ, ದಯಾನಂದ ದೊಡ್ಮನಿ, ಶಿವಪುತ್ರಪ್ಪ ಸಂಗೋಳಗಿ, ಹಣಮಯ್ಯ ಗುತ್ತೇದಾರ, ರಾಜು ಉಕ್ಕಲಿ, ಶ್ರೀಕಾಂತ ದೀವಾನಜೀ, ಅಮರಸಿಂಗ ರಜಪೂತ, ನವೀನ ಜಮಾದಾರ ಸೇರಿದಂತೆ ಅನೇಕರು ಇದ್ದರು.