ಸಾರಾಂಶ
ಜಗತ್ತಿನಲ್ಲಿ ಭಾರತದ ಆರ್ಥಿಕ ಪ್ರಗತಿಗೆ ಸಹಕಾರಿ ರಂಗದ ಕೊಡುಗೆ ಅಮೂಲ್ಯ ಎಂದು ಸಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಬೆಳ್ತಂಗಡಿ: ಜಗತ್ತಿನಲ್ಲಿ ಭಾರತದ ಆರ್ಥಿಕ ಪ್ರಗತಿಗೆ ಸಹಕಾರಿ ರಂಗದ ಕೊಡುಗೆ ಅಮೂಲ್ಯ ಎಂದು ಸಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಕಡಿರುದ್ಯಾವರ ಶಾಖೆಗೆ ಕೇಂದ್ರ ಸರ್ಕಾರದ ಪ್ಯಾಕ್ಸ್ ಎಎಸ್ ಎಂಎಸ್ಸಿ ಯೋಜನೆಯಡಿ ನಿರ್ಮಾಣವಾದ ನೂತನ ಗೋದಾಮು, ಬ್ಯಾಂಕಿಂಗ್ ಕಚೇರಿ ಹಾಗೂ ಸಭಾಭವನವನ್ನು ಶನಿವಾರ ಕಡಿರುದ್ಯಾವರ ಶಾಖೆ ವಠಾರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.ದ.ಕ. ಜಿಲ್ಲೆಯ ಸಹಕಾರಿ ಸಂಘಗಳ ಸೇವೆ, ವ್ಯವಸ್ಥೆಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮಾದರಿಯಾಗಿದೆ. ಸಹಕಾರಿ ರಂಗದ ಚುಕ್ಕಾಣಿ ಹಿಡಿದವರಿಗೆ ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಪ್ರಜ್ಞೆ ಇರುವುದರಿಂದ ಗ್ರಾಮೀಣ ಮಟ್ಟದ ದಿವಾಳಿ ಅಂಚಿನಲ್ಲಿದ್ದ ಸಹಕಾರಿ ರಂಗಗಳು ಎದ್ದು ನಿಲ್ಲುವಂತಾಗಿದೆ. ಜಗತ್ತಿನಲ್ಲಿ ಭಾರತ ಆರ್ಥಿಕ ಸದೃಢೀಕರಣಕ್ಕೆ ಸಹಕಾರಿ ರಂಗದ ಕೊಡುಗೆ ಅಮೂಲ್ಯ ಎಂದರು.
ಹಿಂದುಳಿದ ಪ್ರದೇಶದಲ್ಲಿರುವ ಬಂಗಾಡಿ ಸಹಕಾರಿ ಸಂಘವು ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳಿಗೆ ಮಾದರಿಯಾಗಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರವು ರೈತರಿಗೆ ಪೂರಕ ಯೋಜನೆ ಒದಗಿಸುವಲ್ಲಿ ಸಹಕಾರಿ ರಂಗ ಬಲವರ್ಧನೆಗೆ ವಿಶ್ವ ವಿದ್ಯಾಲಯದ ಸ್ಥಾಪಿಸಿ ಶಿಕ್ಷಣ ಹಾಗೂ ತರಬೇತಿಯ ಹೊಸ ಯೋಜನೆ, ಹೈನುಗಾರಿಕಾ ರಂಗ ಪುನಶ್ಚೇತನಕ್ಕೆ ಕೇಂದ್ರವು ಮೊದಲ ಬಾರಿಗೆ ಕರ್ನಾಟಕದಲ್ಲಿ ಹೈನುಗಾರರ ಬ್ಯಾಂಕ್ ಕರ್ನಾಟಕದಲ್ಲಿ ತೆರಯುವ ಪ್ರಯತ್ನದ ಮೂಲಕ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಗಬೇಕಿದೆ ಎಂದು ಹೇಳಿದರು.