ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರಜಾಪ್ರಭುತ್ವದಲ್ಲಿ ಏಕತೆ ಮತ್ತು ಸಮಾನತೆ ಅಳವಡಿಸಿರುವುದರಿಂದ ಭಾರತವು ಬಲಿಷ್ಠ ಹಾಗೂ ಶ್ರೇ ಷ್ಠ ಪ್ರಜಾಪ್ರಭುತ್ವ ಹೊಂದಿದ ದೇಶ ಎನ್ನುವ ಹಿರಿಮೆಗೆ ಪಾತ್ರವಾಗಿದೆ ಎಂದು ಸಮಾಜ ವಿಜ್ಞಾನ ಶಿಕ್ಷಕಿ ಶೈಲಾ ಯಳಮಲಿ ಹೇಳಿದರು.ಬೆಳಗಾವಿ ಗ್ರಾಮೀಣ ತಾಲೂಕಿನ ಮುತ್ನಾಳ ಗ್ರಾಮದ ರವಿರಾಜ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಎಂಜನಿಯರ್‌ಗಳ ದಿನಾಚರಣೆಯಲ್ಲಿ ನನ್ನ ಮತ ನನ್ನ ಹಕ್ಕು ಕುರಿತು ಉಪನ್ಯಾಸ ನೀಡಿದ ಅವರು, ನಮ್ಮ ಸಂವಿಧಾನದ ಸೌಂದರ್ಯವೇ ಮತದಾನದ ಹಕ್ಕು. ನನ್ನ ಮತ ನನ್ನ ಹಕ್ಕು ಎಂಬ ಧ್ಯೇಯದೊಂದಿಗೆ ನನ್ನ ಮತವನ್ನು ಯಾರಿಗೂ ಮಾರಿಕೊಳ್ಳದೇ ಮತದಾನ ಮಾಡುವ ಮೂಲಕ ನಮ್ಮ ಹಕ್ಕು ಚಲಾಯಿಸಬೇಕು. ಹೀಗಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ನಿಮ್ಮ ಮನೆಯಲ್ಲಿ ಮತದಾನ ಹಕ್ಕು ಪಡೆದಿರುವ ಮನೆಯವರಿಗೆ ಹಾಗೂ ಗ್ರಾಮದ ಹಿರಿಯರಿಗೆ ತಪ್ಪದೇ ಮತ ಚಲಾಯಿಸುವಂತೆ ಪ್ರೇರೆಪಿಸಬೇಕು ಎಂದು ಸಲಹೆ ನೀಡಿದರು.ಇದೇ ವೇಳೆ ಮತದಾನ ಮಾಡುವ ಹಾಗೂ ಮಾಡಿಸುವ ಮತದಾನ ಪ್ರಮಾಣ ವಚನವನ್ನು ಬೋಧನೆ ಮಾಡಲಾಯಿತು.ಮುಖ್ಯೋಪಾಧ್ಯಯರಾದ ಅಶೋಕ ಕೋಳಮುಸ್ಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವೇಶ್ವರಯ್ಯನವರ ಜೀವನ ಮತ್ತು ಸಾಧನೆ ಹಾಗೂ ಪ್ರಜಾಪ್ರಭುತ್ವದ ಯಶಸ್ವಿಗೆ ನಿಮ್ಮ ಕೊಡುಗೆಗಳ ಕುರಿತಾಗಿ ಅಧ್ಯಕ್ಷೀಯ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ಶಾಲೆ ಶಿಕ್ಷಕ್ಷಿಯರಾದ ಸುಮಂಗಲಾ ಹೆಬ್ಬಳ್ಳಿ, ಛಾಯಾ ಎನ್.ಶೆಟ್ಟಿ, ಕು.ಅಂಜನಾ ಕಾಂಬಳೆ, ಕು.ಕವಿತಾ ದಳವಾರ ಸೇರಿದಂತೆ ಎಸ್‌ಡಿಎಂಸಿ ಸರ್ವ ಸದಸ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಬಿ.ಎಂ.ಇಳಗೇರ ಸ್ವಾಗತಿಸಿದರು. ಶಿಕ್ಷಕಿ ಆಶಾ ಎಫ್.ಪಾಟೀಲ ನಿರೂಪಿಸಿದರು. ಶಿಕ್ಷಕಿ ಸುನಿತಾ ತೊರಸೆ ವಂದಿಸಿದರು.ನನ್ನ ಮತ ನನ್ನ ಹಕ್ಕು ಎಂಬ ಧ್ಯೇಯದೊಂದಿಗೆ ನನ್ನ ಮತವನ್ನು ಯಾರಿಗೂ ಮಾರಿಕೊಳ್ಳದೇ ಮತದಾನ ಮಾಡುವ ಮೂಲಕ ನಮ್ಮ ಹಕ್ಕು ಚಲಾಯಿಸಬೇಕು. ಹೀಗಾಗಿ ಪ್ರತಿಯೊಬ್ಬರೂ ಮತದಾನ ಮಾಡಬೇಕು. ನಿಮ್ಮ ಮನೆಯಲ್ಲಿ ಮತದಾನ ಹಕ್ಕು ಪಡೆದಿರುವ ಮನೆಯವರಿಗೆ ಹಾಗೂ ಗ್ರಾಮದ ಹಿರಿಯರಿಗೆ ತಪ್ಪದೇ ಮತ ಚಲಾಯಿಸುವಂತೆ ಪ್ರೇರೆಪಿಸಬೇಕು.
-ಶೈಲಾ ಯಳಮಲಿ, ಸಮಾಜ ವಿಜ್ಞಾನ ಶಿಕ್ಷಕಿ.