ಸಾರಾಂಶ
ಗದಗ: ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘವು ಸರ್ಕಾರ ಹಾಗೂ ಸಂಘದ ಸದಸ್ಯರು ಮತ್ತು ಸಮಾಜ ಬಾಂಧವರ ಸಹಕಾರದಿಂದ ನಗರದ ವಿಜಯ ನಗರ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದ್ದು, ಸಮಾಜ ಬಾಂಧವರು ಸಹಾಯ ಸಹಕಾರ ನೀಡಬೇಕು ಎಂದು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ವಿನಂತಿಸಿದರು. ಅವರು ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯದಲ್ಲಿ ಸಮುದಾಯ ಭವನದ ವಾಸ್ತುಶಾಂತಿ ಹೋಮ ಹಾಗೂ ಧಾರ್ಮಿಕ ಪೂಜಾ ವಿಧಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮುದಾಯ ಭವನ ಕಾಮಗಾರಿ ಪೂರ್ಣಗೊಂಡಿದ್ದು, ಅಂತಿಮ ಹಂತದಲ್ಲಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಫೆ.18ರಂದು ವಾಸ್ತುಶಾಂತಿ ಹೋಮ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ನಂತರ ಸಮುದಾಯ ಭವನ ಸಮಾಜ ಬಾಂಧವರ ಹಾಗೂ ಸರ್ವರ ಮಂಗಲ ಕಾರ್ಯಗಳಿಗೆ ದೊರೆಯಲಿದೆ ಎಂದ ಅವರು, ಸಮಾಜ ಬಾಂಧವರು ಕೂಡಲೇ ತನು ಮನಧನದಿಂದ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.
ನಿರ್ದೇಶಕ ಬಿ.ಎಮ್. ಯರಕದ, ಎಮ್.ಎಮ್. ಸುತಾರ, ವಿಶ್ವಕರ್ಮ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಬಡಿಗೇರ, ವಿಶ್ವಕರ್ಮ ಸಾಹಿತ್ಯ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ವಿಶ್ವಕರ್ಮ ಮಹಿಳಾ ಮಂಡಳ ಅಧ್ಯಕ್ಷೆ ಶಿವಲೀಲಾ ಬಡಿಗೇರ, ರಿಂದಮ್ಮ ತೋಟಗಂಟಿ, ಪುಷ್ಪಾ ವಿಶ್ವಜ್ಞ, ಮಹೇಶ ಕಮ್ಮಾರ, ಪಾಂಡುರಂಗ ಪತ್ತಾರ ಹಾಜರಿದ್ದರು. ಸುಮಂಗಲಾ ಪತ್ತಾರ ಪ್ರಾರ್ಥಿಸಿದರು. ಸಿ.ಎಂ. ಪತ್ತಾರ ಸ್ವಾಗತಿಸಿದರು. ವಿಶ್ವನಾಥ ಕಮ್ಮಾರ ನಿರೂಪಿಸಿದರು. ಸೋಮಶೇಖರ ಬಡಿಗೇರ ವಂದಿಸಿದರು.