ಕನ್ನಡಪ್ರಭ ವಾರ್ತೆ ಬಾಗಲಕೋಟೆಸದಾ ಪಾರಿಜಾತ. ಸಾಮಾಜಿಕ ರಂಗ ನಾಟಕಗಳಿಗೆ ಹೆಸರಾದ ಬಾಗಲಕೋಟೆಯಲ್ಲಿ ಕರಾವಳಿ0ು ಸಾಂಪ್ರದಾಯಿಕ ಕಲೆಯಕ್ಷಗಾನ ಕೋಟೆ ನಾಡಿನಲ್ಲಿ ನೆಲೆಸಿದ ಉಡುಪಿ ಮೂಲದ ಯಕ್ಷಗಾನ ಅಭಿಮಾನಿಗಳಿಗೆ ರಸದೌತಣ ನೀಡಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸದಾ ಪಾರಿಜಾತ. ಸಾಮಾಜಿಕ ರಂಗ ನಾಟಕಗಳಿಗೆ ಹೆಸರಾದ ಬಾಗಲಕೋಟೆಯಲ್ಲಿ ಕರಾವಳಿ0ು ಸಾಂಪ್ರದಾಯಿಕ ಕಲೆಯಕ್ಷಗಾನ ಕೋಟೆ ನಾಡಿನಲ್ಲಿ ನೆಲೆಸಿದ ಉಡುಪಿ ಮೂಲದ ಯಕ್ಷಗಾನ ಅಭಿಮಾನಿಗಳಿಗೆ ರಸದೌತಣ ನೀಡಿತು. ನವ ನಗರದ ಅಂಬೇಡ್ಕರ್ ಭವನದಲ್ಲಿ ಉಡುಪಿ ಜಿಲ್ಲೆಯ ನಡುರ್ ಒಂದರ್ಲ ಗ್ರಾಮದ ಯಕ್ಷ ತಿರುಗಾಟ 2026. ಪ್ರದರ್ಶಿಸಲ್ಪಟ್ಟಿತು. ಸಾಲಿಗ್ರಾಮದ ಶಿಕ್ಷಕ ಟಿ.ವಿ.ಆನಂದ್ ವಿರಚಿತ. ಕಾದ್ರಳ್ಳಿ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು. ಸದಾ ಅನೇಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬಂದ ಬಾಗಲಕೋಟೆ ಹೊಟೆಲ್ ಮಾಲೀಕರ ಸಂಘದ ಮೋಹನ್ ಲಾಲ್ ಗೋಡೆ ನಿತ್ಯಾನಂದ ಶೆಟ್ಟಿ ರವೀಂದ್ರ ಪೂಜಾರಿ ಬಿ.ಎಂ ರಾಮು ಸೇರಿದಂತೆ ಬಾಗಲಕೋಟೆ ನಗರದ ಹೋಟೆಲ್ಗಳ ಹಾಗೂ ಯಕ್ಷಗಾನ ಅಭಿಮಾನಿಗಳು ಈ ಕಾರ್ಯಕ್ರಮವನ್ನು ಈ ಆಯೋಜಿಸಿದ್ದರು. ದೂರದ ಉಡುಪಿಯಿಂದ ಬಂದು ದರ್ಶಿನಿ ಹೋಟೆಲದಿಂದ ರೆಸ್ಟೋರೆಂಟ್ ವರೆಗೆ ಹೋಟೆಲ್ ನಡೆಸಿಕೊಂಡು ಬಂದು ಅನೇಕ ವರ್ಷಗಳಿಂದ ಇಲ್ಲಿಯೇ ನೆಲೆಸಿದ್ದ ಎಲ್ಲಾ ಹೋಟೆಲ್ ಮಾಲೀಕರ ಹಾಗೂ ಮನೆಯವರಿಗೆಲ್ಲ ಅವರ ತವರಿಗೆ ಹೋಗಿ ಬಂದಂತಾಗಿತ್ತು.ಯಕ್ಷಗಾನದ ಕಲಾವಿದರಾದ ಭಾಸ್ಕರ್ ದೇವಾಡಿಗ ಕುಮಾರ್ ಸದಾಶಿವ ಅಮಿನ್ ಕೊಕ್ಕಾರ್ತರ ತಮ್ಮ ಸಂಗೀತ ಪ್ರದರ್ಶಿಸಿದರೆ, ಕಲಾವಿದರಾದ ಹೆಣ್ಣು ಬೈಲು ವಿಶ್ವನಾಥ ಪೂಜಾರಿ, ರಾಘವೇಂದ್ರ ಶೆಟ್ಟಿ, ನಂದೀಶ್ ಕುಮಾರ್, ಶಿವಮೂರ್ತಿ ರಾವ್, ಸಂದೇಶ ಶೆಟ್ಟಿ ಇವರೆಲ್ಲ ಅದ್ಭುತವಾದ ಪ್ರದರ್ಶನವನ್ನು ನೀಡಿದರು. ನಂದಿ ಪಾತ್ರಧಾರಿ, ಪಾರ್ವತಿ ಪರಮೇಶ್ವರ ಪಾತ್ರಧಾರಿ, ರಾಕ್ಷಸ ಪಾತ್ರಧಾರಿ ನೋಡುಗರ ಮೈ ರೋಮಾಂಚನವಾಗುವಂಥ ಕಲೆ ಪ್ರದರ್ಶಿಸಿದರು. ಒಟ್ಟಿನಲ್ಲಿ ಕೋಟೆ ನಾಡಿನಲ್ಲಿ ಕರಾವಳಿಯ ಕಲರವ ನಗರದಾದ್ಯಂತ ಹರಡಿತ್ತು.