ಜಕಣಾಚಾರಿ ವಾಸ್ತುಶಿಲ್ಪ ಕಲೆಯ ಕೊಡುಗೆ ಅಪಾರ- ರಾಮಚಂದ್ರಪ್ಪ ಬಡಿಗೇರ

| Published : Jan 02 2024, 02:15 AM IST

ಜಕಣಾಚಾರಿ ವಾಸ್ತುಶಿಲ್ಪ ಕಲೆಯ ಕೊಡುಗೆ ಅಪಾರ- ರಾಮಚಂದ್ರಪ್ಪ ಬಡಿಗೇರ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ದೇಶ ವಿದೇಶಿಗರು ಬೇಲೂರು ಹಳೇಬೀಡು, ಅಜಂತಾ, ಯಲ್ಲೋರಾದಂತ ವಾಸ್ತುಶಿಲ್ಪದ ಬಗ್ಗೆ ಮಾತನಾಡಬೇಕಾದರೆ ಅಲ್ಲಿ ಜಕಣಾಚಾರಿಯವರು ನೀಡಿದ ಕೊಡುಗೆಯೇ ಕಾರಣವಾಗಿದೆ ಅಂದಿನ ಕಾಲದಲ್ಲಿ ಯಾವುದೇ ಯಂತ್ರೋಪಕರಣಗಳು ಇಲ್ಲದೇ ಕೇವಲ ಕಲ್ಪನೆಯ ಮೂಲಕ ಶಿಲ್ಪಕಲೆ ಕೆತ್ತಿ ಇಡೀ ನಾಡಿಗೆ ಬೃಹತ್ ಕೊಡುಗೆ ನೀಡಿದ್ದು ನಮಗೆ ಕಣ್ಣಮುಂದಿದೆ.

ಕುಷ್ಟಗಿ: ಅಮರಶಿಲ್ಪಿ ಜಕಣಾಚಾರಿ ಇಡೀ ವಿಶ್ವವೇ ಬೆರಗಾಗುವಂತಹ ವಾಸ್ತುಶಿಲ್ಪ ಕಲೆಯನ್ನು ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾ ವಿಶ್ವಕರ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ರಾಮಚಂದ್ರಪ್ಪ ಬಡಿಗೇರ ಹೇಳಿದರು.ಪಟ್ಟಣದ ತಾಲೂಕು ಆಡಳಿತದಿಂದ ತಹಶೀಲ್ದಾರ ಕಚೇರಿಯಲ್ಲಿ ಸೋಮವಾರ ವಿಶ್ವವಿಖ್ಯಾತ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ದೇಶ ವಿದೇಶಿಗರು ಬೇಲೂರು ಹಳೇಬೀಡು, ಅಜಂತಾ, ಯಲ್ಲೋರಾದಂತ ವಾಸ್ತುಶಿಲ್ಪದ ಬಗ್ಗೆ ಮಾತನಾಡಬೇಕಾದರೆ ಅಲ್ಲಿ ಜಕಣಾಚಾರಿಯವರು ನೀಡಿದ ಕೊಡುಗೆಯೇ ಕಾರಣವಾಗಿದೆ ಅಂದಿನ ಕಾಲದಲ್ಲಿ ಯಾವುದೇ ಯಂತ್ರೋಪಕರಣಗಳು ಇಲ್ಲದೇ ಕೇವಲ ಕಲ್ಪನೆಯ ಮೂಲಕ ಶಿಲ್ಪಕಲೆ ಕೆತ್ತಿ ಇಡೀ ನಾಡಿಗೆ ಬೃಹತ್ ಕೊಡುಗೆ ನೀಡಿದ್ದು ನಮಗೆ ಕಣ್ಣಮುಂದಿದೆ. ಇಂದು ಇಂತಹ ಕಲೆಗೆ ಬೆಲೆಕಟ್ಟಲು ಅಸಾಧ್ಯ ಎಂದರು.

ಈ ಸಂದರ್ಭದಲ್ಲಿ ಗ್ರೇಡ್- ೨ ತಹಶೀಲ್ದಾರ್‌ ಮುರಳೀಧರ ಮುಕ್ತೇದಾರ, ಶಿರಸ್ತೇದಾರ ಜಿ.ಸತೀಶ, ಸುಂದರರಾಜ, ಪ್ರಮುಖರಾದ ವಿಶ್ವಕರ್ಮ ಸಮಾಜದ ತಾಲೂಕ ಅಧ್ಯಕ್ಷ ಶರಣಪ್ಪ ಬಡಿಗೇರ, ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ಮಾಜಿ ಅಧ್ಯಕ್ಷ ಗುರಪ್ಪ ಬಡಿಗೇರ, ಮುಖಂಡರಾದ ಶಾಶ್ವತಪ್ಪ ಬಡಿಗೇರ, ವೀರಣ್ಣ ಬಡಿಗೇರ, ವಾಸಪ್ಪ ಪತ್ತಾರ, ಅನೀಲ ಕಮ್ಮಾರ ಗುರಪ್ಪ ನಂದಿಹಾಳ ಸೇರಿದಂತೆ ಮತ್ತಿತರರು ಇದ್ದರು.