ಸಾರಾಂಶ
ಲಕ್ಷ್ಮೇಶ್ವರ: ರೈತನ ಬೆವರಿನ ಶ್ರಮ, ಸೈನಿಕರ ಪರಿಶ್ರಮ ಹಾಗೂ ಗುರುವಿನ ಬೋಧನೆಯ ಮಹತ್ವ ಬೆಲೆ ಕಟ್ಟಲಾಗದ ವಸ್ತುಗಳಾಗಿವೆ ಎಂದು ಶಿರಹಟ್ಟಿಯ ಫಕ್ಕೀರ ಸಿದ್ದರಾಮ ಸ್ವಾಮೀಜಿ ಹೇಳಿದರು.
ಸಮೀಪದ ಗೊಜನೂರ ಗ್ರಾಮದಲ್ಲಿ ಬುಧವಾರ ನಡೆದ ಬಸಪ್ಪ ಮಜ್ಜಿಗುಡ್ಡ ಇವರ ಪುತ್ರನ ಮದುವೆಯ ನಿಶ್ಚಿತಾರ್ಥದ ಅಂಗವಾಗಿ ನಡೆದ ಶ್ರೀಗಳ ತುಲಾಭಾರ ಹಾಗೂ ಧರ್ಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಹಾಗೂ ಧಾರ್ಮಿಕ ವಿಚಾರ ತಿಳಿಸಿಕೊಡುವ ಮೂಲಕ ಅವರಲ್ಲಿ ಧರ್ಮದ ಜ್ಞಾನ ಬಿತ್ತುವ ಕಾರ್ಯ ಮಾಡಬೇಕು. ರೈತರು ತಾವು ಬೆಳೆದ ಫಸಲುಗಳಿಗೆ ರೋಗ ರುಜಿನಗಳು ಬಾರದಂತೆ ತಡೆಯುವ ಹಾಗೆ ತಮ್ಮ ಮಕ್ಕಳಿಗೆ ಕೆಟ್ಟ ಹವ್ಯಾಸಗಳು ತಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪಾಲಕರದ್ದಾಗಿದೆ. ಮಕ್ಕಳಿಗೆ ಉತ್ತಮ ನಡುವಳಿಕೆ ಹಾಗೂ ಹಿರಿಯರಿಗೆ ಗೌರವ ಕೊಡುವ ಗುಣ ಕಲ್ಪಿಸುವುದು ಅಗತ್ಯವಾಗಿದೆ. ಸಮಾಜದಲ್ಲಿ ಶಾಂತಿ ಸಹಬಾಳ್ವೆ ಗ್ರಾಮೀಣ ಭಾಗದಲ್ಲಿ ಇನ್ನೂ ಜೀವಂತವಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದು ಹೇಳಿದರು.
ಈ ವೇಳೆ ಬಸಪ್ಪ ಮಜ್ಜಿಗುಡ್ಡ ದಂಪತಿಗಳು ಫಕ್ಕೀರ ಸ್ವಾಮಿಗಳು ತುಲಾಭಾರ ಸೇವೆ ನೆರವೇರಿಸಿದರು.ಧರ್ಮಸಭೆಯಲ್ಲಿ ಶೇಖರಪ್ಪ ಸೊರಟೂರ, ಸಿ.ಪಿ.ಮಾಡಳ್ಳಿ, ಶಿವನಗೌಡ ಪಾಟೀಲ, ವಡಕಣ್ಣವರ, ಎಲ್.ಎಫ್. ಹೊಸಮನಿ, ಪುಟ್ಟಪ್ಪ ಸೊರಟೂರ, ಚಂದ್ರಗೌಡ ಪಾಟೀಲ, ಗಂಗನಗೌಡ ಪಾಟೀಲ, ಕುಬೇರ ಸೊರಟೂರ, ಫಕ್ಕೀರೇಶ ದನದಮನಿ, ಶಿವಪುತ್ರಪ್ಪ ಸವಣೂರು, ಮಹಾಂತಪ್ಪ ಸೊರಟೂರ, ಹೊಳಲಪ್ಪ ಕರೆಣ್ಣವರ, ಚನ್ನಪ್ಪ ಷಣ್ಮುಖಿ, ಸಿದ್ದಲಿಂಗೇಶ ಸೊರಟೂರ, ಬಸವರಾಜ ದನದಮನಿ, ಶೇಖರಪ್ಪ ಸವಣೂರ, ಮಹಾಂತಯ್ಯ ಪ್ರಭಯ್ಯನಮಠ ಸೇರಿದಂತೆ ಅನೇಕರು ಇದ್ದರು.