ಸಾರಾಂಶ
ಶುಕ್ರವಾರ ಬೆಳಗ್ಗೆ 6:15ರ ಸುಮಾರಿಗೆ ಈತನಿಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಟೆಂಪೋ ಕ್ಲೀನರ್ ಸೇರಿದಂತೆ ಇತರ ವಾಹನಗಳ ಚಾಲಕರು ಶುಭಂ ಘೋರ್ಪಡೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾನೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮಹಾರಾಷ್ಟ್ರಕ್ಕೆ ಎಳನೀರು ಸಾಗಾಣಿಕೆ ಮಾಡಲು ಬಂದಿದ್ದ ಗೂಡ್ಸ್ ಟೆಂಪೋ ಚಾಲಕ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಯಲ್ಲಿ ಶುಕ್ರವಾರ ಮುಂಜಾನೆ ಜರುಗಿದೆ. ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಪಿಂಫ್ರೀ ರಾಜ್ ಗ್ರಾಮದ ಶುಭಂ ಭರತ್ ಘೋರ್ಪಡೆ (27) ಮೃತಪಟ್ಟ ಟೆಂಪೋ ಚಾಲಕ. ಮಹಾರಾಷ್ಟ್ರ ರಾಜ್ಯಕ್ಕೆ ಎಳನೀರು ಸಾಗಿಸಲು ಕಳೆದ ಮೂರು ದಿನಗಳ ಹಿಂದೆ ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಗೆ ಬಂದಿದ್ದ ಶುಭಂ ಘೋರ್ಪಡೆ ಮಾರುಕಟ್ಟೆ ಆವರಣದಲ್ಲಿ ವಾಸ್ತವ್ಯ ಹೂಡಿದ್ದರು.ಶುಕ್ರವಾರ ಬೆಳಗ್ಗೆ 6:15ರ ಸುಮಾರಿಗೆ ಈತನಿಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಟೆಂಪೋ ಕ್ಲೀನರ್ ಸೇರಿದಂತೆ ಇತರ ವಾಹನಗಳ ಚಾಲಕರು ಶುಭಂ ಘೋರ್ಪಡೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾನೆ.
ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡ ನಂತರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ವಾರಸುದಾರರ ವಶಕ್ಕೆ ಒಪ್ಪಿಸಲಾಯಿತು.