ಬಡಾವಣೆ ನಾಮಕರಣ ಮುಗಿದ ಅಧ್ಯಾಯ

| Published : Aug 10 2025, 01:31 AM IST

ಸಾರಾಂಶ

ಪುರಸಭೆಯಿಂದ ಅನುಮೋದನೆಗೊಳಿಸಿ ವೆಂಕಟರಮಣಪ್ಪ ಬಡಾವಣೆ ಎಂದು ಮರುನಾಮಕರಣ ಗೊಳಿಸಿರುವ ಬಗ್ಗೆ ಅಗತ್ಯ ದಾಖಲೆಗಳಿವೆ.

ಕನ್ನಡಪ್ರಭವಾರ್ತೆ ಪಾವಗಡ

ವೀಣಾ ಅಂಜನಕುಮಾರ್‌ ಪುರಸಭೆಯ ಅಧ್ಯಕ್ಷರಾಗಿದ್ದ ವೇಳೆ ಸದಸ್ಯರ ಸರ್ವಾನುಮತದ ಮೇರೆಗೆ ಕುಮಾರಸ್ವಾಮಿ ಬಡಾವಣೆಗೆ, ಪುರಸಭೆಯಿಂದ ಅನುಮೋದನೆಗೊಳಿಸಿ ವೆಂಕಟರಮಣಪ್ಪ ಬಡಾವಣೆ ಎಂದು ಮರುನಾಮಕರಣ ಗೊಳಿಸಿರುವ ಬಗ್ಗೆ ಅಗತ್ಯ ದಾಖಲೆಗಳಿವೆ. ಜೆಡಿಎಸ್‌ ಪಕ್ಷದವರು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸಮಂಜಸವಲ್ಲ . ಇದು ಮುಗಿದ ಅಧ್ಯಾಯವಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಹಾಗೂ ಪುರಸಭೆ ಅಧ್ಯಕ್ಷರಾದ ಸುದೇಶ್‌ಬಾಬು ಸ್ಪಷ್ಟೀಕರಣ ನೀಡಿದರು.

ಪಾವಗಡ ಪಟ್ಟಣದ ಪುರಸಭೆಯ ಆವರಣದಲ್ಲಿ ಕುಮಾರಸ್ವಾಮಿ ಬಡಾವಣೆಯ ಹೆಸರನ್ನು ಬದಲಿಸಿದಂತೆ ಆಗ್ರಹಿಸಿ ತಾಲೂಕು ಜೆಡಿಎಸ್ ಘಟಕದಿಂದ ಪ್ರತಿಭಟನೆ ನಡೆಸಿ ಮನವಿ ಪತ್ರ ನೀಡಲಾಗಿತ್ತು. ಈ ಸಂಬಂಧ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪುರಸಭಾಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ,ಜೆಡಿಎಸ್ ಪಕ್ಷದವರ ಆರೋಪಗಳು ನಿರಾಧಾರ. 2000ದಲ್ಲಿ ವೆಂಕಟರಮಣಪ್ಪ ಶಾಸಕರಾಗಿದ್ದ ಕಾಲ. ಮುಖಂಡ ಹಾಗೂ ಮಾಲೀಕರಾದ ಎ.ಕೃಷ್ಣಪ್ಪ ಅವರ ಜತೆ ಚರ್ಚಿಸಿ 10.5ಎಕರೆ ಪುರಸಭೆಯಿಂದ ಜಮೀನು ಖರೀದಿಸಲಾಗಿದೆ. 2003ರಲ್ಲಿ ಅರ್ಹ ಫಲಾನುಭವಿಗಳನ್ನು ಗುರ್ತಿಸಿ,ಇದೇ ವೆಂಕಟರಮಣಪ್ಪ 2004ರಲ್ಲಿ 395ಮನೆಗಳಿಗೆ ಹಕ್ಕು ಪತ್ರ ವಿತರಿಸಲಾಗಿದೆ. 2007ರಲ್ಲಿ ತಿಮ್ಮರಾಯಪ್ಪ ಶಾಸಕರಾಗಿದ್ದ ವೇಳೆ ಪುರಸಭೆಯ ಆಡಳಿತ ಇರಲಿಲ್ಲ. ಶಾಸಕರು ಅಧ್ಯಕ್ಷರಾಗಿದ್ದು ,ಮುಖ್ಯಾಧಿಕಾರಿ ಕಾರ್ಯಾಧ್ಯಕ್ಷರಾಗಿದ್ದರು. ಆ ವೇಳೆ ಕುಮಾರಸ್ವಾಮಿ ಬಡಾವಣೆ ಎಂದು ನಾಮಕರಣಗೊಳಿಸಿದ್ದು, ಇದಾದ ಬಳಿಕ 2009ರಲ್ಲಿ ಚುನಾಯಿತ ಸದಸ್ಯರ ಕಮಿಟಿ ರಚನೆ ಆಗಿದೆ. ಈ ವೇಳೆ ಮನೆಗಳ ವಿಚಾರವಾಗಿ ವೆಂಕಟರಮಣಪ್ಪ ಅವರ ಬಡವರ ಪರ ಸೇವೆ ಪರಿಗಣಿಸಿ, ಸಂಸ್ಥ ಸಂಸ್ಥೆಯ ಒತ್ತಾಸೆ ಮೇರೆಗೆ, ಪುರಸಭೆ ಸದಸ್ಯರ ಸರ್ವಾನುಮತ ಒಪ್ಪಿಗೆ ಮೇರೆಗೆ ಕುಮಾರಸ್ವಾಮಿ ಬಡಾವಣೆಗೆ ವೆಂಕಟರಮಣಪ್ಪ ಬಡಾವಣೆ ಎಂದು ನಾಮಕರಣಗೊಳಿಸಿ ಪುರಸಭೆಯಿಂದ ರೆಜ್ಯುಲೆಷನ್‌ ಸಹ ಮಾಡಿರುವ ಬಗ್ಗೆ ಅಗತ್ಯ ದಾಖಲೆಗಳಿವೆ ಎಂದರು.

ಮೊನ್ನೆಯಷ್ಟೆ ಶಾಸಕ ಎಚ್‌.ವಿ.ವೆಂಕಟೇಶ್‌ ಅವರ ನೇತೃತ್ವದಲ್ಲಿ ಪಟ್ಟಣದ ವಾರ್ಡ್‌ಗಳಿಗೆ ಭೇಟಿ ನೀಡಿದ್ದು ವಾರ್ಡ್‌ಗಳ ಸಮಸ್ಯೆ ಕುರಿತು ಪರಿಶೀಲನೆ ನಡೆಸಲಾಯಿತು. ವಾರ್ಡ್‌ಗಳು ಪ್ರಗತಿಯತ್ತ ಸಾಗುತ್ತಿರುವ ಬಗ್ಗೆ ಶಾಸಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಅಗತ್ಯ ಇರುವ ವಾರ್ಡ್‌ಗಳಲ್ಲಿ ಸುಸಜ್ಜಿತ ಅಂಗನವಾಡಿ, ಶಾಲೆ ಇತರೆ ಮೂಲಭೂತ ಸಮಸ್ಯೆ ನಿವಾರಣೆ ನಿವಾರಣೆಗೆ ಹೆಚ್ಚು ಅನುದಾನ ಬಿಡುಗಡೆಗೊಳಿಸಿದ್ದಾರೆ. ಇನ್ನೆನು ಮೂರು ತಿಂಗಳಲ್ಲಿ ಪುರಸಭೆಯ ಚುನಾವಣೆ ಇರುವುದರಿಂದ ಯಾವುದೇ ಸಮಸ್ಯೆ ಕಾಣದಿರುವ ಕಾರಣ ಎತ್ತಿ ಹಿಡಿಯುವುದರ ಜತೆಗೆ ಅಪಪ್ರಚಾರಕ್ಕೆ ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷ.ಕಾಂಗ್ರೆಸ್‌ ಮುಖಂಡ ಪಿ.ಎಚ್.ರಾಜೇಶ್ ಮಾತನಾಡಿ ಸದಸ್ಯರು ತೀರ್ಮಾನಿಸಿ ಸರ್ವಾನುಮತದಿಂದ ಕುಮಾರಸ್ವಾಮಿ ಬಡಾವಣೆಗೆ ಮಾಜಿ ಸಚಿವ ವೆಂಕಟರಮಣಪ್ಪ ಹೆಸರಿಟ್ಟಿದ್ದಾರೆ.ಆದರೆ ಈ ವೇಳೆ ಸಭೆಯಲ್ಲಿದ್ದ ಈಗಿನ ಮಾಜಿ ಪುರಸಭೆ ಸದಸ್ಯರು ಸಹ ವಿರೋಧಿಸುತ್ತಿರುವುದು ನಗೆ ಪಾಡಿಲಿನ ವಿಷಯವಾಗಿದೆ ಎಂದರು.

ಪುರಸಭೆಯ ಮಾಜಿ ಅಧ್ಯಕ್ಷ ರಾಮಾಂಜಿನಪ್ಪ,ಸದಸ್ಯರಾದ ತೆಂಗಿನಕಾಯಿ ರವಿ,ವಿಜಯ್ ಕುಮಾರ್, ಮಹಮದ್ ಇಮ್ರಾನ್,ಪಿ.ಬಾಲಸುಬ್ರಮಣ್ಯಂ, ಸಿನಿಮಾ ಗಂಗಾಧರ್ ಉಪಸ್ಥಿತರಿದ್ದರು.