ಆಯುಧಪೂಜೆ ವ್ಯಾಪಾರ ಬಲುಜೋರು

| Published : Oct 01 2025, 01:00 AM IST

ಸಾರಾಂಶ

ಆಯುಧ ಪೂಜೆಯ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಮಹಾವೀರವೃತ್ತ ಹಾಗೂ ಸುತ್ತಮುತ್ತ ವ್ಯಾಪಾರ ಜೋರಾಗಿಯೇ ನಡೆದರೂ ಪ್ರಮುಖವಾಗಿ ಖರೀದಿ ಮಾಡುವ ಬೂದುಕುಂಬಳ, ನಿಂಬೆಹಣ್ಣು, ಹೂವು ಸೇವಂತಿಗೆ, ಬಾಳೆದೆಲೆಗೆ ಭಾರೀ ಬೇಡಿಕೆ ಕಂಡುಬಂದಿತು. ಒಂದು ಬೂದುಕುಂಬಳಕಾಯಿಗೆ ೫೦ರಿಂದ ೧೦೦ ರು.ಗಳಿಗೆ ಮಾರಾಟ ಮಾಡಲಾಯಿತು. ಇನ್ನು ಪುಟ್ಬಾಳೆ ಕೇಜಿಗೆ ೧೦೦ರಿಂದ ೧೫೦ ರು.ಗಳಿತ್ತು. ಬೆಲೆಗಳಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಉಳಿದಂತೆ ಹಬ್ಬದ ವ್ಯಾಪಾರ ಜೋರಾಗಿಯೇ ನಡೆಯಿತು.

ಕನ್ನಡಪ್ರಭ ವಾರ್ತೆ ಹಾಸನ

ಆಯುಧ ಪೂಜೆಯ ಹಬ್ಬದ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಮಹಾವೀರವೃತ್ತ ಹಾಗೂ ಸುತ್ತಮುತ್ತ ವ್ಯಾಪಾರ ಜೋರಾಗಿಯೇ ನಡೆದರೂ ಪ್ರಮುಖವಾಗಿ ಖರೀದಿ ಮಾಡುವ ಬೂದುಕುಂಬಳ, ನಿಂಬೆಹಣ್ಣು, ಹೂವು ಸೇವಂತಿಗೆ, ಬಾಳೆದೆಲೆಗೆ ಭಾರೀ ಬೇಡಿಕೆ ಕಂಡುಬಂದಿತು.

ಸೇವಂತಿಗೆ ಹೂ ಮಾರಿಗೆ ೧೦೦ರಿಂದ ೧೨೦ ರು.ಗಳಿದ್ದರೆ, ನಿಂಬೆ ಹಣ್ಣು ಎರಡಕ್ಕೆ ೧೦ ರು. ಗಳಿತ್ತು. ಮಾವಿನಸೊಪ್ಪು ಒಂದು ಕಟ್ಟಿಗೆ ೨೦ ರು. ಗಳಿತ್ತು. ಸೇಬು ಒಂದು ಕೆಜಿಗೆ ೧೦೦ರಿಂದ ೧೫೦ ರು.ಗಳಿತ್ತು. ಈ ಬಾರಿ ಬೂದುಕುಂಬಳಕಾಯಿ ಕೇಜಿಗೆ ೩೦, ೨೦ ರು. ಗಳಿಗೆ ಮಾರಾಟ ಮಾಡುತ್ತಿದ್ದರು. ಒಂದು ಬೂದುಕುಂಬಳಕಾಯಿಗೆ ೫೦ರಿಂದ ೧೦೦ ರು.ಗಳಿಗೆ ಮಾರಾಟ ಮಾಡಲಾಯಿತು. ಇನ್ನು ಪುಟ್ಬಾಳೆ ಕೇಜಿಗೆ ೧೦೦ರಿಂದ ೧೫೦ ರು.ಗಳಿತ್ತು. ಬೆಲೆಗಳಲ್ಲಿ ಎಷ್ಟೇ ವ್ಯತ್ಯಾಸವಿದ್ದರೂ ಉಳಿದಂತೆ ಹಬ್ಬದ ವ್ಯಾಪಾರ ಜೋರಾಗಿಯೇ ನಡೆಯಿತು.