ಕಲಬುರಗಿ ಕೊತ ಕೊತ: 44.4 ಡಿಗ್ರಿ ಉರಿ ತಾಪ!

| Published : Apr 04 2024, 01:08 AM IST / Updated: Apr 04 2024, 06:46 AM IST

weather news climate crisis news new study  temperature increased

ಸಾರಾಂಶ

ಕಳೆದೆರಡು ವಾರದಿಂದ ಬಿಸಿಲಿನ ತಾಪ ಹಾಗೂ ಉಷ್ಣ ಮಾರುತಗಳಿಂದಾಗಿ ತತ್ತರಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 44. 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

 ಕಲಬುರಗಿ :  ಕಳೆದೆರಡು ವಾರದಿಂದ ಬಿಸಿಲಿನ ತಾಪ ಹಾಗೂ ಉಷ್ಣ ಮಾರುತಗಳಿಂದಾಗಿ ತತ್ತರಿಸಿರುವ ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಗರಿಷ್ಠ 44. 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಜಿಲ್ಲೆಯ ಕಾಳಗಿಯಲ್ಲಿ 44. 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಲಬುರಗಿಯಲ್ಲಿ ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ತಾಪಮಾನ. ವಾಡಿಕೆಯಂತೆ ಏಪ್ರಿಲ್‌ ತಿಂಗಳ ಮೊದಲ ವಾರದಲ್ಲಿ ಸಾಮಾನ್ಯವಾಗಿ 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತಿತ್ತು. ಮೇ ತಿಂಗಳಲ್ಲಿ ಸಾಮಾನ್ಯವಾಗಿ 44-45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿತ್ತು. ಕಳೆದ ವರ್ಷ ಸಹ ಮೇ ತಿಂಗಳಲ್ಲಿ 44 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಏಪ್ರಿಲ್‌ ಮೊದಲ ವಾರದಲ್ಲಿ 44.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿರುವುದು ಆತಂಕ ಮೂಡಿಸಿದೆ.

ಇನ್ನುಳಿದಂತೆ ನೆಲೋಗಿಯಲ್ಲಿ 42. 2, ಆಳಂದದ ನರೋಣಾದಲ್ಲಿ 42. 6, ಯಡ್ರಾಮಿಯಲ್ಲಿ 42.4, ಚಿಂಚೋಳಿಯ ಐನಾಪುರದಲ್ಲಿ 43. 6, ಸೇಡಂನ ಆಡಕಿಯಲ್ಲಿ 43. 5, ಕಲಬುರಗಿಯ ಪಟ್ಟಣದಲ್ಲಿ 43.5, ಶಹಾಬಾದ್‌ನಲ್ಲಿ 42.5, ಕರಜಗಿಯಲ್ಲಿ 42.6, ಅತನೂರ್, ಸುಲೇಪೇಟ್, ಕಮಲಾಪುರ, ಕೋಡ್ಲಾ ಸೇರಿದಂತೆ ಜಿಲ್ಲೆಯ ಬಹುತೇಕ ಹೋಬಳಿಗಳಲ್ಲಿ ಬುಧವಾರ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟಿದೆ ಎಂದು ಐಎಂಡಿ ಮಾಹಿತಿ ಆಧರಿಸಿ ಜಿಲ್ಲಾಡಳಿತ ನೀಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.