24ಕ್ಕೆ ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ

| Published : Feb 12 2024, 01:30 AM IST

24ಕ್ಕೆ ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕಾಶಿಯೆಂದು ಹೆಸರಾಗಿರುವ ಹಿರಿಯೂರು ಪಟ್ಟಣದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಫೆ.24ರಂದು ಮಧ್ಯಾಹ್ನ 12ಕ್ಕೆ ಜರುಗಲಿದೆ.

ಕನ್ನಡಪ್ರಭ ವಾರ್ತೆ ಹಿರಿಯೂರು

ದಕ್ಷಿಣ ಕಾಶಿಯೆಂದು ಹೆಸರಾಗಿರುವ ಹಿರಿಯೂರು ಪಟ್ಟಣದ ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವ ಫೆ.24ರಂದು ಮಧ್ಯಾಹ್ನ 12ಕ್ಕೆ ಜರುಗಲಿದೆ. ಜಾತ್ರಾ ಮಹೋತ್ಸವ ಫೆ.13ರಿಂದ ಕಂಕಣ ಕಲ್ಯಾಣೋತ್ಸವದೊಂದಿಗೆ ಪ್ರಾರಂಭಗೊಂಡು, ಫೆ.28ರವರೆಗೆ ಬಹಳ ವಿಜೃಂಭಣೆಯಿಂದ ನಡೆಲಿದೆ.

ಫೆ.14ರಂದು ರಾತ್ರಿ 8ಕ್ಕೆ ಮಂಟಪೋತ್ಸವ, ಫೆ.15ರಂದು ರಾತ್ರಿ 8ಕ್ಕೆ ಗಿಳಿ ವಾಹನೋತ್ಸವ, ಫೆ.16ರಂದು ರಾತ್ರಿ 8ಕ್ಕೆ ಗಂಡುಭೇರುಂಡ ವಾಹನೋತ್ಸವ, ಫೆ.17ರಂದು ರಾತ್ರಿ 8ಕ್ಕೆ ನವಿಲು ವಾಹನೋತ್ಸವ, ಫೆ.18ರಂದು ರಾತ್ರಿ 8ಕ್ಕೆ ಸಿಂಹ ವಾಹನೋತ್ಸವ, ಫೆ.19ರಂದು ರಾತ್ರಿ 8ಕ್ಕೆ ನಂದಿ ವಾಹನೋತ್ಸವ, ಫೆ.20ರಂದು ರಾತ್ರಿ 8ಕ್ಕೆ ಸರ್ಪ ವಾಹನೋತ್ಸವ, ಫೆ.21ರಂದು ರಾತ್ರಿ 8ಕ್ಕೆ ಅಶ್ವ ವಾಹನೋತ್ಸವ, ಫೆ.22ರಂದು ರಾತ್ರಿ 8ಕ್ಕೆ ಗಜ ವಾಹನೋತ್ಸವ (ಮೂರು ಕಳಸ ಸ್ಥಾಪನೆ) ಫೆ.23ರಂದು ಬೆಳಗ್ಗೆಯಿಂದ ರಾತ್ರಿಯವರೆಗೆ ಬಸವ ವಾಹನೋತ್ಸವ (ದೊಡ್ಡ ಉತ್ಸವ) ಅಕ್ಕಿ ತಂಬಿಟ್ಟಿನ ಆರತಿ ನಡೆಯಲಿದೆ.

ಹಿರಿಯೂರು ತಾಲೂಕು ಐಮಂಗಲ ಹೋಬಳಿ ಬೀರೇನಹಳ್ಳಿ ಮಜುರೆ ಕರಿಯಣ್ಣಹಟ್ಟಿ ಗ್ರಾಮದ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಫೆ.24ರಂದು ಬೆಳಗ್ಗೆ 9ಕ್ಕೆ ಶಿವಧನಸ್ಸಿನ ಗಂಗಾ ಸ್ನಾನದ ಉತ್ಸವ ನಂತರ ಮಧ್ಯಾಹ್ನ 12ಕ್ಕೆ ಮಘಾ ನಕ್ಷತ್ರದಲ್ಲಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಪ್ರಸಾದ ವಿನಿಯೋಗ, ಸಂಜೆ 5ಕ್ಕೆ ಚಂದ್ರಮೌಳೇಶ್ವರ ಮತ್ತು ಉಮಾಮಹೇಶ್ವರ ರಥೋತ್ಸವ ನೆರವೇರಲಿದೆ. ಫೆ.25ರಂದು ಸಂಜೆ 4ಕ್ಕೆ ಸಿದ್ಧನಾಯಕ ವೃತ್ತದಲ್ಲಿ ಶ್ರೀ ಮದಕರಿ ಯುವಕ ಸಂಘದಿಂದ ಜಂಗೀ ಕುಸ್ತಿ ಏರ್ಪಡಿಸಲಾಗಿದೆ.

ಫೆ.26ರಂದು ರಾತ್ರಿ 8ಕ್ಕೆ ಸುಮಂಗಲೆಯರಿಂದ ಕರ್ಪೂರದಾರತಿ, ಫೆ.27ರಂದು ರಾತ್ರಿ 8ಕ್ಕೆ ಚಿಟುಗ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಉಯ್ಯಾಲೋತ್ಸವ, ವಸಂತೋತ್ಸವ, ಓಕಳಿ ಪಾರ್ವಟೋತ್ಸವ ನಡೆಯಲ್ಲಿದೆ. ಫೆ.28ರಂದು ಸಂಜೆ 4ಕ್ಕೆ ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದು ಹಿರಿಯೂರು ತಹಸೀಲ್ದಾರ್ ರಾಜೇಶ್ ಕುಮಾರ್ ತಿಳಿಸಿದ್ದಾರೆ.