ಕನ್ನಡಪ್ರಭ ವಾರ್ತೆ ತುಮಕೂರುಕಾರ್ಮಿಕರು ದೇಶದ ಅಭಿವೃದ್ಧಿಯ, ಆರ್ಥಿಕ ಬೆಳವಣಿಗೆಯ ರೂವಾರಿಗಳು. ಯಾವುದೇ ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರು ತಾವೂ ಬೆಳವಣಿಗೆ ಹೊಂದುವ ಜೊತೆಗೆ ದೇಶದ ಆರ್ಥಿಕ ಶಕ್ತಿ ಹೆಚ್ಚಳಕ್ಕೂ ಕಾರಣರಾಗಿರುತ್ತಾರೆ. ದುಡಿಯುವ ಜನರ ಶ್ರಮ ಶ್ಲಾಘನೀಯ ಎಂದು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಎಚ್. ನಿಂಗಪ್ಪ ಹೇಳಿದರು.ಶುಕ್ರವಾರ ನಗರದ ಜಿಲ್ಲಾ ಜೆಡಿಎಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಅವರ ಸೇವೆ ಪ್ರಶಂಸಿಸಿದರು. ನಗರ ನೈರ್ಮಲ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವವಾದದ್ದು, ನಗರದ ಸ್ವಚ್ಛತೆಗಾಗಿ ಕೆಲಸ ಮಾಡಿ ಜನರ, ಪರಿಸರದ ಆರೋಗ್ಯಕಾಪಾಡುತ್ತಿರುವ ಪೌರಕಾರ್ಮಿಕರನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದು ತಿಳಿಸಿದರು.ಯಾವುದೇ ದೇಶ ಸಂಪತ್ಭರಿತವಾಗಿ, ಸದೃಢವಾಗಿರಲು ದೇಶದ ಆರ್ಥಿಕತೆ ಶಕ್ತಿಯುತವಾಗಿರಬೇಕು.ಉತ್ಪಾದನಾ ಸಾಮರ್ಥ್ಯ ಹೆಚ್ಚಬೇಕು. ಅಂತಹ ಉತ್ಪಾದನೆಯಲ್ಲಿ ತೊಡಗುವ ರೈತರು, ಕಾರ್ಮಿಕರು ಸೇರಿದಂತೆ ದುಡಿಯುವ ವರ್ಗವುದೇಶದ ಶಕ್ತಿ.ಅವರ ದುಡಿಮೆಯ ಫಲ, ಅದರ ಹಿಂದಿನ ಶ್ರಮವನ್ನುಎಲ್ಲರೂ ಗೌರವಿಸಬೇಕು ಎಂದು ಎಚ್.ನಿಂಗಪ್ಪ ಹೇಳಿದರು.ಜೆಡಿಎಸ್ ನಗರ ಅಧ್ಯಕ್ಷ ಟಿ.ಎಚ್. ಜಯರಾಮ್, ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಎಸ್ಟಿ ಘಟಕರಾಜ್ಯಉಪಾಧ್ಯಕ್ಷ ಸೋಲಾರ್‌ ಕೃಷ್ಣಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮೀ ನರಸಿಂಹರಾಜು, ಟಿ.ಜಿ. ನರಸಿಂಹರಾಜು, ಮೋಹನ್‌ಕುಮಾರ್, ಟಿ.ಎ. ಬಾಲಕೃಷ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕುಸುಮಾ ಜಗನ್ನಾಥ್, ಮುಖಂಡರಾದ ಅಶ್ವತ್ಥ್, ಉಪ್ಪಾರಹಳ್ಳಿ ಕುಮಾರ್, ಹೊನ್ನೇಗೌಡ, ಮಂಜುನಾಥ್, ತಾಹೇರಾಕುಲ್ಸಂ, ಲೀಲಾವತಿ, ಲಕ್ಷ್ಮೀ ನಾಯಕ್, ಯಶೋಧ, ಸುವರ್ಣ, ಪ್ರಮೋದ್ ಮತ್ತಿತರರು ಭಾಗವಹಿಸಿದ್ದರು.