ಕಡವೆ ಕೊಂದ ಬೇಟೆಗಾರರ ಬಂಧನ ೩ ತಿಂಗ್ಳಾದ್ರು ಆಗಿಲ್ಲ!

| Published : Feb 11 2024, 01:50 AM IST

ಕಡವೆ ಕೊಂದ ಬೇಟೆಗಾರರ ಬಂಧನ ೩ ತಿಂಗ್ಳಾದ್ರು ಆಗಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಕಡವೆ ಬೇಟೆಗೆ ಬಂದ ಬೇಟೆಗಾರರು, ಅರಣ್ಯ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಬೇಟೆಗಾರ ಸಾವನ್ನಪ್ಪಿದ್ದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇತರೆ ಏಳೆಂಟು ಮಂದಿ ಬೇಟೆಗಾರರನ್ನು ಬಂಧಿಸಲು ಗುಂಡ್ಲುಪೇಟೆ ಪೊಲೀಸರಿಂದ ಸಾಧ್ಯವಾಗಿಲ್ಲ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಕಡವೆ ಬೇಟೆಗೆ ಬಂದ ಬೇಟೆಗಾರರು, ಅರಣ್ಯ ಸಿಬ್ಬಂದಿ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಬೇಟೆಗಾರ ಸಾವನ್ನಪ್ಪಿದ್ದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಇತರೆ ಏಳೆಂಟು ಮಂದಿ ಬೇಟೆಗಾರರನ್ನು ಬಂಧಿಸಲು ಗುಂಡ್ಲುಪೇಟೆ ಪೊಲೀಸರಿಂದ ಸಾಧ್ಯವಾಗಿಲ್ಲ.ಕಳೆದ ೨೦೨೩ ನ.೫ ರಂದು ಮದ್ದೂರು ವಲಯದ ಮಂಜಿಕಟ್ಟೆ ಬಳಿ ಕಡವೆ ಬೇಟೆಯಾಡಿ, ಸತ್ತ ಕಡವೆ ಹೊತ್ತು ಕೊಂಡು ಹೋಗುವ ಸಮಯದಲ್ಲಿ ಬೇಟೆಗಾರರ ಪ್ರಶ್ನಿಸಿದ ಅರಣ್ಯ ಸಿಬ್ಬಂದಿ ಮೇಲೆ ಬೇಟೆಗಾರರು ಗುಂಡು ಹಾರಿಸಿದಾಗ ಅರಣ್ಯ ಸಿಬ್ಬಂದಿ ಗುಂಡು ಹೊಡೆದಾಗ ಭೀಮನಬೀಡು ಗ್ರಾಮದ ೨೬ ವರ್ಷದ ಮನು ಗುಂಡಿಗೆ ಬಲಿಯಾಗಿದ್ದ. ಬೇಟೆಗಾರರ ಮನು ಸತ್ತ ಬಳಿಕ ಜೊತೆಗಿದ್ದ ಏಳೆಂಟು ಮಂದಿ ಬೇಟೆಗಾರರು ಪರಾರಿಯಾಗಿದ್ದರು. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿಯ ಬೇಟೆಗಾರರ ಬಂಧನವಾಗಿಲ್ಲ ಇದು ಪೊಲೀಸ್‌ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ವೈಪಲ್ಯ ಎತ್ತಿ ತೋರುತ್ತಿದೆ.ಗುಂಡ್ಲುಪೇಟೆ ಪೊಲೀಸರು ಕಡವೆ ಕೊಂದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಆದರೆ ಆರೋಪಿಗಳ ಬಂದೂಕು ವಶ ಪಡಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ. ವನ್ಯಜೀವಿ ಬೇಟೆಯಾಡಿದ ಏಳೆಂಟು ಮಂದಿ ಬೇಟೆಗಾರರ ಬಂಧಿಸಲು ಇರುವ ಅಡ್ಡಿಯೇನು? ಸಣ್ಣ ಪುಟ್ಟ ಪ್ರಕರಣದ ಆರೋಪಿಗಳ ಬಂಧಿಸುವ ಪೊಲೀಸರು ಈ ಪ್ರಕರಣದಲ್ಲಿ ಆರೋಪಿಗಳ ಬಂಧಿಸಲಿ.

ಮದ್ದೂರು ಅರಣ್ಯದಲ್ಲಿ ಕಡವೆ ಬೇಟೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಹುಡುಕಾಟದಲ್ಲಿ ಗುಂಡ್ಲುಪೇಟೆ ಪೊಲೀಸರು ಇದ್ದಾರೆ. ಆರೋಪಿಗಳ ಬಂಧನ ಸದ್ಯದಲ್ಲೇ ಆಗಲಿದೆ.ಲಕ್ಷ್ಮಯ್ಯ,ಡಿಎಸ್‌ಪಿ, ಚಾ.ನಗರ