ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಉಡುಪಿ (ಎಸಿಸಿಇಎ) ವತಿಯಿಂದ ಎಂಜಿನಿಯರ್ಸ್ ದಿನಾಚರಣೆ ಅಜ್ಜರಕಾಡು ಪುರಭವನದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಉಡುಪಿ (ಎಸಿಸಿಇಎ) ವತಿಯಿಂದ ಎಂಜಿನಿಯರ್ಸ್ ದಿನಾಚರಣೆ ಅಜ್ಜರಕಾಡು ಪುರಭವನದಲ್ಲಿ ನಡೆಯಿತು.ಶಾಸಕ ಯಶಪಾಲ್ ಎ. ಸುವರ್ಣ ಉದ್ಘಾಟಿಸಿ, ನಗರದ ಸಮಗ್ರ ಅಭಿವೃದ್ಧಿಯಲ್ಲಿ ಎಂಜಿನಿಯರ್ಸ್ ಕೊಡುಗೆ ಅಪಾರ ಎಂದರು.
ಜಿಲ್ಲೆಯಲ್ಲಿ 11ಇ, ಭೂ ಪರಿವರ್ತನೆ, ಸಿಆರ್‌ಝಡ್ ಸಹಿತ ಕೆಲವೊಂದು ತಾಂತ್ರಿಕ ಅಡಚಣೆಯಿಂದ ಅಭಿವೃದ್ಧಿ ಕಾರ್ಯಕ್ಕೆ ತೊಡಕು ಆಗುತ್ತಿದ್ದು, ಸರಕಾರ ಮಟ್ಟದಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿ ಶಾಸಕರು ತಿಳಿಸಿದರು.ಮಂಗಳೂರು ಸ್ಮಾರ್ಟ್ ಸಿಟಿ ಮಹಾಪ್ರಬಂಧಕ (ತಾಂತ್ರಿಕ) ಅರುಣ್ ಪ್ರಭಾ ಕೆ.ಎಸ್. ಮಾತನಾಡಿದರು.
ವಿದ್ಯಾರ್ಥಿ ವೇತನದ ದಾನಿ, ಸ್ಟೀಲ್ ವಿಶನ್ ಬಿಲ್ಡಿಂಗ್ ಸೊಲ್ಯೂಶನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರತಾಪ್ ಶೆಟ್ಟಿ, ಮಣಿಪಾಲ ಮಾಹೆ ಕಾರ್ಪೊರೇಟ್ ರಿಲೇಶನ್ಸ್‌ನ ನಿರ್ದೇಶಕ ಡಾ. ಹರೀಶ್ ಕುಮಾರ್ ಎಸ್., ಎಸಿಸಿಇಎ ಉಡುಪಿ ಗೌರವಾಧ್ಯಕ್ಷ ನಾಗೇಶ್ ಹೆಗ್ಡೆ, ಅಮಿತ್ ಅರವಿಂದ್ ನಾಯಕ್ , ಗೋಪಾಲ್ ಭಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸಂಸ್ಥೆಯ ಹಿರಿಯ ಎಂಜಿನಿಯರ್ಸ್‌ಗಳಾದ ರಾಮಚಂದ್ರ ಮಯ್ಯ ಮತ್ತು ಸುಭಾಶ್ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸೆಂಟರಿಂಗ್ ಕೆಲಸದಲ್ಲಿ ಪ್ರಾವೀಣ್ಯತೆ ಹೊಂದಿರುವ ನಿವೃತ್ತ ಗುತ್ತಿಗೆದಾರ ಕೃಷ್ಣಯ್ಯ ಆಚಾರ್ಯ ಅವರನ್ನು ಗೌರವಿಸಲಾಯಿತು. 6 ಮಂದಿ ಡಿಪ್ಲೋಮಾ ಇನ್ ಸಿವಿಲ್ ಎಂಜಿನಿಯರ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಎಸಿಸಿಇಎ ಅಧ್ಯಕ್ಷ ಭಗವಾನ್‌ದಾಸ್ ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಆರ್. ಮಹೇಶ್ ಕಾಮತ್ ವರದಿ ವಾಚಿಸಿದರು. ಎಂಜಿನಿಯರ್ ಜಗದೀಶ್ ಆಚಾರ್ಯ, ಸಂದೇಶ್ ಶೆಟ್ಟಿ ನಿರೂಪಿಸಿದರು.