ಮಳೆಗೆ ಕುಸಿದುಬಿದ್ದ ಶಿವಸಾಗರ ದೇವಸ್ಥಾನದ ಗೋಡೆ

| Published : Aug 25 2024, 01:46 AM IST

ಸಾರಾಂಶ

ಆಲೂರು ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಶಿವಸಾಗರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ದೇವಸ್ಥಾನದ ಮಣ್ಣಿನ ಗೋಡೆ ಕುಸಿದು ಬಿದ್ದಿದೆ.ಈ ಬಗ್ಗೆ ಕಳೆದ ಒಂದು ತಿಂಗಳ ಹಿಂದಿಯೇ ತಹಸೀಲ್ದಾರ್ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಪತ್ರ ಕೊಟ್ಟರೂ ಯಾರು ಕೂಡ ಗಮನಹರಿಸಿಲ್ಲ, ಇತ್ತ ತಿರುಗಿ ಸಹ ನೋಡಿಲ್ಲ. ಹಾಗಾಗಿ ಕೂಡಲೇ ಸಂಬಂಧಪಟ್ಟವರು ಸ್ಥಳ ಪರಿಶೀಲನೆ ನೆರವು ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲ ಸೇರಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ತಿಳಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಶಿವಸಾಗರ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಗೆ ದೇವಸ್ಥಾನದ ಮಣ್ಣಿನ ಗೋಡೆ ಕುಸಿದು ಬಿದ್ದಿದ್ದು ಸಂಬಂಧಪಟ್ಟ ಅಧಿಕಾರಿಗಳು ಬಂದು ದೇವಸ್ಥಾನ ವೀಕ್ಷಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಶಿವಸಾಗರ ಗ್ರಾಮದ ಚಂದ್ರು ಶೇಖರ್ ಮಾತಾನಾಡಿ, ನಮ್ಮ ಗ್ರಾಮದಲ್ಲಿ 50 ವರ್ಷದ ಹಳೆಯ ಕಾಲದ ಲಕ್ಷ್ಮಿದೇವಿ ಹಾಗೂ ವೆಂಕಟೇಶ್ವರ ದೇವಸ್ಥಾನವಿದ್ದು, ಕಳೆದ ತಿಂಗಳಿಂದ ಸುರಿದ ಮಳೆಗೆ ದೇವಸ್ಥಾನದ ಮಣ್ಣಿನಗೋಡೆ ಕುಸಿದು ಬಿದ್ದಿದೆ. ಈ ಬಗ್ಗೆ ಕಳೆದ ಒಂದು ತಿಂಗಳ ಹಿಂದಿಯೇ ತಹಸೀಲ್ದಾರ್ ಹಾಗೂ ಸ್ಥಳೀಯ ಶಾಸಕರಿಗೆ ಮನವಿ ಪತ್ರ ಕೊಟ್ಟರೂ ಯಾರು ಕೂಡ ಗಮನಹರಿಸಿಲ್ಲ, ಇತ್ತ ತಿರುಗಿ ಸಹ ನೋಡಿಲ್ಲ. ಹಾಗಾಗಿ ಕೂಡಲೇ ಸಂಬಂಧಪಟ್ಟವರು ಸ್ಥಳ ಪರಿಶೀಲನೆ ನೆರವು ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲ ಸೇರಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿದರು.

ದೇವಸ್ಥಾನದ ಪೂಜಾರಿ ವೆಂಕಟೇಶ್ ಮಾತನಾಡಿ, ಈ ಹಿಂದೆ ಸುರಿದ ಮಳೆಗೆ ದೇವಾಲಯದ ಹಿಂದಿನ ಭಾಗದ ಗೋಡೆ ಕುಸಿದಿದೆ. ಗೋಡೆ ಕುಸಿದ ಕಾರಣ ದೇವಸ್ಥಾನ ಸಂಪೂರ್ಣವಾಗಿ ಹಾಳಾಗಿದೆ. ಕಳೆದ ಕೆಲ ದಿನದಿಂದ ಈ ದೇವಸ್ಥಾನದ ಗೋಡೆ ಶಿಥಿಲಾವಸ್ಥೆಯಲ್ಲಿತ್ತು. ಆದರೆ ಸತತ ಮಳೆಯಿಂದ ಗೋಡೆ ಕುಸಿದು ದೇವಸ್ಥಾನ ವಿರೂಪಗೊಂಡಿದೆ. ಈಗ ದೇವಸ್ಥಾನದಲ್ಲಿ ದೇವರನ್ನು ಇಟ್ಟಿ ಪೂಜೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕವಾಗಿ ಮನೆಯಲ್ಲಿಟ್ಟು ಪೂಜೆ ಮಾಡುತ್ತಿದ್ದೇವೆ. ಮನೆಯಲ್ಲಿ ಹೆಂಗಸರು, ಮಕ್ಕಳು ಇರುವುದರಿಂದ ಪೂಜೆ ಮಾಡಲು ಕಷ್ಟವಾಗುತ್ತದೆ. ಹಾಗಾಗಿ ದಯಮಾಡಿ ಈ ದೇವಸ್ಥಾನಕ್ಕೆ ಪರಿಹಾರ ನೀಡಿ. ದೇವಸ್ಥಾನ ನೆಲೆ ನಿಲ್ಲಲು ಸಹಕಾರ ಮಾಡಿಕೊಡಬೇಕೆಂದು ಹಾಗೂ ಶಾಸಕರು ಹಾಗೂ ತಹಸೀಲ್ದಾರ್‌ರವರು ಈ ದೇವಸ್ಥಾನ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು .

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕಾಳಯ್ಯ, ಸಂಜು,ದ್ಯಾವಯ್ಯ, ಬಸವರಾಜು, ಜಯಣ್ಣ, ಸಂಪತ್ತು, ರಂಗಮ್ಮ, ಸಣ್ಣಮ್ಮಇತರರಿದ್ದರು.