ಈದ್‌ ಮೆರವಣಿಗೆಗೆ ಸ್ವಾಗತ ಕೋರಿದ ಬಿಜೆಪಿಗರು

| Published : Sep 17 2024, 12:56 AM IST

ಸಾರಾಂಶ

ಬೀದರ್‌ನಲ್ಲಿ ನಡೆದ ಈದ ಮೆರವಣಿಗೆಯಲ್ಲಿ ಬಿಜೆಪಿ ಮುಖಂಡರು ಪಾಲ್ಗೊಂಡಿರುವುದಕ್ಕೆ ಅವರಿಗೆ ಶಾಲು ಹಾಕಿ ಸನ್ಮಾನಿಸಲಾಯಿತು.

ಬೀದರ್‌: ನಗರದಲ್ಲಿ ಸೋಮವಾರ ಜರುಗಿದ ಈದ್ ಮಿಲಾದ್ ಹಬ್ಬದ ನಿಮಿತ್ತ ಬೀದರ್‌ನ ಅನೇಕ ಹಿರಿಯ ಬಿಜೆಪಿ ಮುಖಂಡರು ಮೆರವಣಿಗೆಗೆ ಹೂ ಸುರಿಯುವ ಮೂಲಕ ಬರ ಮಾಡಿಕೊಂಡು, ಬೀದರ್ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಹೋದರತೆ ಸಾರಿದ ಪ್ರಸಂಗ ಜರುಗಿತು.

ನಗರದಲ್ಲಿ ಸೋಮವಾರ ಬೆಳಗ್ಗೆ ನಗರದ ಗಾವಾನ ವೃತ್ತದಿಂದ ಆರಂಭಗೊಂಡ್ ಪೈಗಂಬರ್ ಜನ್ಮ ದಿನಾಚರಣೆ ಮೆರವಣಿಗೆಯು ನಗರದ ಶಾಹ ಗಂಜ ಕಮಾನ ಬಳಿ ಬರುತ್ತಲೆ ಕಮಾನ ಬಳಿ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ನಂದಕಿಶೋರ ವರ್ಮಾ, ಮಾಜಿ ನಗರ ಸಭೆ ಸದಸ್ಯ ಸೂರ್ಯಕಾಂತ ಶೆಟಕಾರ, ಮುಖಂಡರಾದ ಕಾಶಿನಾಥ ಶೆಲ್ವಂತ್, ಚಂದ್ರಶೇಖರ ಗಾದಾ, ಬಿಜೆಪಿ ವಾರ್ಡ ಅಧ್ಯಕ್ಷ ಪ್ರಕಾಶ್ ನಂದಗೌಳಿ, ವಿಶಾಲ ನಂದಗೌಳಿ, ಸಿದ್ರಾಮ ತಂಬಾಕೆ, ನವೀನ್ ಪಾಜಿ, ಅಲ್ಲದೇ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಮುದಸ್ಸರ್ ಅಹಮದ್ , ಉಪಾಧ್ಯಕ್ಷ ಎಂಡಿ ಇಮ್ರಾನ್, ಅಮೀರ ಖುಸ್ರೋ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಗಫಾರ್ ಪಾಷಾ, ಕಾರ್ಯದರ್ಶಿ ಸೈಯದ್ ಸೋಹೆಲ್ ಮತ್ತಿತರರು ಪಾಲ್ಗೊಂಡು ಬೀದರ್ ನಗರದಲ್ಲಿ ನಾವೇಲ್ಲರು ಸಹೋದರತೆಯಿಂದ ಶಾಂತಿಯುತವಾಗಿ ಜೀವನ ಸಾಗಿಸೋಣ ಎಂದು ಹೇಳಿ ಹೂ ಮಳೆ ಸುರಿದರು.