ಗೀತೆಯು ನಾವೆಲ್ಲ ಒಂದೇ ಎನ್ನುವ ಚಿಂತನೆ ನೀಡುವುದರ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸುತ್ತದೆ ಎಂದು ಭಗವದ್ಗೀತಾ ಅಭಿಯಾನ ಸಂಚಾಲಕ ರಾಮಚಂದ್ರ ಹೆಗ್ಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಗೀತೆಯು ನಾವೆಲ್ಲ ಒಂದೇ ಎನ್ನುವ ಚಿಂತನೆ ನೀಡುವುದರ ಮೂಲಕ ಸಾಮಾಜಿಕ ಸಾಮರಸ್ಯ ಮೂಡಿಸುತ್ತದೆ ಎಂದು ಭಗವದ್ಗೀತಾ ಅಭಿಯಾನ ಸಂಚಾಲಕ ರಾಮಚಂದ್ರ ಹೆಗ್ಡೆ ಹೇಳಿದರು.ಪಟ್ಟಣದ ರಾಘವೇಂದ್ರಮಠದ ಧಾರ್ಮಿಕ ಭವನದಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾಸ್ವರ್ಣವಲ್ಲೀ ಸಂಸ್ಥಾನ ಶಿರಸಿ (ಉ.ಕ) ಮತ್ತು ಶ್ರೀ ಭಗವದ್ಗೀತಾ ಅಭಿಯಾನ ತಾಲೂಕು ಸಮಿತಿ ಹಾಗೂ ರಾಘವೇಂದ್ರ ಮಠದ ಸಹಯೋಗದಲ್ಲಿ ಆಯೋಜಿಸಿರುವ ಗೀತಾ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೀವನದ ಪ್ರತಿಯೊಂದು ಸುಖ- ದುಃಖಗಳಿಗೆ ಗೀತೆಯಲ್ಲಿ ಉತ್ತರವಿದೆ. ಕಲೆ ಮತ್ತು ವಿಜ್ಞಾನ ಸದೃಶವಾದ ಅಂಶಗಳು ಅಡಕವಾಗಿದೆ. ಮನೆಯ ಮತ್ತು ಸುತ್ತ ಮುತ್ತಲಿನ ಪರಿಸರದಲ್ಲಿ ಧರ್ಮ ಮಾರ್ಗದ ಸುವಾಸನೆ ಪಸರಿಸುತ್ತ ಇರಬೇಕು ಎಂದರು. ಭಾರತವು ಜ್ಞಾನ, ವಿಜ್ಞಾನ, ಆವಿಷ್ಕಾರ, ಮಾನವೀಯತೆ, ಸಂಸ್ಕಾರ, ಗುರುಕುಲ ಶಿಕ್ಷಣ ಇತ್ಯಾದಿ ವಿಚಾರಗಳ ಮೇಲೆ ಸ್ವಾವಲಂಬನೆ ಸಾಧಿಸಿಕೊಂಡು ಬಂದಿದೆ. ಅದಕ್ಕೆ ವಿಶ್ವದ ಬೇರೆ ದಾರ್ಶನಿಕರಿಂದ ಮನ್ನಣೆ ಪಡೆದಿದೆ. 2007ರಿಂದ ಸ್ವರ್ಣವಲ್ಲೀ ಸಂಸ್ಥಾನದ ಯತೀವರೇಣ್ಯರಾದ ಗಂಗಾಧರೇಂದ್ರ ಮಹಾಸ್ವಾಮೀಜಿಗಳು ಭಗವದ್ಗೀತಾ ಅಭಿಯಾನವನ್ನು ನಾಡಿನಾದ್ಯಂತ ಆರಂಭಿಸಿರುತ್ತಾರೆ. ನಾವೆಲ್ಲ ಅದರ ಪ್ರಯೋಜನ ಪಡೆದುಕೊಳ್ಳೋಣ ಎಂದರುಪ್ರಶಿಕ್ಷಕಿ ಪ್ರಭಾ ಹೆಬ್ಬಾರ ಮಾತನಾಡಿ, ಭಗವದ್ಗೀತೆ ಕೃಷ್ಣ ಅರ್ಜುನರ ನಡುವೆ ನಡೆದ ಸಂದೇಶದಂತೆ ಕಂಡರೂ ಇಲ್ಲಿ ಕೃಷ್ಣಾ ಗುರುವಾಗಿಯೂ ಅರ್ಜುನ ಶಿಷ್ಯನಾಗಿಯೂ ಎಷ್ಟೇ ಯುದ್ಧ ವಿದ್ಯೆ ಪರಿಣತಿ ಹೊಂದಿದ್ದರೂ, ಮಹಾಭಾರತ ಯುದ್ಧ ಕಾಲದಲ್ಲಿ ಉಂಟಾದ ಮಾನಸಿಕ ಸಮಸ್ಯೆಗಳಿಗೆ ಅರ್ಥಾತ್ ಅರ್ಜುನನ ಧರ್ಮದ ರಕ್ಷಣೆ ಒಬ್ಬರಿಗೆ ಸೀಮಿತವಾಗಿಲ್ಲ. ಸನಾತನ ಸಂಸ್ಕೃತಿ ಬೆಳೆಸಿ, ಉಳಿಸಿ ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಪ್ರತಿಯೊಬ್ಬನ ಜವಾಬ್ದಾರಿ ಅಡಕವಾಗಿದೆ ಎಂದು ಹೇಳಿದರು.
ಅರ್ಚಕ ಗುರು ರಾಜರಾಜ ಪುರೋಹಿತ, ಅಭಿಯಾನ ಸಮಿತಿ ಅಧ್ಯಕ್ಷ ಶ್ರೀಶೈಲ ದೊಡಮನಿ, ಕಾರ್ಯದರ್ಶಿ ರವೀಂದ್ರ ಬಿರಾದಾರ, ಸರಸ್ವತಿ ಕುಲಕರ್ಣಿ, ಲಕ್ಷ್ಮೀ ನಲವಡೆ, ರತ್ನಾ ನಾವಡ, ಪ್ರಶಿಕ್ಷಕಿ ರಂಜಿತಾ ಭಟ್ಟ, ಬಾಳು ಗಿಂಡಿ, ಸರೋಜಿನಿ ದೇವೂರ, ಶ್ರೀಮತಿ ಪದಕಿ, ಗೋದಾವರಿ ಕುಲಕರ್ಣಿ, ನಿವೃತ್ತ ಶಿಕ್ಷಕಿ ಲಕ್ಷ್ಮೀಬಾಯಿ ತಾಡಪತ್ರೆ ಸೇರಿದಂತೆ ಇತರರು ಹಾಜರಿದ್ದರು.