ಪಿಂಕಿ ಎಲ್ಲಿ, ಫೋರ್‌ ವಾಲ್ಸ್‌ಗೆಅತ್ಯುತ್ತಮ ಚಲನಚಿತ್ರ ಪ್ರಶಸ್ತಿ

| Published : Mar 12 2025, 12:47 AM IST

ಪಿಂಕಿ ಎಲ್ಲಿ, ಫೋರ್‌ ವಾಲ್ಸ್‌ಗೆಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಕೊಡ ಮಾಡುವ 2020ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ‘ಜಂಟಲ್‌ಮನ್‌’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ (ಸುಬ್ಬಯ್ಯನಾಯ್ಡು ಪ್ರಶಸ್ತಿ) ಪ್ರಶಸ್ತಿಗೆ ಪ್ರಜ್ವಲ್‌ ದೇವರಾಜ್‌, ‘ಪಿಂಕಿ ಎಲ್ಲಿ’ ಚಿತ್ರದ ಅಭಿಯನಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಅಕ್ಷತಾ ಪಾಂಡವಪುರ ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸರ್ಕಾರ ಕೊಡ ಮಾಡುವ 2020ನೇ ಸಾಲಿನ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ‘ಜಂಟಲ್‌ಮನ್‌’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ (ಸುಬ್ಬಯ್ಯನಾಯ್ಡು ಪ್ರಶಸ್ತಿ) ಪ್ರಶಸ್ತಿಗೆ ಪ್ರಜ್ವಲ್‌ ದೇವರಾಜ್‌, ‘ಪಿಂಕಿ ಎಲ್ಲಿ’ ಚಿತ್ರದ ಅಭಿಯನಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಅಕ್ಷತಾ ಪಾಂಡವಪುರ ಭಾಜನರಾಗಿದ್ದಾರೆ. ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ಪಿಂಕಿ ಎಲ್ಲಿ’ ಹಾಗೂ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ ‘ಫೋರ್‌ ವಾಲ್ಸ್‌’ ಚಿತ್ರ ಆಯ್ಕೆಯಾಗಿದೆ.ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ‘ಪದಕ’, ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರಪ್ರಶಸ್ತಿಗೆ ತುಳು ಭಾಷೆಯ ‘ಜೀಟಿಗೆ’, ಅತ್ಯುತ್ತಮ ಪೋಷಕ ನಟನೆಗೆ ನೀಡುವ ಕೆ.ಎಸ್‌.ಅಶ್ವಥ್‌ ಪ್ರಶಸ್ತಿಗೆ ರಮೇಶ್‌ ಪಂಡಿತ್‌ ಹಾಗೂ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ಕೆ.ಎಸ್‌.ಮಂಜುಳಮ್ಮ ಹಾಗೂ ತೀರ್ಪುಗಾರರ ವಿಶೇಷ ಪ್ರಶಸ್ತಿಗೆ ಮರಣೋತ್ತರವಾಗಿ ಸಂಚಾರಿ ವಿಜಯ್‌ ಅವರನ್ನು ಆಯ್ಕೆ ಮಾಡಲಾಗಿದೆ.ಪ್ರಶಸ್ತಿಯ ವಿವರ:

ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ -‘ಪಿಂಕಿ ಎಲ್ಲಿ’,ನಿರ್ಮಾಪಕರಿಗೆ ಕೊಡುವ ‘ಕೆ.ಸಿ.ಎನ್‌.ಗೌಡ ಪ್ರಶಸ್ತಿ’-ಕೃಷ್ಣೇಗೌಡ, ನಿರ್ದೇಶಕರಿಗೆ ಕೊಡುವ ‘ಎಚ್‌ಎಲ್‌ಎನ್‌ ಸಿಂಹ ಪ್ರಶಸ್ತಿ’ಗೆ ಪೃಥ್ವಿ ಕೊಣನೂರು ಅವರು ಭಾಜನರಾಗಿದ್ದಾರೆ. ಉಳಿದಂತೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ-‘ವರ್ಣಪಟಲ’(ನಿರ್ದೇಶಕ - ಚೇತನ ಮುಂಡಾಡಿ),ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ‘ಹರಿವ ನದಿಗೆ ಮೈಯೆಲ್ಲಾ ಕಾಲು’ (ನಿರ್ದೇಶನ-ಬಾಬು ಈಶ್ವರ ಪ್ರಸಾದ್‌ ಎಸ್‌.ಎಸ್‌), ವಿಶೇಷ ಸಾಮಾಜಿಕ ಕಳಕಳಿ ಪ್ರಶಸ್ತಿಗೆ ‘ಗಿಳಿಯು ಪಂಜರದೊಳಿಲ್ಲ’ (ನಿರ್ದೇಶನ - ರಾಮದಾಸ್‌ ನಾಯ್ಡು ಪಿ.ಆರ್‌). ಮತ್ತು ‘ಈ ಮಣ್ಣು’ (ನಿರ್ದೇಶನ - ಶಿವಪ್ರಸಾದ್‌ ಶೆಟ್ಟಿ ಕೆ.ಪಿ) ಆಯ್ಕೆಯಾಗಿದೆ.ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ-‘ಫೋರ್‌ ವಾಲ್ಸ್‌’ (ನಿರ್ದೇಶನ- ಸಂಗಮೇಶ್‌ ಎಸ್‌. ಸಜ್ಜನರ್‌), ನಿರ್ಮಾಪಕರಿಗೆ ಕೊಡುವ ‘ನರಸಿಂಹರಾಜು ಪ್ರಶಸ್ತಿ’ಗೆ ಟಿ.ವಿಶ್ವನಾಥ್‌ ನಾಯ್ಕ್‌, ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ‘ಪದಕ’, (ನಿರ್ದೇಶನ - ಆದಿತ್ಯ ಆರ್‌. ಚಿರಂಜೀವಿ), ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ನೀಲಿ ಹಕ್ಕಿ’, (ನಿರ್ದೆಶಕ - ಗಣೇಶ್‌ ಹೆಗ್ಡೆ), ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿಗೆ ತುಳು ಭಾಷೆಯ‘ಜೀಟಿಗೆ’ (ತುಳು), (ನಿರ್ದೇಶಕ-ಸಂತೋಷ್‌ ಮಾಡ) ಭಾಜನವಾಗಿದೆ.

ಅತ್ಯುತ್ತಮ ಪೋಷಕ ನಟನೆಗೆ ಕೊಡುವ ‘ಕೆ.ಎಸ್‌.ಅಶ್ವಥ್‌ ಪ್ರಶಸ್ತಿ’ ರಮೇಶ್‌ ಪಂಡಿತ್‌ (ಚಿತ್ರ - ತಲೆದಂಡ), ಅತ್ಯುತ್ತಮ ಪೋಷಕ ನಟಿ-ಕೆ.ಎಸ್‌. ಮಂಜುಳಮ್ಮ (ಚಿತ್ರ-ದಂತಪುರಾಣ), ಅತ್ಯುತ್ತಮ ಚಿತ್ರ ಕತೆ-ಶಶಿಕಾಂತ್‌ ಗಟ್ಟಿ (ಚಿತ್ರ - ರಾಂಚಿ), ಅತ್ಯುತ್ತಮ ಚಿತ್ರಕತೆ - ರಾಘವೇಂದ್ರಕುಮಾರ್‌ (ಚಿತ್ರ - ಚಾಂದಿನಿ ಬಾರ್‌), ಅತ್ಯುತ್ತಮ ಸಂಭಾಷಣೆ-ವೀರಪ್ಪ ಮರಳವಾಡಿ (ಚಿತ್ರ - ಹೂವಿನ ಹಾರ), ಅತ್ಯುತ್ತಮ ಛಾಯಾಗ್ರಹಣ-ಅಶೋಕ್‌ ಕಶ್ಯಪ್‌ (ಚಿತ್ರ - ತಲೆದಂಡ), ಅತ್ಯುತ್ತಮ ಸಂಗೀತ ನಿರ್ದೇಶನ-ಗಗನ ಬಡೇರಿಯಾ (ಚಿತ್ರ- ಮಾಲ್ಕುಡಿ ಡೇಸ್) ಆಯ್ಕೆಯಾಗಿದೆ.ಅತ್ಯುತ್ತಮ ಸಂಕಲನ-ನಾಗೇಂದ್ರ ಕೆ.ಉಜ್ಜನಿ (ಚಿತ್ರ - ಆಕ್ಟ್‌ 1978), ಅತ್ಯುತ್ತಮ ಬಾಲ ನಟ-ಮಾಸ್ಟರ್‌ ಅಹಿಲ್‌ ಅನ್ಸಾರಿ (ಚಿತ್ರ - ದಂತ ಪುರಾಣ), ಅತ್ಯುತ್ತಮ ಬಾಲನಟಿ-ಬೇಬಿ ಹಿತೈಷಿ ಪೂಜಾರ್‌ (ಚಿತ್ರ - ಪಾರು), ಅತ್ಯುತ್ತಮ ಕಲಾ ನಿರ್ದೇಶನ- ಗುಣಶೇಖರ್‌ (ಚಿತ್ರ - ಬಿಚ್ಚುಗತ್ತಿ), ಅತ್ಯುತ್ತಮ ಗೀರ ರಚನೆಗಾಗಿ ಕಾರೆಹಕ್ಲು (ಚಿತ್ರ - ಪರ್ಜನ್ಯ, ಮೌನವು ಮಾತಾಗಿದೆ..), ಸಚಿನ್‌ ಶೆಟ್ಟಿ ಕುಂಬ್ಳೆ (ಚಿತ್ರ - ಈ ಮಣ್ಣು, ದಾರಿಯೊಂದು ಹುಡುಕುತಿದೆ...), ಅತ್ಯುತ್ತಮ ಹಿನ್ನೆಲೆ ಗಾಯಕ - ಅನಿರುದ್ಧ ಶಾಸ್ತ್ರಿ (ಚಿತ್ರ - ಆಚಾರ್ಯ ಶ್ರೀ ಶಂಕರ), ಅತ್ಯುತ್ತಮ ಹಿನ್ನೆಲೆ ಗಾಯಕಿ-ಅರುಂಧತಿ ವಶಿಷ್ಠ (ಚಿತ್ರ - ದಂತ ಪುರಾಣ)

ತೀಪುಗಾರರ ವಿಶೇಷ ಪ್ರಶಸ್ತಿ:

ನಟನೆಗಾಗಿ ಮರಣೋತ್ತರವಾಗಿ ಸಂಚಾರಿ ವಿಜಯ್‌, ವಸ್ತ್ರ ವಿನ್ಯಾಸ-ಶ್ರೀವಲ್ಲಿ (ಚಿತ್ರ - ಸಾರವಜ್ರ), ಪ್ರಸಾಧನ-ರಮೇಶ್‌ ಬಾಬು (ಚಿತ್ರ ತಲೆದಂಡ), ಶಬ್ದಗ್ರಹಣ- ವಿ.ಜಿ.ರಾಜನ್‌ (ಚಿತ್ರ - ಅಮೃತ್‌ ಅಪಾರ್ಟ್‌ಮೆಂಟ್‌), ವಿಶೇಷ ಪ್ರಶಸ್ತಿ (ಪ್ರಮಾಣ ಪತ್ರ)- ವಿಶೇಷ ಚೇತನನಟ ವಿಶ್ವಾಸ್‌ ಕೆ.ಎಸ್‌. (ಚಿತ್ರ - ಅರಬ್ಬಿ) ಹಾಗೂ ಅತ್ಯುತ್ತಮ ನಿರ್ಮಾಣ ನಿರ್ವಾಹಕ- ಚಂಪಕದಾಮ (ಚಿತ್ರ - ಕನ್ನಡಿಗ) ಅವರು ಭಾಜನರಾಗಿದ್ದಾರೆ.