ನುಡಿದಂತೆ ನಡೆದ ಕಾಂಗ್ರೆಸ್‌ ಸರ್ಕಾರ: ವಿವೇಕ ಹೆಬ್ಭಾರ್

| Published : Oct 31 2025, 02:45 AM IST

ನುಡಿದಂತೆ ನಡೆದ ಕಾಂಗ್ರೆಸ್‌ ಸರ್ಕಾರ: ವಿವೇಕ ಹೆಬ್ಭಾರ್
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಗ್ಯಾರಂಟಿಗಳ ಮೂಲಕ ಸರ್ಕಾರ ನುಡಿದಂತೆ ನಡೆದಿದೆ.

ಗ್ಯಾರಂಟಿ ಸ್ಪಂದನಾ ಕಾರ್ಯಕ್ರಮ, ಪಟ್ಟಣ ಶಿಬಿರ ಉದ್ಘಾಟಿಸಿದ ಕೆಪಿಸಿಸಿ ಸದಸ್ಯಕನ್ನಡಪ್ರಭ ವಾರ್ತೆ ಯಲ್ಲಾಪುರ

ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ ಭರವಸೆಯಂತೆ ಗ್ಯಾರಂಟಿಗಳ ಮೂಲಕ ಸರ್ಕಾರ ನುಡಿದಂತೆ ನಡೆದಿದೆ ಎಂದು‌ ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಹೇಳಿದರು.

ತಾಪಂ ಸಭಾಭವನದಲ್ಲಿ ಗುರುವಾರ ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಗ್ಯಾರಂಟಿ ಸ್ಪಂದನಾ ಕಾರ್ಯಕ್ರಮ, ಪಟ್ಟಣ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗ್ಯಾರಂಟಿ ವಿರೋಧಿಸಿದವರೇ ದೇಶದಲ್ಲಿ ‌ಗ್ಯಾರಂಟಿ ನಕಲು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಯಲ್ಲಾಪುರ ತಾಲೂಕಾ ಗ್ಯಾರಂಟಿ ಸಮಿತಿ ಸಕ್ರಿಯವಾಗಿ ಮಾದರಿಯ ಕೆಲಸ ಮಾಡುತ್ತಿದೆ. ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸ ಕುಂಠಿತವಾಗಿಲ್ಲ. ಶಾಸಕ ಶಿವರಾಮ ಹೆಬ್ಬಾರ ನೇತೃತ್ವದಲ್ಲಿ ಯಲ್ಲಾಪುರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಸಹಿತ ದೊಡ್ಡಪ್ರಮಾಣದಲ್ಲಿ ಹಣ ತಂದು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಎಂದರು.

ಎಂಎಲ್ಸಿ ಶಾಂತರಾಮ ಸಿದ್ದಿ ಮಾತನಾಡಿ, ಅರ್ಹರು ಸರ್ಕಾರದ ಯೋಜನೆ ವ್ಯಾಪ್ತಿಯಿಂದ ಯಾರೂ ಹೊರಗುಳಿಯಬಾರದು ಎಂದರು.

ಗ್ಯಾರಂಟಿ ಸಮಿತಿಯ ತಾಲೂಕಾ ಅಧ್ಯಕ್ಷ ಉಲ್ಲಾಸ ಶಾನಭಾಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಿನಲ್ಲಿ ಕಚೇರಿ ಆರಂಭಿಸಿ ವರ್ಷ ಪೂರೈಸಿದ್ದು, ಅಧಿಕಾರಿಗಳ ಸದಸ್ಯರ ಸಹಕಾರದಿಂದ ನೂರಕ್ಕೆ ನೂರರಷ್ಟು ಜನರಿಗೆ ಯೋಜನೆ ತಲುಪಿಸಿದ ಹೆಮ್ಮೆ ಇದೆ ಎಂದರು.

ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷ ಡಿ.ಎನ್. ಗಾಂವ್ಕಾರ, ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಸದಸ್ಯ ಸತೀಶ ನಾಯ್ಕ,

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ ಉಪಳೇಶ್ವರ, ತಾಪಂ ಇಒ ರಾಜೇಶ ಧನವಾಡಕರ್, ಗ್ಯಾರಂಟಿ ಸದಸ್ಯರಾದ ಅನಿಲ್ ಮರಾಠೆ, ಟಿ.ಸಿ. ಗಾಂವ್ಕಾರ, ಶಿವಾನಂದ ನಾಯ್ಕ, ಮುಶರತ್ ಶೇಖ್, ಅನಂತ ನಾಯ್ಕ, ಫಕೀರಪ್ಪ ಹರಿಜನ, ಮಹೇಶ ನಾಯ್ಕ, ನಾಗರಾಜ ಕೈಟ್ಕರ್ ಭಾಗವಹಿಸಿದ್ದರು.ಗ್ಯಾರಂಟಿ ಫಲಾನುಭವಿಗಳು, ಆರ್ಥಿಕವಾಗಿ ಅತ್ಯಂತ ಹಿಂದುಳಿದ ಮಹಿಳೆಯರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಜಿಯಂತಾ ಸಿದ್ಧಿ, ಅಮೀನಾ ಶೇಖ್, ಶಿಲ್ಪಾ ಸಂತೋಷ್ ಶಾನಭಾಗ ಇವರನ್ನು ಸನ್ಮಾನಿಸಲಾಯಿತು.

ಗ್ಯಾರಂಟಿ ಸದಸ್ಯ ಎಂ.ಕೆ. ಭಟ್ಟ ಯಡಳ್ಳಿ ನಿರೂಪಿಸಿದರು.