.ಅವ್ಯವಸ್ಥೆಯ ಗೂಡಾದ ಎಪಿಎಂಸಿ ಕಾರ್ಯದರ್ಶಿ ನಿವಾಸ

| Published : May 29 2024, 12:47 AM IST

.ಅವ್ಯವಸ್ಥೆಯ ಗೂಡಾದ ಎಪಿಎಂಸಿ ಕಾರ್ಯದರ್ಶಿ ನಿವಾಸ
Share this Article
  • FB
  • TW
  • Linkdin
  • Email

ಸಾರಾಂಶ

ಎಪಿಎಂಸಿ ಕಾರ್ಯದರ್ಶಿ ರವರಿಗೆ ಪಟ್ಟಣದಲ್ಲೆ ವಾಸವಿರಲೇಂದು ಮಾರುಕಟ್ಟೆ ಪ್ರಾಂಗಣದಲ್ಲೆ ಸುಜ್ಜಿತವಾದ ವಸತಿ ನಿಲಯ ನಿರ್ಮಾಣ ಮಾಡಿಕೊಟ್ಟಿದೆ. ಹಲವು ವರ್ಷಗಳಿಂದ ವಸತಿ ಗೃಹವನ್ನು ಬಳಸದೆ ಬಿಟ್ಟಿರುವುದರಿಂದ ವಸತಿ ಗೃಹ ತುಂಬಾ ಶಿಥಿಲವಾಗಿ ವಿಷ ಜಂತುಗಳ ವಾಸ ಸ್ಥಳವಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಆಯಾ ಇಲಾಖೆಯ ಮೇಲಧಿಕಾರಿಗಳು ಕೇಂದ್ರ ಸ್ಥಾನದಲ್ಲೆ ಇದ್ದು ಸಾರ್ವಜನಿಕರಿಗೆ ಸದಾ ಕಾಲ ಲಭ್ಯವಾಗಿರಲೆಂದು ಪ್ರಮುಖ ಇಲಾಖೆ ಅಧಿಕಾರಿಗಳಿಗೆ ವಸತಿ ಗೃಹಗಳನ್ನು ಸರ್ಕಾರ ನಿರ್ಮಾಣ ಮಾಡಿದೆ. ಆದರೆ ಅಧಿಕಾರಿಗಳು ಅವುಗಳಲ್ಲಿ ವಾಸ ಮಾಡದ ಕಾರಣ ಸಾರ್ವಜನಿಕರ ತೆರಿಗೆ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಪಟ್ಟಣದ ಎಪಿಎಂಸಿ ಕಾರ್ಯದರ್ಶಿ ರವರಿಗೆ ಪಟ್ಟಣದಲ್ಲೆ ವಾಸವಿರಲೇಂದು ಮಾರುಕಟ್ಟೆ ಪ್ರಾಂಗಣದಲ್ಲೆ ಸುಜ್ಜಿತವಾದ ವಸತಿ ನಿಲಯ ನಿರ್ಮಾಣ ಮಾಡಿಕೊಟ್ಟಿದೆ. ಪ್ರಾರಂಭದಲ್ಲಿ ಒಂದಿಬ್ಬರು ಕಾರ್ಯದರ್ಶಿಗಳು ಈ ವಸತಿ ನಿಲಯವನ್ನು ಬಳಕೆ ಮಾಡಿದ್ದನ್ನು ಬಿಟ್ಟರೆ ಉಳಿದ ಯಾವ ಕಾರ್ಯದರ್ಶಿಯೂ ಈ ಮನೆಯಲ್ಲಿ ವಾಸ ಮಾಡಿಲ್ಲ. ಹಲವು ವರ್ಷಗಳಿಂದ ವಸತಿ ಗೃಹವನ್ನು ಬಳಸದೆ ಬಿಟ್ಟಿರುವುದರಿಂದ ವಸತಿ ಗೃಹ ತುಂಬಾ ಶಿಥಿಲವಾಗಿ ವಿಷ ಜಂತುಗಳ ವಾಸ ಸ್ಥಳವಾಗಿದೆ. ಕಾರ್ಯದರ್ಶಿ, ನೌಕರರ ಕಟ್ಟಡ ಖಾಲಿ

ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್ ಪ್ರತಿನಿತ್ಯ ಬೆಂಗಳೂರಿನಿಂದ ಬಂದು ಹೋಗುತ್ತಾರೆ. ಆದರೆ ವಸತಿ ಗೃಹವನ್ನು ದುರಸ್ತಿಗೊಳಿಸಿ ಬಳಸುವ ಸಾಹಸಕ್ಕೆ ಕೈಹಾಕಿಲ್ಲ. ಇದೇ ರೀತಿ ಎಪಿಎಂಸಿಯಲ್ಲಿ ಕಾರ್ಯನಿರ್ವಾಹಿಸುವ ನೌಕರರಿಗೆ ನಾಲ್ಕು ಮನೆಗಳನ್ನು ನಿರ್ಮಾಣ ಮಾಡಿದೆ, ಆದರೆ ಇದೂ ಸಹ ಅವ್ಯವಸ್ಥೆಯ ಗೂಡಾಗಿದ್ದು, ಯಾರೂ ಬಳಸಲು ಮುಂದಾಗಿಲ್ಲ. ನಾಲ್ಕರಲ್ಲಿ ಒಬ್ಬರು ಮಾತ್ರ ಬಳಸುತ್ತಿದ್ದಾರೆ. ಉಳಿದ ಮೂರು ಮನೆಗಳು ಖಾಲಿ ಇವೆ. ಮಳೆ ಬಂದರೆ ಮಾಳಿಗೆ ಸೋರುವುದರು,ಸುಣ್ಣ ಬಣ್ಣ ಕಾಣದ ಗೋಡೆಗಳು ಅಲ್ಲಲ್ಲಿ ಸಿಮೆಂಟ್ ಕಂಬಿಗಳು ಕಾಣುತ್ತಿರುವುದರಿಂದ ನೌಕರರು ಇಲ್ಲಿ ವಾಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ.ಕಾರ್ಯದರ್ಶಿಯವರ ವಸತಿ ಗೃಹ ಹಾಗೂ ನೌಕರರ ಮನೆಗಳು ಅವ್ಯವಸ್ಥೆಯಲ್ಲಿರುವ ಬಗ್ಗೆ ಕಾರ್ಯದರ್ಶಿ ಶ್ರೀನಿವಾಸ್ ಗಮನಕ್ಕೆ ಬಂದಿದ್ದರೂ ಸಹ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ದುರಸ್ತಿಗೊಳಿಸಿ ವಾಸ ಮಾಡದೇ ನಮಗೂ ಈ ವಸತಿ ಗೃಹಗಳಿಗೂ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದಾರೆಂದು ಸಾರ್ವಜನಿಕರ ಟೀಕಿಸಿದ್ದಾರೆ.

ಕೇಂದ್ರದಲ್ಲಿ ವಾಸ ಮಾಡುತ್ತಿಲ್ಲ

ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್ ಸಂಸ್ಥೆಯ ಕೋಟ್ಯಂತರ ಬೆಲೆ ಬಾಳುವ ಆಸ್ತಿಯನ್ನು ರಕ್ಷಣೆ ಮಾಡದೆ ನಿರ್ಲಕ್ಷ್ಯ ಮಾಡುತ್ತಿರುವುದು ಇಲಾಖೆಗೆ ನಷ್ಟವಾಗುತ್ತಿದೆ.ಅಲ್ಲದೆ ಕೇಂದ್ರ ಸ್ಥಾನದಲ್ಲೆ ಇರಬೇಕೆಂದು ಸರ್ಕಾರದ ಆದೇಶವಿದ್ದರೂ ಅದನ್ನು ದಿಕ್ಕರಿಸಿ ಬೆಂಗಳೂರಿನಿಂದ ಪ್ರಯಾಣ ಮಾಡುತ್ತಿರುವುದು ಸಕಾಲಕ್ಕೆ ರೈತರು ವರ್ತಕರು ಹಾಗೂ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಗೆ ಸ್ಪಂದನೆ ಸಿಗದಂತಾಗಿದೆ.

ಕೋಟ್‌ ಃ......................

ಪ್ರಸ್ತುತ ಕಾರ್ಯದರ್ಶಿಗಾಗಿ ಮೀಸಲಿಟ್ಟಿರುವ ವಸತಿ ಗೃಹ ಬಳಸಲು ಯೋಗ್ಯವಾಗಿಲ್ಲದ ಕಾರಣ ತಾವು ಬಳಸುತ್ತಿಲ್ಲ, ಈ ಹಿಂದಿನಿಂದಲೂ ಯಾವ ಕಾರ್ಯದರ್ಶಿಯೂ ವಸತಿ ಗೃಹ ದುರಸ್ತಿಗೆ ಮುಂದಾಗದ ಕಾರಣ ಅವ್ಯವಸ್ಥೆಗೆ ತಲುಪಿದೆ.

ಶ್ರೀನಿವಾಸ್, ಎಪಿಎಂಸಿ ಕಾರ್ಯದರ್ಶಿ.