ಹೊಸಕೋಟೆ: ಅಸ್ಪೃಶ್ಯತೆ, ಜಾತಿ ತಾರತಮ್ಯದಿಂದ ದೂರವಾಗಿ ಸರ್ವ ಸಮಾನತೆಯಿಂದ ಬದುಕುವ ಹಕ್ಕನ್ನು ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ಸರ್ವಧರ್ಮಕ್ಕೂ ಕಲ್ಪಿಸಿಕೊಟ್ಟಿದ್ದಾರೆ ಎಂದು ಜಿಪಂ ಮಾಜಿ ಸದಸ್ಯ ವೈಎಸ್‌ಎಂ. ಮಂಜುನಾಥ್ ತಿಳಿಸಿದರು.
ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದೊಡ್ಡದೇನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಡಾ,ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲೆಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಯುತ್ತದೆಯೋ ಅಲ್ಲಿ ಬಾಬಾ ಸಾಹೇಬರು ಬರೆದ ಸಂವಿಧಾನದಿಂದ ಕಾನೂನು ಪಾಲಿಸಿಕೊಂಡು ಬರುತ್ತಿದ್ದೇವೆ. ದೊಡ್ಡದೇನಹಳ್ಳಿ ಗ್ರಾಮಸ್ಥರ ಆಶೀರ್ವಾದದಿಂದ ಹಿಂದೆ ಜಿಲ್ಲಾ ಪಂಚಾಯ್ತಿ ಸದಸ್ಯನಾಗಲು ಸಾಧ್ಯವಾಯಿತು. ಇವತ್ತು ನಾನು ಅನುಕೂಲವಾಗಿದ್ದೇನೆ ಎಂದರೆ ಅದಕ್ಕೆ ಕಾರಣ ಬಾಬಾ ಸಾಹೇಬರು ಕೊಟ್ಟಂತ ವೋಟಿನ ಹಕ್ಕಿನಿಂದ, ಸಮಾನತೆಯಿಂದ ಓಡಾಡುವಂತಾಗಿದೆ ಎಂದು ಹೇಳಿದರು.ದಸಂಸ ಅಂಬೇಡ್ಕರ್‌ವಾದ ತಾಲೂಕು ಸಂಚಾಲಕ ಪಿ.ಎಂ.ಚಿನ್ನಸ್ವಾಮಿ ಮಾತನಾಡಿ, ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದು ಕೇವಲ ದಲಿತರಿಗೆ ಮಾತ್ರವಲ್ಲ. ಬದಲಾಗಿ ಅವರು ಬರದಿರುವ ಸಂವಿಧಾನದಡಿ ಮೀಸಲಾತಿ ಪಡೆದು ಅನೇಕರು ವಿವಿಧ ಸೌಲಭ್ಯಗಳನ್ನು ಬಳಸಿಕೊಂಡಿದ್ದಾರೆ. ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಡಬೇಕು. ಆಗ ಮಾತ್ರ ಅವರ ಸಂವಿಧಾನಕ್ಕೆ ಅರ್ಥ ಬರಲು ಸಾಧ್ಯ. ಅವರಿಗೂ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ನಾಗೇಶ್, ಪೊಲೀಸ್ ದೇವರಾಜು, ಸೋಲೂರು ಮುನಿರಾಜು, ರಮೇಶ್, ಶಿಕ್ಷಕ ಅಣ್ಣಯ್ಯಪ್ಪ, ಲೋಕೇಶ್, ಆನಂದ್, ಗೋಪಾಲಕೃಷ್ಣ, ಲಕ್ಷ್ಮಣ್, ಗ್ರಾಮಸ್ಥರಾದ ಮಂಜುನಾಥ್, ಮಂಜುಳಮ್ಮ, ವೆಂಕಟರಾಜು, ಡಿಎಟಿ ತಿಮ್ಮರಾಯಪ್ಪ, ಶಶಿಕುಮಾರ್, ಮುನಿರಾಜು, ಅಂಜನ್ ಕುಮಾರ್, ಚಂದ್ರು, ಮುರಳಿ, ಚಂದ್ರಕೀರ್ತಿ, ಆನಂದ್, ಮಂಜುನಾಥ್, ಅಜಯ್, ಸುರೇಶ್ ಹಾಜರಿದ್ದರು.ಫೋಟೋ: 17 ಹೆಚ್‌ಎಸ್‌ಕೆ 3
ಹೊಸಕೋಟೆ ತಾಲೂಕಿನ ದೊಡ್ಡದೇನಹಳ್ಳಿಯಲ್ಲಿ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ವೈಎಸ್‌ಎಂ ಮಂಜುನಾಥ್ ಭಾಗವಹಿಸಿದ್ದರು.