ಅಕ್ರಮ ಮಣ್ಣು ಮಾರಾಟದ ಆರೋಪ ಸುಳ್ಳು

| Published : Jun 26 2024, 12:31 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಕಾಗವಾಡ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಜಲ ಜೀವನ ಮೀಷನ್ ಕಾಮಗಾರಿಯಲ್ಲಿನ ಮಣ್ಣಿಗೆ ಕನ್ನ ಹಾಕಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಜುಗೂಳ ಗ್ರಾಪಂ ಅಧ್ಯಕ್ಷ ಕಾಕಾ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.ಜುಗೂಳ ಗ್ರಾಮ ಪಂಚಾಯತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮಕ್ಕೆ ಜಲ ಜೀವನ ಮೀಷನ್ ಯೋಜನೆಯಡಿಯಲ್ಲಿ ಓವ್ಹರ್ ಹೆಡ್ ಟ್ಯಾಂಕ್ ಕಟ್ಟಬೇಕಾಗಿತ್ತು. ಆದರೆ, ಅದನ್ನು ನಿರ್ಮಿಸಲು ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಗ್ರಾಮದ ಸಂದೇಶ ಕುಮಠಳ್ಳಿಯವರ ಜಮೀನಿನಲ್ಲಿ ಬಾಡಿಗೆ (ಲಿಜ್) ಮೂಲಕ ಪಡೆದು ಟ್ಯಾಂಕ್‌ ನಿರ್ಮಾಣ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಾಗವಾಡ

ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಜಲ ಜೀವನ ಮೀಷನ್ ಕಾಮಗಾರಿಯಲ್ಲಿನ ಮಣ್ಣಿಗೆ ಕನ್ನ ಹಾಕಿದ್ದಾರೆಂದು ಕೆಲ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂದು ಜುಗೂಳ ಗ್ರಾಪಂ ಅಧ್ಯಕ್ಷ ಕಾಕಾ ಪಾಟೀಲ ಸ್ಪಷ್ಟನೆ ನೀಡಿದ್ದಾರೆ.ಜುಗೂಳ ಗ್ರಾಮ ಪಂಚಾಯತಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗ್ರಾಮಕ್ಕೆ ಜಲ ಜೀವನ ಮೀಷನ್ ಯೋಜನೆಯಡಿಯಲ್ಲಿ ಓವ್ಹರ್ ಹೆಡ್ ಟ್ಯಾಂಕ್ ಕಟ್ಟಬೇಕಾಗಿತ್ತು. ಆದರೆ, ಅದನ್ನು ನಿರ್ಮಿಸಲು ಗ್ರಾಮದಲ್ಲಿ ಸರ್ಕಾರಿ ಜಮೀನು ಇಲ್ಲದ ಕಾರಣ ಗ್ರಾಮದ ಸಂದೇಶ ಕುಮಠಳ್ಳಿಯವರ ಜಮೀನಿನಲ್ಲಿ ಬಾಡಿಗೆ (ಲಿಜ್) ಮೂಲಕ ಪಡೆದು ಟ್ಯಾಂಕ್‌ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿ, ಕಾಮಗಾರಿಗಾಗಿ ಭೂಮಿ ಅಗೆದ ಮಣ್ಣನ್ನು ಆ ಜಾಗದ ಮಾಲೀಕರಿಗೆ ನೀಡಲಾಗಿದೆ. ಈ ಕುರಿತು ಸ್ಥಳದ ಮಾಲೀಕರೊಂದಿಗೆ ಕರಾರು ಕೂಡಾ ಮಾಡಲಾಗಿದೆ. ಸ್ಥಳವಕಾಶ ಇಲ್ಲದ ಕಾರಣ ಆ ಮಣ್ಣನ್ನು ಸರ್ಕಾರಿ ಶಾಲೆಯ ಆವರಣದಲ್ಲಿ ಸಂಗ್ರಹಿಸಲಾಗಿತ್ತು. ಈಗ ಆ ಮಣ್ಣನು ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು.ಆದರೆ ಜೂ.23 ರಂದು ರಾಜಕೀಯ ದುರುದ್ದೇಶದಿಂದ ಗ್ರಾಮದ ಯುವ ಮುಖಂಡ ಉಮೇಶ ಪಾಟೀಲರ ಹೆಸರನ್ನು ಕೆಡಿಸಲು ಕೆಲ ಮಾಧ್ಯಮಗಳಲ್ಲಿ ಆಧಾರ ರಹಿತ ಸುದ್ದಿಗಳು ಪ್ರಕಟಿಸಲಾಗಿದೆ. ಅದು ಸತ್ಯಕ್ಕೆ ದೂರವಾಗಿದೆ. ಈ ಕುರಿತು ನಾವು ಬಹಿರಂಗವಾಗಿ ಚರ್ಚೆಗೆ ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮುಖಂಡ ಉಮೇಶ ಪಾಟೀಲ ಮಾತನಾಡಿ, ನನಗೂ ಮತ್ತು ಆ ಮಣ್ಣಿಗೂ ಯಾವುದೇ ಸಂಬಂಧವಿಲ್ಲ. ಕೇವಲ ಆ ಮಣ್ಣು ಎತ್ತಲು ನಮ್ಮ ಜೆಸಿಬಿ ಬಳಕೆ ಮಾಡಲಾಗಿದೆ ಅಷ್ಟೆ. ನನ್ನ ಹೆಸರು ಕೆಡಿಸುತ್ತಿರುವವರ ಮೇಲೆ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.

ಗ್ರಾಪಂಗೆ ಸ್ಥಳ ಲೀಜ್ ನೀಡಿರುವ ಸಂದೇಶ ಕುಮಠಳ್ಳಿ ಮಾತನಾಡಿ, ಸ್ಪಷ್ಟಿಕರಣ ನೀಡಿದರು.ಈ ಸಂದರ್ಭದಲ್ಲಿ ಸದಸ್ಯರಾದ ರಾಜು ಪಾಟೀಲ, ಉಮೇಶ ಪಾಟೀಲ, ಮುಖಂಡರಾದ ಮಹಾದೇವ ಕಾಂಬಳೆ, ಅವಿನಾಶ ಪಾಟೀಲ, ನೀತಿನ ಪಾಟೀಲ, ಬಾಬಾಸಾಬ ತಾರದಾಳೆ, ಉದಯ ದೇಸಾಯಿ ಉಪಸ್ಥಿತರಿದ್ದರು.