ಡಾ. ಜಿ.ಜೆ. ಮೆಹಂದಳೆ ಅವರು ಭಾರತ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಕುರಿತು ರಚಿಸಿರುವ “ಸ್ವಾತಂತ್ರ್ಯ ಸೇನಾನಿಗಳು 500” ಪುಸ್ತಕ ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶಿ ಹೊತ್ತಿಗೆಯಾಗಿದೆ ಎಂದು ಪತ್ರಕರ್ತ ಸಂತೋಷ ಗುಡಿಮನಿ ಹೇಳಿದ್ದಾರೆ.
- ಡಾ. ಜಿ.ಜೆ. ಮೆಹಂದಳೆ ವಿರಚಿತ ಕೃತಿ ಬಿಡುಗಡೆಗೊಳಿಸಿ ಸಂತೋಷ- - - ಹರಿಹರ: ಡಾ. ಜಿ.ಜೆ. ಮೆಹಂದಳೆ ಅವರು ಭಾರತ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿ ಕುರಿತು ರಚಿಸಿರುವ “ಸ್ವಾತಂತ್ರ್ಯ ಸೇನಾನಿಗಳು 500” ಪುಸ್ತಕ ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶಿ ಹೊತ್ತಿಗೆಯಾಗಿದೆ ಎಂದು ಪತ್ರಕರ್ತ ಸಂತೋಷ ಗುಡಿಮನಿ ಹೇಳಿದರು.
ಮಂಗಳವಾರ ನಗರದ ಶಿವಮೊಗ್ಗ-ಹೊಸಪೇಟೆ ರಸ್ತೆಯ ಪಕ್ಕದ ಕಸಬಾ ಗ್ರಾಮ ದೇವತಾ ವಾಣಿಜ್ಯ ಮಳಿಗೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ, ಡಾ. ಜಿ.ಜೆ. ಮೆಹಂದಳೆ ಅವರು, ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ವೀರಮರಣವನ್ನಪ್ಪಿದ ಹಾಗೂ ಹೋರಾಟದಲ್ಲಿ ಭಾಗಿಯಾಗಿದ್ದ 500 ಜನರ ಮಾಹಿತಿಯನ್ನು ಒಳಗೊಂಡ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಡಾ. ಮೆಹಂದಳೆ ನೀಡಿರುವ ಮಾಹಿತಿ ಪ್ರಕಾರ, ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ಮಾಡಿದವರಲ್ಲಿ ಕೆಲವೇ ಕೆಲವು ವ್ಯಕ್ತಿಗಳ ಹೆಸರು ಮಾತ್ರ ಎಲ್ಲರಿಗೂ ಗೊತ್ತಿರುತ್ತದೆ. ನಮ್ಮ ಊರಿನಲ್ಲಿಯೇ ಅಂದು ನಡೆದ ಸಂಗ್ರಾಮದಲ್ಲಿ ಹೋರಾಡಿ ಮಡಿದವರ ಮಾಹಿತಿ ನಮಗೇ ಸಿಕ್ಕಿರುವುದಿಲ್ಲ. ಸದ್ಯ 500 ಹೋರಾಟಗಾರರ ಮಾಹಿತಿಯಲ್ಲಿ, ಮುಂದಿನ ಪುಸ್ತಕದಲ್ಲಿ ರಾಜ್ಯದ ಎಲ್ಲ ಊರಲ್ಲಿ ಇದ್ದ ಹೋರಾಟಗಾರರ ಸಮಗ್ರ ಮಾಹಿತಿಯನ್ನು ಅವರು ಸಂಗ್ರಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಪರಕೀಯರ ಕಪಿಮುಷ್ಠಿಯಲ್ಲಿದ್ದ ಭಾರತ ಮಾತೆಯನ್ನು ಸ್ವತಂತ್ರಗೊಳಿಸುವುದಕ್ಕಾಗಿ ನಡೆದ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮವರೆನಿಸಿದ ಅಪಾರ ದೇಶಪ್ರೇಮಿಗಳ ತ್ಯಾಗ, ಬಲಿದಾನದಿಂದ ಇಂದು ಭಾರತ ಸ್ವಾತಂತ್ರ್ಯದಿಂದ ಕಂಗೊಳಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಮಡಿದವರ ಮಾಹಿತಿಯನ್ನು ಡಾ. ಜಿ.ಜೆ. ಮೆಹಂದಳೆ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಸರ್ವರೂ ಈ ಕೃತಿ ಓದಿದರೆ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಅರಿವು ಮೂಡುತ್ತದೆ ಎಂದರು.ಪುಸ್ತಕ ಕರ್ತೃ ಡಾ. ಜಿ.ಜೆ ಮೆಹಂದಳೆ ಮಾತನಾಡಿ, ಪುಸ್ತಕ ರಚನೆಗೆ ಸಹಕರಿಸಿದ ಸ್ವಾತಂತ್ರ್ಯ ಹೊರಾಟಗಾರರ ಬಂಧುಗಳನ್ನು, ಮಾಹಿತಿ ನೀಡಿದವರನ್ನು, ಧಾರವಾಡ, ಮೈಸೂರು, ಬೆಂಗಳೂರು ವಿಶ್ವವಿದ್ಯಾಲಯಗಳ ಅಧಿಕಾರಿಗಳನ್ನು, ಸರ್ಕಾರಿ ಕಚೇರಿಗಳ ಅಧಿಕಾರಿಗಳ ಸಹಕಾರವನ್ನು ಸ್ಮರಿಸಿದರು.
ಪತ್ರಕರ್ತರಾದ ಸಾಬ್ಜಾನ ಇಟಗಿ, ಎಂ.ಎಸ್. ಆನಂದಕುಮಾರ, ಆರ್.ಮಂಜಣ್ಣ, ಯಮನೂರು, ಅಣ್ಣಪ್ಪ ಲೋಕಿಕೆರೆ, ಆರ್.ಎಲ್. ಯೋಗೇಶ್, ಸಮಾಜ ಸೇವಕ ಜಿ.ಪಿ. ಸಂಜುಗೌಡ ಇತರರಿದ್ದರು.- - -
-3ಎಚ್.ಆರ್.ಆರ್1:ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ವೀರಮರಣವನ್ನಪ್ಪಿದ ಹಾಗೂ ಹೋರಾಟದಲ್ಲಿ ಭಾಗಿಯಾಗಿದ್ದ 500 ಜನರ ಮಾಹಿತಿ ಒಳಗೊಂಡ ಸ್ವಾತಂತ್ರ್ಯ ಸೇನಾನಿಗಳು ಕೃತಿಯನ್ನು ಬಿಡುಗಡೆಗೊಳಿಸಲಾಯಿತು.