ಸಾರಾಂಶ
ಸಹಕಾರಿ ಸಂಘಗಳು ಬೆಳವಣಿಗೆಯಾಗಬೇಕಾದರೆ ಸಾರ್ವಜನಿಕರ ಸಹಕಾರವೇ ಶಕ್ತಿಯಾಗಿದ್ದು, ಸಹಕಾರಿ ಸಂಘಗಳಲ್ಲಿ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಹಕಾರಿ ಸಂಘಗಳು ಬೆಳವಣಿಗೆಯಾಗಬೇಕಾದರೆ ಸಾರ್ವಜನಿಕರ ಸಹಕಾರವೇ ಶಕ್ತಿಯಾಗಿದ್ದು, ಸಹಕಾರಿ ಸಂಘಗಳಲ್ಲಿ ಸಾಲವನ್ನು ಸಕಾಲಕ್ಕೆ ಮರುಪಾವತಿಸಿದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.ಪಟ್ಟಣದ ಗುಳೇದಗುಡ್ಡ ಯುವಶಕ್ತಿ ಸೌಹಾರ್ದ ಸಹಕಾರಿ ಸಂಘದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರಿ ಸಂಘಗಳನ್ನು ಇತ್ತಿಚೀನ ದಿನಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದ್ದು, ಬಡ ಜನರ ಆರ್ಥಿಕ ಮಟ್ಟ ಸುಧಾರಿಸುವಲ್ಲಿ ಸಹಕಾರಿ ಕ್ಷೇತ್ರ ಸಾಕಷ್ಟು ಶ್ರಮವಸಹಿಸುತ್ತಿದೆ ಎಂದರು.
ಬಸವರಾಜ ಶ್ರೀಗಳು, ಮುರುಘಾಮಠದ ಕಾಶಿನಾಥ ಶ್ರೀಗಳು ಉದ್ಘಾಟಿಸಿದರು. ಹುಬ್ಬಳ್ಳಿ ವೀರಬೀಕ್ಷಾವರ್ತಿ ಮಠದ ಪೀಠಾಧ್ಯಕ್ಷ ಶಿವಶಂಕರ ಶಿವಾಚಾರ್ಯ ಶ್ರೀಗಳು, ಒಪ್ಪತ್ತೇಶ್ವರ ಮಠದ್ ಅಭಿನವ ಒಪ್ಪತ್ತೇಶ್ವರ ಶ್ರೀಗಳು, ಅಮರೇಶ್ವರ ಬ್ರಹನ್ಮಠದ ಡಾ.ನೀಲಕಂಠ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಗಣ್ಯರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಮುಖಂಡರಾದ ರವೀಂದ್ರ ಕಲಬುರ್ಗಿ, ಜಿಪಂ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಹೊಳಬಸು ಶೆಟ್ಟರ, ಸಂಜೀವ ಕಾರಕೂನ, ಎಸ್.ಐ.ಚಿಂದಿ, ಈರಣ್ಣ ಹಳ್ಳಿ, ಅಧ್ಯಕ್ಷೆ ಬಸವಣ್ಣೆವ್ವ ಯಂಡಿಗೇರಿ, ಡಾ.ಭೀಮನಗೌಡ ಪಾಟೀಲ, ರಮೇಶ ಅಗಸಿಮನಿ, ಚನ್ನು ಯಂಡಿಗೇರಿ, ನ್ಯಾಯವಾದಿ, ಈರಣ್ಣ ಯಂಡಿಗೇರಿ, ಬಾಬು ಬೊಂಬಲೇಕರ, ದ್ರಾಕ್ಷಾಯಣಿ ಬಂಡಿ, ಸವಿತಾ ಯಂಡಿಗೇರಿ, ಮಹಾದೇವಿ ಕವಡಿಮಟ್ಟಿ, ವಿನೋದ ಗಾಜಿ, ಪ್ರಿಯಾ ಯಂಡಿಗೇರಿ, ಸದಾಶಿವ ಅಳ್ಳೋಳ್ಳಿ, ರಾಜು ಜಾಲಿಗಿಡದ, ಬಸವರಾಜ ಯಂಡಿಗೇರಿ, ಸಾವಿತ್ರಿ ಜೋಗುರು, ಸಂಗಮೇಶ ಚಿಕ್ಕಾಡಿ, ಟಿ.ಎಸ್.ಬೆನಕಟ್ಟಿ, ಮುರಗೇಶ ಹುನಗುಂದ, ಶ್ರೀಕಾಂತ ಮನ್ನೂರ, ಈರಣ್ಣ ಕವಡಿಮಟ್ಟಿ, ಶಿವಲೀಲಾ ಮಾನುಟಗಿ, ಶಂಕ್ರಮ್ಮ ಶೇಬಿನಕಟ್ಟಿ, ಈರಪ್ಪ ಯಂಡಿಗೇರಿ, ಮಂಜುಳಾ ಮನ್ನಿಕಟ್ಟಿ, ವೀರಭದ್ರಪ್ಪ ಹಂಡಿ, ಬೆನಕಪ್ಪ ಶೇಬಿನಕಟ್ಟಿ, ಗಾಯತ್ರಿ ಕುಪ್ಪಸ್ತ, ಮುತ್ತು ಕುಂಬಾರ ಸೇರಿದಂತೆ ಇತರರು ಇದ್ದರು.