ಛಲವಾದಿ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ

| Published : Mar 14 2024, 02:06 AM IST

ಸಾರಾಂಶ

ಮಧ್ಯ ಕರ್ನಾಟಕದಲ್ಲಿ ಛಲವಾದಿ ಸಮಾಜಕ್ಕೆ ರಾಜಕೀಯವಾಗಿ ಪ್ರಾಧಾನ್ಯತೆ ಸಿಕ್ಕಿಲ್ಲ. ನಮ್ಮ ಜನಾಂಗದಲ್ಲಿಯೇ ಕೆಲವರು ಗುರುಪೀಠಕ್ಕೆ ವಿರೋಧವಾಗಿದ್ದಾರೆ.

ಚಿತ್ರದುರ್ಗ: ಮಧ್ಯ ಕರ್ನಾಟಕದಲ್ಲಿ ಛಲವಾದಿ ಜನಾಂಗಕ್ಕೆ ರಾಜಕೀಯ ಪ್ರಾತನಿಧ್ಯ ಸಿಕ್ಕಿಲ್ಲವೆಂದು ಸಮಾಜದ ಮುಖಂಡ ಜಿ.ಇ.ಮಂಜುನಾಥ್ ನೋವು ತೋಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಲವಾದಿ ಜನಾಂಗವೆಂದರೆ ತ್ಯಾಗ, ಸ್ವಾಭಿಮಾನದ ಸಂಕೇತ. ಭೀಮಸಮುದ್ರದಲ್ಲಿ ಕೆರೆ ಕಟ್ಟಿದವರು ನಮ್ಮ ಸಮಾಜದವರು. ಛಲವಾದಿ ಗುರುಪೀಠ ಆರಂಭಗೊಂಡು 22 ವರ್ಷಗಳಾಗಿದ್ದರು ಬೇರೆ ಮಠಗಳಂತೆ ನಮ್ಮ ಮಠ ಬಲಿಷ್ಠವಾಗಿ ಬೆಳೆದಿಲ್ಲವೆನ್ನುವ ಕೊರಗಿದೆ. ಮಧ್ಯ ಕರ್ನಾಟಕದಲ್ಲಿ ಛಲವಾದಿ ಸಮಾಜಕ್ಕೆ ರಾಜಕೀಯವಾಗಿ ಪ್ರಾಧಾನ್ಯತೆ ಸಿಕ್ಕಿಲ್ಲ. ನಮ್ಮ ಜನಾಂಗದಲ್ಲಿಯೇ ಕೆಲವರು ಗುರುಪೀಠಕ್ಕೆ ವಿರೋಧವಾಗಿದ್ದಾರೆ ಎಂದರು.

ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಗುರುಪೀಠ ಆರಂಭಗೊಂಡು 22 ವರ್ಷಗಳಾಗಿರುವುದರಿಂದ ಬೆಳ್ಳಿ ಮಹೋತ್ಸವ ಆಚರಿಸುವ ಕುರಿತು ಸಭೆ ನಡೆಸಿ 2024-25ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಜಿಲ್ಲಾಧ್ಯಕ್ಷರಾಗಿ ಎಚ್.ಶೇಷಪ್ಪ, ಗೌರವಾಧ್ಯಕ್ಷರಾಗಿ ಎಚ್.ಅಣ್ಣಪ್ಪಸ್ವಾಮಿ ಇವರುಗಳನ್ನು ನೇಮಕ ಮಾಡಿದ್ದೇವೆ. ಬೆಳ್ಳಿ ಮಹೋತ್ಸವಕ್ಕೆ ಗುರುಪೀಠದ ಜೊತೆ ಕೈಜೋಡಿಸಿ ಸಹಕರಿಸಬಹುದೆಂದು ಮನವಿ ಮಾಡಿದರು.

ಗುರುಪೀಠಕ್ಕೆ ಟ್ರಸ್ಟ್ ರಚಿಸಿದ್ದೇನೆ. ನಮ್ಮಲ್ಲಿಯೇ ಕೆಲವರು ಜಮೀನು ಆಸ್ತಿ ಕಬಳಿಸಲು ಹೊಂಚು ಹಾಕುತ್ತಿದ್ದಾರೆ. ಅಂತಹವರನ್ನು ಟ್ರಸ್ಟ್‌ಗೆ ಸೇರಿಸಿಕೊಳ್ಳುವುದಿಲ್ಲ ಎನ್ನುವುದನ್ನು ಬಿಟ್ಟರೆ ಪೀಠಕ್ಕೆ ಯಾರ ವಿರೋಧವೂ ಇಲ್ಲ ಎಂದು ಸ್ಪಷ್ಟಿ ಪಡಿಸಿದರು.

ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಶೇಷಪ್ಪ, ಪ್ರಧಾನ ಕಾರ್ಯದರ್ಶಿ ಡಿ.ಆರ್.ರವೀಂದ್ರ, ಉಪಾಧ್ಯಕ್ಷ ಓಂಕಾರಮೂರ್ತಿ, ಸಹ ಕಾರ್ಯದರ್ಶಿ ನರಸಿಂಹಮೂರ್ತಿ, ಖಜಾಂಚಿ ಟಿ.ನರಸಿಂಹ ಮೂರ್ತಿ, ರಾಮಚಂದ್ರಪ್ಪ ಇದ್ದರು.