ಕರ್ತವ್ಯದಲ್ಲಿದ್ದಾಗ, ನಿವೃತ್ತಿಯಾದಾಗಲೂ ತಮ್ಮ ಕೆಲಸವನ್ನು ನಿರಂತರವಾಗಿ ಮಾಡುವುದು ಬಹಳ ವಿರಳ ಇಂತಹ ವಾತಾವರಣದಲ್ಲಿಯೂ ನಿವೃತ್ತ ಪ್ರಾಚಾರ್ಯ ಎ.ಬಿ. ಹಿರೇಮಠ ಸಮಾಜಕ್ಕೆ ಮತ್ತು ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮುಂಡರಗಿ

ಕರ್ತವ್ಯದಲ್ಲಿದ್ದಾಗ, ನಿವೃತ್ತಿಯಾದಾಗಲೂ ತಮ್ಮ ಕೆಲಸವನ್ನು ನಿರಂತರವಾಗಿ ಮಾಡುವುದು ಬಹಳ ವಿರಳ ಇಂತಹ ವಾತಾವರಣದಲ್ಲಿಯೂ ನಿವೃತ್ತ ಪ್ರಾಚಾರ್ಯ ಎ.ಬಿ. ಹಿರೇಮಠ ಸಮಾಜಕ್ಕೆ ಮತ್ತು ಶಿಕ್ಷಕ ವರ್ಗಕ್ಕೆ ಮಾದರಿಯಾಗಿದ್ದಾರೆ ಎಂದು ವಿಪ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಪಟ್ಟಣದಲ್ಲಿ ನಿವೃತ್ತ ಪ್ರಾಚಾರ್ಯ ಎ.ಬಿ. ಹಿರೇಮಠ ಅವರ ಕರ್ತವ್ಯಶೀಲ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಅನೇಕ ಪ್ರತಿಭಾವಂತರು ಮಠಮಾನ್ಯಗಳ ಆಶ್ರಯದಲ್ಲಿಯೇ ವಿದ್ಯಾಭ್ಯಾಸ ಮಾಡಿದ ಪರಿಣಾಮವೇ ಇಂದು ಸಮಾಜಕ್ಕೆ ಕೋಟಿ ಕೋಟಿ ವ್ಯಕ್ತಿಗಳು ಕೊಡುಗೆಗಳಾಗಿದ್ದಾರೆ. ಮಠಗಳು ಅನ್ನದ ಜತೆಗೆ ಅಕ್ಷರದಾಸೋಹ ಕೊಟ್ಟ ಪರಿಣಾಮವೇ ಶಿಕ್ಷಣ ಪಡೆಯುವಂತಾಗಿದೆ. ಸರಕಾರ ಮಾಡದಷ್ಟು ಶಿಕ್ಷಣ ಕ್ಷೇತ್ರದಲ್ಲಿ ಶಾಲೆ ಕಾಲೇಜು ತೆರೆದು ಮಠಗಳು ಮಾಡಿವೆ, 1962ರಲ್ಲಿ ಸರಕಾರ ಒಂದು ಪ್ರಕಟನೆ ನೀಡಿದ್ದನ್ನು ಸ್ಮರಿಸಬಹುದು, ಸರಕಾರ ಎಲ್ಲರಿಗೂ ಶಿಕ್ಷಣ ಕೊಡುವ ವ್ಯವಸ್ಥೆ ಹೊಂದಿಲ್ಲ ಹೀಗಾಗಿ ಮಠಗಳು ಶಿಕ್ಷಣ ಕೊಡಲು ಮುಂದೆ ಬಂದರೆ ಅಂತಹ ಮಠಗಳಿಗೆ ಸರಕಾರ ಅನುದಾನ ಕೊಡುತ್ತದೆ ಎಂದು, ಇದರ ಮೇಲೆ ಮಠಗಳಿಂದ ನಡೆಯುವ ಶಿಕ್ಷಣ ಸಂಸ್ಥೆಗಳು ಎಲ್ಲರಿಗೂ ಶಿಕ್ಷಣ ಪಸರಿಸಿವೆ ಎಂದು ಆರ್ಥವಾಗುತ್ತದೆ ಎಂದರು.

ಸಾನಿಧ್ಯ ವಹಿಸಿದ್ದ ಜ.ಡಾ. ಅನ್ನದಾನೀಶ್ವರ ಸ್ವಾಮಿಗಳು ಮಾತನಾಡಿ, ಕಷ್ಟ ಕಾಲದಲ್ಲಿ ಅನ್ನದಾನೀಶ್ವರ ಸಂಸ್ಥೆ ನಡೆಸಿಕೊಂಡು ಬರಲಾಗಿದೆ. ಸಂಸ್ಥೆಯ ಏಳ್ಗೆಗೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ ಎ.ಬಿ.ಹಿರೇಮಠ ಅವರ ಕೊಡುಗೆಯೂ ಅನನ್ಯ, ಸಂಸ್ಥೆಯಲ್ಲಿ ಸಾಹಿತ್ಯ, ವಿಚಾರ ಸಂಕಿರಣ ಪುಸ್ತಕ ಪ್ರಕಟನೆ ಹಿನ್ನೆಲೆಗೆ ಕೆಲಸ ಮಾಡಿದ ಅವರ ಸೇವೆ ಸ್ಮರಣೀಯ ಎಂದರು.

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಶೈಕ್ಷಣಿಕ, ಸಾಹಿತ್ಯಕ, ಸಾಂಸ್ಕೃತಿಕವಾಗಿ ಸಾಕಷ್ಟು ಕೆಲಸ ಮಾಡಿದ ಹಿನ್ನೆಲೆ ಎ.ಬಿ. ಹಿರೇಮಠ ಅವರು ಜನಮಾನಸದಲ್ಲಿ ಉಳಿದಿದ್ದಾರೆ. ಎಲ್ಲಿ ಶಿಸ್ತು, ಶ್ರದ್ಧೆ, ಪ್ರಾಮಾಣಿಕತೆ ಇರುತ್ತದೆಯೊ ಅಂತಹ ಶಿಕ್ಷಣ ಸಂಸ್ಥೆಯಲ್ಲಿ ದಕ್ಷತೆ ತಾನಾಗಿಯೇ ಬರುತ್ತದೆ, ಇದನ್ನು ರೂಢಿಸಿಕೊಂಡ ವ್ಯಕ್ತಿ ಬೆಳೆಯುವವದು ಸಹಜ ಎಂದರು.

ಸೇಗುಣಸಿ ವಿರಕ್ತಮಠದಮ ಮಹಾಂತಪ್ರಭು ಸ್ವಾಮಿಗಳು, ಗ್ರಂಥ ಸಂಪಾದಕ ಎಸ್.ಬಿ. ಕರಿಭರಮಗೌಡರ, ಡಾ. ಬಿ.ಎಲ್. ಲಕ್ಕಣ್ಣವರ, ಅಕ್ಕಮಹಾದೇವಿ ಹಂಪಿಹೊಳಿ, ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಇತರರು ಮಾತನಾಡಿದರು.

ಜ.ಫಕ್ಕೀರದಿಂಗಾಲೇಶ್ವರ ಸ್ವಾಮಿಗಳು, ನಿಜಗುಣ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಮಾಜಿ ಸಚಿವ ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಎ.ಬಿ. ಹಿರೇಮಠ, ಈಶ್ವರಪ್ಪ ಹಂಚಿನಾಳ, ಕೊಟ್ರೇಶ ಅಂಗಡಿ, ಡಾ.ಬಿ.ಜಿ. ಜವಳಿ, ಡಾ.ಡಿ.ಸಿ. ಮಠ, ಡಾ. ಎಚ್.ಎ. ವೀರೇಂದ್ರನಾಥ, ಷಡಕ್ಷರಿ ಅಡವಯ್ಯನಮಠ, ಶರಣಬಸವ, ಬಿ.ಎಫ್. ಚೇಗರೆಡ್ಡಿ, ಬಿ.ಎಸ್. ಶಿರೋಳ, ಜಯದೇವ ಮೆಣಸಗಿ, ಅಲ್ಲಮ್ರಭು ಬೆಟದೂರ, ಕಳಕೇಶ ಗುಡ್ಲಾನೂರ, ಅಭಿನಂದನಾ ಗ್ರಂಥ ಸಂಪಾದಕ ಮಂಡಳಿಯ ಆರ್.ಎಲ್. ಪೊಲೀಸಪಾಟೀಲ, ಎಂ.ಜಿ. ಗಚ್ಚಣ್ಣವರ, ಯಲ್ಲಪ್ಪ ಕರಡಿ, ಶಂಕರ ಕುಕನೂರ, ಮುತ್ತು ಹಾಲಕೇರಿ ಇತರರು ಇದ್ದರು. ನಾಗೇಶ ಹುಬ್ಬಳ್ಳಿ ಸ್ವಾಗತಿಸಿದರು. ಎಚ್.ಎ. ಗಾಯಿತ್ರಿದೇವಿ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಹಿರೇಮಠ, ಶಶಿಕಲಾ ಕುಕನೂರ ನಿರೂಪಿಸಿದರು.