ಸಾರಾಂಶ
ವಿಜಯಪುರ: ಹಲವು ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯೊಬ್ಬ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದಿದ್ದ ವೇಳೆ ವಿಜಯಪುರ ಜಿಲ್ಲಾ ಕೋರ್ಟ್‌ನಲ್ಲಿಯೇ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಆರೋಪಿ ಶಿವಾನಂದ ಹೊಸಮನಿ ಎಂಬಾತ ನ್ಯಾಯಾಲಯದ ಆವರಣದಲ್ಲಿಯೇ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈತ ಹಲವು ಕೇಸ್‌ಗಳಲ್ಲಿ ಆರೋಪಿಯಾಗಿದ್ದ ಕಾರಣ ಶಿವಾನಂದನ ಮೇಲೆ ನ್ಯಾಯಾಲಯದ ಅರೆಸ್ಟ್ ವಾರಂಟ್ ಸಹ ಇತ್ತು. ಹೀಗಾಗಿ ನಗರದ ಕೆಇಬಿ ಬಳಿ ಬಂಧಿಸಿದ ಪೊಲೀಸರು, ಆತನನ್ನು ನೇರವಾಗಿ ನ್ಯಾಯಾಧೀಶರ ಎದುರು ಹಾಜರುಪಡಿಸಲು ಜಿಲ್ಲಾ ನ್ಯಾಯಾಲಯಕ್ಕೆ ಕರೆತಂದಿದ್ದರು. ಈ ವೇಳೆ ಜಡ್ಜ್ ಎದುರು ಹಾಜರುಪಡಿಸುವ ಮುನ್ನವೇ ಕೋರ್ಟ್ ಆವರಣದಲ್ಲಿ ಕತ್ತು ಕೊಯ್ದುಕೊಂಡಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಜನರು ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆತನ ಮೇಲೆ ಯಾವ ಯಾವ ಪ್ರಕರಣಗಳು ಇದ್ದವು, ಆತ ಏಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.