ಬೆಳಗಾವಿಯ ಸಾಹಿತಿ ಪ್ರಕಾಶ್ ಗಿರಿಮಲ್ಲನವರ ಮಾತನಾಡಿ, ಹಸ್ತಪ್ರತಿ ಮತ್ತು ವಚನಗಳ ಮೂಲಕ ಲಿಂಗಾಯತ ಮಠಗಳು ಕನ್ನಡವನ್ನು ಬೆಳೆಸಿವೆ ಎಂದರು.

ಗದಗ: ಕನ್ನಡ ಭಾಷೆಯನ್ನು ವೈವಿಧ್ಯಮಯವಾಗಿ ಬೆಳೆಸುವಲ್ಲಿ ಲಿಂಗಾಯತ ಮಠಗಳ ಕೊಡುಗೆ ಅನನ್ಯವಾಗಿದೆ. ಬಸವಾದಿ ಶರಣರು ಆಡುಭಾಷೆಯಲ್ಲಿ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

ಗದಗ ನಗರದ ಲಿಂಗಾಯತ ಪ್ರಗತಿಶೀಲ ಸಂಘದ 2824ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಓಲೆಮಠಗಳು ತಾಡೋಲೆಗಳನ್ನು ಸಂಗ್ರಹಿಸಿ ಭಾಷೆ ಉಳಿಸಿದರೆ, ಸಾಲಿಮಠಗಳು ಕನ್ನಡ ಶಾಲೆಗಳ ಮೂಲಕ ಶಿಕ್ಷಣ ಸೇವೆಗೈದಿವೆ. ಎಡೆಯೂರು ತೋಂಟದ ಸಿದ್ಧಲಿಂಗ ಶಿವಯೋಗಿಗಳು 701 ಶಿಷ್ಯರೊಂದಿಗೆ ಸಂಚರಿಸಿ ಸಂಸ್ಕೃತಿ ಬೆಳೆಸಿದ್ದಾರೆ. ಮಾತೃಭಾಷೆಯಲ್ಲಿ ಓದಿದ ಮಕ್ಕಳು ಸರ್ವ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಾರೆ ಎಂದರು.

ಬೆಳಗಾವಿಯ ಸಾಹಿತಿ ಪ್ರಕಾಶ್ ಗಿರಿಮಲ್ಲನವರ ಮಾತನಾಡಿ, ಹಸ್ತಪ್ರತಿ ಮತ್ತು ವಚನಗಳ ಮೂಲಕ ಲಿಂಗಾಯತ ಮಠಗಳು ಕನ್ನಡವನ್ನು ಬೆಳೆಸಿವೆ ಎಂದರು. ಇದೇ ವೇಳೆ 2026ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬೆಳಗಾವಿಯ ಡಾ. ಸುಜಾತಾ ಜಾಲಿ (ವೈದ್ಯಕೀಯ), ಡಾ. ಡಿ.ಎಸ್. ಚೌಗಲೆ (ರಂಗಕಲೆ) ಹಾಗೂ ಯುವ ಚಿತ್ರಕಲಾವಿದರಾದ ರವಿ ಶಿಶುವಿನಹಳ್ಳಿ, ಫಕ್ಕೀರೇಶ ಕುಳಗೇರಿ ಅವರನ್ನು ಸನ್ಮಾನಿಸಲಾಯಿತು. ಲಲಿತಾ ಅರಳಿ ಅವರ ಆರಾಧನೆ ಮತ್ತು ಮಿನುಗು ನಕ್ಷತ್ರಗಳು ಪುಸ್ತಕಗಳನ್ನು ವಿ.ಟಿ. ಮಾಗಳದ ಲೋಕಾರ್ಪಣೆಗೊಳಿಸಿದರು.

ಸಾನ್ವಿ ರಾಜಪ್ಪನವರ ಗ್ರಂಥಪಠಣ, ಪ್ರತೀಕ್ಷಾ ತುಕ್ಕಣ್ಣವರ ವಚನಚಿಂತನ, ಮೃತ್ಯುಂಜಯ ಮತ್ತು ಹೇಮಂತ್ ಕುಮಾರ ಅವರಿಂದ ವಚನಸಂಗೀತ ನಡೆಯಿತು. ಸಂಡೂರಿನ ಕೆ.ಎಸ್. ನಾಗರಾಜ, ರಾಣೇಬೆನ್ನೂರಿನ ಲಲಿತಾ ಅರಳಿ ದಾಸೋಹ ಸೇವೆ ವಹಿಸಿದ್ದರು. ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ರಮೇಶ ಕಲನಗೌಡ, ವಿದ್ಯಾ ಗಂಜಿಹಾಳ ನಿರೂಪಿಸಿದರು. ಸಿದ್ದಣ್ಣ ಬಂಗಾರಶೆಟ್ಟರ, ದಾನಯ್ಯ ಗಣಾಚಾರಿ, ಜಿ.ಬಿ. ಪಾಟೀಲ, ಗಂಗಾಧರ ಹಿರೇಮಠ, ಕೆ.ಎ. ಬಳಿಗಾರ, ಪ್ರತಿಭಾ ಬಡ್ನಿ, ಸುನಂದಾ ಪಿಳ್ಳಿ, ಸೋಮು ಪುರಾಣಿಕ, ಆದೇಶ ಅಂಗಡಿ ಉಪಸ್ಥಿತರಿದ್ದರು.