ಕನ್ನಡ ಸಾಹಿತ್ಯಕ್ಕೆ ರಂಗಭೂಮಿ ಕೊಡುಗೆ ಅಪಾರ

| Published : Nov 17 2025, 12:30 AM IST

ಕನ್ನಡ ಸಾಹಿತ್ಯಕ್ಕೆ ರಂಗಭೂಮಿ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಕೋಟೆ: ಕನ್ನಡ ಸಾಹಿತ್ಯ ಲೋಕಕ್ಕೆ ರಂಗಭೂಮಿ ನಾಟಕ ಕಲೆಯ ಕೊಡುಗೆ ಅಪಾರವಾಗಿದ್ದು ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಜಿಲ್ಲಾ ಕಸಾಪ ನಿಕಟಪೂರ್ವ ಕಾರ್ಯದರ್ಶಿ ನಟರಾಜ್ ಎಂಎನ್‌ಆರ್ ತಿಳಿಸಿದರು.

ಹೊಸಕೋಟೆ: ಕನ್ನಡ ಸಾಹಿತ್ಯ ಲೋಕಕ್ಕೆ ರಂಗಭೂಮಿ ನಾಟಕ ಕಲೆಯ ಕೊಡುಗೆ ಅಪಾರವಾಗಿದ್ದು ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಜಿಲ್ಲಾ ಕಸಾಪ ನಿಕಟಪೂರ್ವ ಕಾರ್ಯದರ್ಶಿ ನಟರಾಜ್ ಎಂಎನ್‌ಆರ್ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಕಲಾವಿದರ ಕ್ಷೇಮಾಭಿವೃದ್ಧಿ ಸಂಘ ಮತ್ತು ರವಿಸುತ ನಾಟಕ ಮಂಡಳಿಯ ಸಹಭಾಗಿತ್ವದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಮತ್ತು ರಾಜ ಸತ್ಯವ್ರತ ಅಥವಾ ಶನಿಪ್ರಭಾವ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರುನಾಡಿನ ಕಲಾಪ್ರಕಾರಗಳಗಲ್ಲಿ ಗಂಡು ಕಲೆ ಎನಿಸಿಕೊಂಡಿರುವ ರಂಗಭೂಮಿ ನಾಟಕದ ಕೊಡುಗೆಯೂ ಕನ್ನಡ ಭಾಷೆ ಸಾಹಿತ್ಯಕ್ಕೆ ಹೆಚ್ಚಿನ ಮೆರಗನ್ನು ತಂದಿದ್ದು ನಾಟಕಗಳಲ್ಲಿ ಕನ್ನಡ ಭಾಷೆಯ ಪದಪುಂಜಗಳನ್ನು ಶ್ರೀಮಂತಗೊಳಿಸುತಿದ್ದು ಗ್ರಾಮೀಣ ಭಾಗದ ಅವಿದ್ಯಾವಂತರು ವಿದ್ಯಾವಂತರೂ ಕೂಡ ಸಾಹಿತ್ಯವನ್ನು ನಿತ್ಯ ಜೀವನದಲ್ಲಿ ಜನರು ಬಳಸುವಂತಾಗಬೇಕು. ಎಂದರು.

ಕಲಾವಿದರ ಸಂಘದ ಅಧ್ಯಕ್ಷರಾದ ಬಿವಿ ದೇವರಾಜ್ ಮಾತನಾಡಿ ಕಲಾವಿದರ ಸಂಘದಿAದ ನಾಡ ಹಬ್ಬ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಮೂಲಕ ಕಲಾಪೋಷಣೆ ಮಾಡುವುದರ ಜೊತೆಗೆ ಕಲಾವಿದರನ್ನು ಗುರುತಿಸಿ ವೇದಿಕೆ ನೀಡುವುದರ ಜೊತೆಗೆ ಎಲೆಮರೆಕಾಯಂತಾಗಿರುವ ಕಲಾವಿದರನ್ನು ಸನ್ಮಾನಿಸಿ ಅನಾರೋಗ್ಯ ಪೀಡಿತ ಕಲಾವಿದರಿಗೆ ಆರ್ಥಿಕ ನೆರವು ನೀಡಿ ನಿಧನರಾದ ಕಲಾವಿದರ ಕುಟುಂಬಕ್ಕೆ ಮರಣ ನಿಧಿಯನ್ನು ನೀಡುತಿದ್ದು ಇಂದು ಕನ್ನಡ ಸಾಹಿತ್ಯವನ್ನು ಎತ್ತಿಹಿಡಿಯುತ್ತಿರುವವರಲ್ಲಿ ರಂಗಭೂಮಿ ಕಲಾವಿದರು ಅಗ್ರಮಾನ್ಯರು ಎಂದರು.

ಈ ಸಂದರ್ಭದಲ್ಲಿ ನಾಟಕ ನಿರ್ದೇಶಕರಾದ ಮಂಡಿಬೆಲೆ ಕೇಶವಪ್ಪ ಸೇರಿದಂತೆ ಹಲವು ಕಲಾವಿದರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಕಲಾವಿದರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಖಜಾಂಚಿ ಈಶ್ವರ್ ರಾವ್ , ಮಾಜಿ ಅಧ್ಯಕ್ಷ ವೆಂಕಟರಮಣಪ್ಪ, ಮುನಿರಾಜು ಭಾಗವತರು, ನಿರ್ದೇಶಕರಾದ ಶಂಭುಲಿAಗಪ್ಪ,ಸೀಮೆ ಹಸುನಾಗರಾಜ್, ರವಿಯಣ್ಣ, ಮಂಜುನಾಥ್, ರಾಮಾಂಜಿನಪ್ಪ,ಮAಜುಳಶ್ರಿ, ರವಿಸುತ , ನಾಟಕ ತಂಡದ ಸುಬ್ಬಣ್ಣ, ಸತೀಶ್, ಚಂದ್ರಣ್ಣ, ತಬಲ ವಾದಕ ಮೋಹನ್ ಕುಮಾರ್, ಸೋಲೆಕ್ಸ್ ಶಿವರಾಜ್, ಕ್ಲಾರನೆಟ್ ಜಗದೀಶ್, ಘಟಂ ರವೀಂದ್ರಾಚಾರ್ ಸೇರಿದಂತೆ ಅನೇಕ ಕಲಾವಿದರು ಇದ್ದರು.

ಫೋಟೋ: 16 ಹೆಚ್‌ಎಸ್‌ಕೆ 2

ಹೊಸಕೋಟೆ ನಗರದ ಅಂಭೇಡ್ಕರ್ ಭವನದಲ್ಲಿ ಕಲಾವಿದರ ಸಂಘ ಮತ್ತು ರವಿಸುತ ಕೃಪಾಪೋಷಿತ ನಾಟಕ ಮಂಡಳಿಯಿAದ 70 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆದ ರಾಜಸತ್ಯವ್ರತ ಅಥವಾ ಶನಿಪ್ರಭಾವ ನಾಟಕ ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಲಾಯಿತು.