ಸಾರಾಂಶ
- ಹರಿಹರದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ । ಚಳವಳಿಗಳಿಂದ ಅನೇಕ ಕ್ಷೇತ್ರಗಳಿಗೆ ಹೊಸ ಚೈತನ್ಯ: ಅಭಿಮತ
- - -ಕನ್ನಡಪ್ರಭ ವಾರ್ತೆ ಹರಿಹರ
ಸಾಮಾನ್ಯ ನಾಗರೀಕರ ಜೀವನಮಟ್ಟದ ಸುಧಾರಣೆ ಸೇರಿದಂತೆ ದೇಶದ ಒಟ್ಟಾರೆ ಅಭಿವೃದ್ಧಿಗೆ ಶಕ್ತಿಯುತ ವ್ಯವಸ್ಥೆಯಾದ ಸಹಕಾರಿ ಕ್ಷೇತ್ರವೇ ಆರ್ಥಿಕ ಬಲವೆಂದು ಶಾಸಕ ಬಿ.ಪಿ. ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ರಾಘವೇಂದ್ರ ಸ್ವಾಮಿ ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಿ, ಸಹಕಾರ ಇಲಾಖೆ–ದಾವಣಗೆರೆ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಸಹಕಾರ ಹಾಲು ಒಕ್ಕೂಟ, ಇಫ್ಫ್ಕೋ, ಕ್ರಿಬ್ಕೋ ಹಾಗೂ ತಾಲೂಕಿನ ವಿವಿಧ ಸಹಕಾರ ಸಂಘ–ಬ್ಯಾಂಕುಗಳ ಸಹಯೋಗದಲ್ಲಿ ಭಾನುವಾರ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ಚಳವಳಿಯಿಂದ ಕೃಷಿ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಹೊಸ ಚೈತನ್ಯ ದೊರಕಿದೆ. ಲಕ್ಷಾಂತರ ಬಡ ಕುಟುಂಬಗಳು ಸಹಕಾರ ಸಂಘಗಳ ಮೂಲಕ ಬದುಕು ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಸಹಕಾರ ಸಂಘಗಳು ಗಟ್ಟಿಯಾಗಿದರೆ ಆರ್ಥಿಕ, ಸಾಮಾಜಿಕ ಬದಲಾವಣೆ ತುಂಬಾ ವೇಗವಾಗಿ ಸಂಭವಿಸುತ್ತದೆ ಎಂದು ಹೇಳಿದರು.ಸಹಕಾರ ಸಚಿವರಾಗಿದ್ದ ರಾಜಣ್ಣ ಈ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವುದು ಶ್ಲಾಘನೀಯ. ಹರಿಹರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಪೂರ್ವಾವಧಿಯಲ್ಲಿಯೂ ಹೆಚ್ಚಿನ ಅನುದಾನ ತರಲು ಸಾಧ್ಯವಾಗಿದ್ದು, ಇಂದಿಗೂ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಕೃಷಿ ವೆಚ್ಚ ಹೆಚ್ಚುತ್ತಿರುವ ಹಾಗೂ ಮೂಲಸೌಕರ್ಯ ಕೊರತೆಯಿಂದ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿಯಲ್ಲಿ, ಸಹಕಾರ ಸಂಘಗಳ ಸಕ್ರಿಯ ಸದಸ್ಯತ್ವ ರೈತರಿಗೆ ಬಲವರ್ಧನೆ ನೀಡುತ್ತದೆ. ಕೋಮಾರನಹಳ್ಳಿ ಪ್ರದೇಶದಲ್ಲಿ ವ್ಯಾಪಕವಾಗಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ಈಗ ಇಳುವರಿ ಕುಸಿದಿರುವುದು ಚಿಂತೆ ಹೆಚ್ಚಿಸಿದೆ ಎಂದರು.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಡಿ.ಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ಕುರಿತು ನ್ಯಾಯವಾದಿ ಮಂಜುನಾಥ ಎಸ್. ದೊಡ್ಡಮನಿ ಉಪನ್ಯಾಸ ನೀಡಿದರು. ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಡಾ. ಜೆ.ಆರ್. ಷಣ್ಮುಖಪ್ಪ, ಬಿ.ರಾಮಚಂದ್ರಪ್ಪ ಅವರನ್ನು ಸನ್ಮಾನಿಸಲಾಯಿತು.
ಪಿ.ಎಲ್.ಡಿ. ಬ್ಯಾಂಕ್ ಹಾಗೂ ಸಹಕಾರ ಒಕ್ಕೂಟ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ. ಹಾಲೇಶಪ್ಪ, ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ಹರಿಹರೇಶ್ವರ ಅರ್ಬನ್ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಜಿ.ಕೆ. ಮಲ್ಲಿಕಾರ್ಜುನ್, ಪಿ.ಕೆ.ಪಿ.ಎಸ್.ಎಸ್. ಅಧ್ಯಕ್ಷ ಜಿ.ಬಿ. ಹಾಲೇಶ್ ಗೌಡ್ರು, ಸಿಬ್ಬಂದಿ ಒಕ್ಕೂಟ ಅಧ್ಯಕ್ಷ ಎಂ.ವಿ. ಮಹದೇವಪ್ಪ, ಎಸ್.ಆರ್. ಬಿರಾದಾರ್, ಸಹಾಯಕ ನಿಬಂಧಕ ಗೋಪಾಲ್ ಸಿ., ಸಹಾಯಕ ನಿರ್ದೇಶಕ ಒ. ಮಂಜುನಾಥ ಸ್ವಾಮಿ, ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀತಾ ಎಚ್., ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಚ್. ಸಂತೋಷ್ ಕುಮಾರ್, ಇಫ್ಕೊ ಪ್ರತಿನಿಧಿ ವಿನಯ್ ಕುಮಾರ್ ಎನ್.ಎಸ್., ಕ್ರಿಬ್ಕೋ ಪ್ರತಿನಿಧಿ ಜಿ.ಟಿ. ಪ್ರದೀಪ್ ಕುಮಾರ್, ಸಿಮುಲ್ ಉಪ ವ್ಯವಸ್ಥಾಪಕಿ ಡಾ. ಸ್ಮಿತಾ ಜೆ.ಎಸ್. ವಿಸ್ತರಣಾಧಿಕಾರಿ ಎಂ.ಸಿ. ಆನಂದಸ್ವಾಮಿ ಇತರರಿದ್ದರು.- - -
-16HRR.04.ಜೆಪಿಜಿ:ಹರಿಹರದ ರಾಘವೇಂದ್ರ ಸ್ವಾಮಿ ಸಮುದಾಯ ಭವನದಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನಡೆಯಿತು.
;Resize=(128,128))
;Resize=(128,128))