ಸಾರಾಂಶ
The campers should adopt the ideals of Basavanna.
- ಎನ್‌ಎಸ್‌ಎಸ್ ಶಿಬಿರದ ಸಮಾರೋಪದಲ್ಲಿ ಡಾ.ತಾಂದಳೆಕನ್ನಡಪ್ರಭ ವಾರ್ತೆ, ಬಸವಕಲ್ಯಾಣ
ಶಿಬಿರಾರ್ಥಿಗಳು ಬಸವಣ್ಣನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಬೀದರ್‌ನ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಎಂ.ಕೆ.ತಾಂದಳೆ ಕರೆ ನೀಡಿದರು.ಅವರು ಮೇ 17 ರಿಂದ 23ರ ವರೆಗೆ ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರ್ ವತಿಯಿಂದ ನಡೆಯುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಸಮಾರೋಪವನ್ನು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪಶು ಹಾಗೂ ಮೀನುಗಾರಿಕೆ ವಿಶ್ವ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಬಸವರಾಜ ಭತ್ಮುರಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಜೀವನದ ಮೌಲ್ಯಗಳನ್ನು ಶಿಬಿರಾರ್ಥಿಗಳು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.ಅನುಭವ ಮಂಟಪದ ಮಹಾಲಿಂಗೇಶ್ವರ ಸ್ವಾಮಿ, ಭಾಲ್ಕಿ ಹಿರೇಮಠದ ಶ್ರೀಗಳು ಹಾಗೂ ಗುರುಬಸಪ್ಪನವರ ಸಾನಿಧ್ಯದಲ್ಲಿ ಕಾರ್ಯಕ್ರಮ ಜರಗಿತು. ವಿಶೇಷ ಶಿಬಿರದಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಸ್‌ಎಸ್ ನಾಗರಾಳೆ, ವಾಣಿಜ್ಯ ತೆರಿಗೆ ಇಲಾಖೆ ಕಲಬುರಗಿಯ ಸಹಾಯಕ ಆಯುಕ್ತರಾದ ಮಹೇಶ ಪಾಟೀಲ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ.ಶ್ರೀಕಾಂತ್ ಕುಲಕರ್ಣಿ, ಎನ್‌ಎಸ್‌ಎಸ್ ಸಂಯೋಜಕರಾದ ಡಾ.ಚನ್ನಪ್ಪಗೌಡ ಬಿರಾದರ ಉಪಸ್ಥಿತರಿದ್ದರು.
ಶಿಬಿರದ ಅಂಗವಾಗಿ ಖಾನಾಪುರವಾಡಿ ಮತ್ತು ನೀಲಕಂಠವಾಡಿಯಲ್ಲಿ ಪಶು ಆರೋಗ್ಯ ಶಿಬಿರ ಮತ್ತು ಮಹಿಳೆಯರಲ್ಲಿ ರಕ್ತ ಹೀನತೆಯ ಬಗ್ಗೆ ಅರಿವು ಮೂಡಿಸಲಾಯಿತು. ಮುಡಬಿ ಗ್ರಾಮದಲ್ಲಿ ಆರೋಗ್ಯ ಶಿಬಿರ ಮತ್ತು ಪಶು ಆರೋಗ್ಯದ ಲಸಿಕಾ ಕಾರ್ಯಕ್ರಮ ಮತ್ತು ಬೀದಿ ನಾಟಕ ಆಯೋಜಿಸಲಾಗಿತ್ತು.----