ಚಿಕ್ಕಮಗಳೂರು ಕಾಫಿನಾಡಿನಲ್ಲಿ ಮಳೆ ಚುರುಕು ಪಡೆದಿದ್ದು, ಮಲೆನಾಡಿನ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಗಾಗಿ ಕಾಯುತ್ತಿದ್ದ ಮಲೆನಾಡಿಗರಿಗೆ ಸುರಿದ ಮಳೆ ಕೊಂಚ ನೆಮ್ಮದಿ ತಂದಿದೆ.
ಶೃಂಗೇರಿ ಗುಡುಗು ಸಿಡಿಲು ಸಹಿತ ಅಬ್ಬರಿಸಿದ ಮಳೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿನಾಡಿನಲ್ಲಿ ಮಳೆ ಚುರುಕು ಪಡೆದಿದ್ದು, ಮಲೆನಾಡಿನ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆಗಾಗಿ ಕಾಯುತ್ತಿದ್ದ ಮಲೆನಾಡಿಗರಿಗೆ ಸುರಿದ ಮಳೆ ಕೊಂಚ ನೆಮ್ಮದಿ ತಂದಿದೆ.ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕಳಸ, ಕೊಪ್ಪ ಸೇರಿದಂತೆ ಮಲೆನಾಡಿನ ವಿವಿಧೆಡೆ ಬೆಳಗ್ಗೆಯಿಂದಲೇ ಮಳೆ ಸುರಿ ಯುತ್ತಿದ್ದು, ಚಿಕ್ಕಮಗಳೂರು ನಗರದಲ್ಲಿಯೂ ನಿರಂತರ ಮಳೆಯಾಗಿದೆ. ಕೆಲವೆಡೆ ನಿರಂತರವಾಗಿ ಸುರಿದ ಮಳೆಯಿಂದ ಕಾಲುವೆ, ಚರಂಡಿ ಹಾಗೂ ರಸ್ತೆಗಳ ಮೂಲಕ ನೀರು ಹರಿಯುತ್ತಿರುವ ದೃಶ್ಯ ಕಂಡುಬಂದಿದೆ.ಮುಂಗಾರು ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಮಲೆನಾಡಿನ ಕಾಫಿ, ಮೆಣಸು ಹಾಗೂ ಅಡಕೆ ಬೆಳೆ ಗಾರರು ಆತಂಕಕ್ಕೆ ಒಳಗಾಗಿದ್ದರು. ಮಳೆಗಾಗಿ ಆಕಾಶದತ್ತ ನೋಡುತ್ತಿದ್ದ ಬೆಳೆಗಾರರಿಗೆ ಸೋಮವಾರದ ಮಳೆ ತುಸು ಆಶಾ ಭಾವ ಮೂಡಿಸಿದೆ. ಮಳೆ ಮುಂದುವರಿದರೆ ಕಾಫಿ ಸೇರಿದಂತೆ ವಿವಿಧ ಬೆಳೆಗಳಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ರೈತರಲ್ಲಿದೆ.ಕಳೆದ ಹಲವು ದಿನಗಳಿಂದ ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ನಡುವೆ ಮಳೆಯ ನಿರೀಕ್ಷೆಯಲ್ಲಿದ್ದ ಮಲೆನಾಡಿನಲ್ಲಿ ಸೋಮವಾರ ವರುಣನ ಆರ್ಭಟ ಕಂಡುಬಂದಿದೆ. ಇದರಿಂದ ರೈತರೊಂದಿಗೆ ಮಲೆನಾಡಿನ ಜನರಲ್ಲಿಯೂ ಸಂತಸ ಮೂಡಿದೆ.ಇನ್ನು ಜಿಲ್ಲೆಯ ಬಯಲುಸೀಮೆ ಪ್ರದೇಶಗಳಾದ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳ ವಿವಿಧೆಡೆ ಮಳೆಯಾಗಿದೆ. ಮುಂಗಾರು ಅವಧಿಯಲ್ಲಿ ಮಳೆ ಕೊರತೆಯಿಂದ ಕಾಫಿ ಸೇರಿದಂತೆ ಮಲೆನಾಡಿನ ಪ್ರಮುಖ ಬೆಳೆಗಳ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದ್ದ ಸಂದರ್ಭದಲ್ಲಿ ಇದೀಗ ಸುರಿಯುತ್ತಿರುವ ಮಳೆ ರೈತರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.-- ಬಾಕ್ಸ್--ಬಾಳೆಹೊನ್ನೂರು ಸುತ್ತಮುತ್ತ ಮಳೆಬಾಳೆಹೊನ್ನೂರು: ಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಬೆಳ್ಳಂಬೆಳಿಗ್ಗೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.ಸೋಮವಾರ ಬೆಳಗ್ಗಿನ ಜಾವದಲ್ಲಿ ಸಾಧರಣ ಪ್ರಮಾಣದಲ್ಲಿ ಆರಂಭವಾಗಿದ್ದ ಮಳೆ, ಬೆಳಿಗ್ಗೆ 7 ಗಂಟೆ ಬಳಿಕ ಬಿರುಸು ಗೊಂಡಿದ್ದು, 10 ಗಂಟೆವರೆಗೂ ಗುಡುಗು ಸಹಿತವಾಗಿ ಧಾರಾಕಾರವಾಗಿ ಸುರಿದಿದೆ. ಕಳೆದ ಹಲವು ದಿನಗಳಿಂದ ಬಿಸಿಲಿನ ಬೇಗೆಯಲ್ಲಿದ್ದ ಜನರಿಗೆ ಧಾರಾಕಾರ ಮಳೆ ಸುರಿದಿರುವುದು ತಂಪು ನೀಡಿದ್ದು, ಪ್ರಮುಖವಾಗಿ ಭತ್ತ, ಕಾಫಿ, ಅಡಕೆಗೆ ವರದಾನವಾಗಿದೆ.-- ಬಾಕ್ಸ್--
ಶೃಂಗೇರಿ ಗುಡುಗು ಸಿಡಿಲು ಸಹಿತ ಅಬ್ಬರಿಸಿದ ಮಳೆಶೃಂಗೇರಿ: ತಾಲೂಕಿನಾದ್ಯಂತ ಸೋಮವಾರ ಗುಡುಗು ಸಿಡಿಲಿನ ಆರ್ಭಟದೊಂದಿದೆ ಮಳೆ ಅಬ್ಬರಿಸಿತು. ಭಾನುವಾರ ರಾತ್ರಿಯಿಂದ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಬೆಳಗಿನವರೆಗೂ ಒಂದೇ ಸಮನೆ ಧಾರಾಕಾರವಾಗಿ ಸುರಿಯಿತು.ಬೆಳಿಗ್ಗೆಯೂ ಮಳೆ ಅಬ್ಬರ ಮುಂದುವರಿದು ಮಳೆ ರಭಸಕ್ಕೆ ರಸ್ತೆ ಮೇಲೆಲ್ಲಾ ಚರಂಡಿ,ಕೆರೆಯಂತೆ ನೀರು ಉಕ್ಕಿ ಹರಿದಿದೆ. ಶೃಂಗೇರಿ ಪಟ್ಟಣದಲ್ಲಿ ಬೆಳಿಗ್ಗೆಯಿಂದಲೂ ಎಡಬಿಡದೆ ಮಳೆ ಸುರಿದು ಪ್ರವಾಸಿಗರು ಪರದಾಡುತ್ತಿರುವುದು ಕಂಡು ಬಂದಿತು.
ನವರಾತ್ರಿ ಉತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು ಪ್ರತೀ ವರ್ಷದಂತೆ ಈ ವರ್ಷ ಮಳೆರಾಯ ಮುಂಚಿತವಾಗಿ ಅಬ್ಬರಿಸಲು ಆರಂಭಿಸಿದೆ. ಅಡಕೆ ಕೊಯಿಲು ಆರಂಭಗೊಂಡಿದೆ ಬೆಳೆಗಾರರಲ್ಲಿ ಫಜೀತಿ ಎದುರಾಗಿದೆ. ಗುಡುಗು ಸಿಡಿಲಿನ ಆರ್ಭಟದಿಂದ ವಿದ್ಯುತ್, ಮೊಬೈಲ್ ನೆಟ್ ವರ್ಕ್ ನಲ್ಲಿ ವ್ಯತ್ಯಯ ಉಂಟಾಗಿತ್ತು. ಗ್ರಾಮೀಣ ಪ್ರದೇಶಗಳಾದ ಮೆಣಸೆ, ಕಿಗ್ಗಾ, ಕೆರೆಕಟ್ಟೆ,ನೆಮ್ಮಾರು,ಬೇಗಾರು, ಕೂತಗೋಡು ಸೇರಿದಂತೆ ಎಲ್ಲೆಡೆ ರಾತ್ರಿಯಿಂದ ಬೆಳಗಿನವರೆಗೂ ಮಳೆ ಅಬ್ಬರಿಸಿತು.5 ಶ್ರೀ ಚಿತ್ರ 2-ಶೃಂಗೇರಿ ಪಟ್ಟಣದ ಶ್ರೀ ಮಠದ ಎದುರು ಸೋಮವಾರ ಬೆಳಿಗ್ಗೆ ಸುರಿದ ಭಾರೀ ಮಳೆಯಿಂದ ಪ್ರವಾಸಿಗರ ಪರದಾಡ