ದಾಯಾದಿಗಳ ಕಲಹಕ್ಕೆ ಜೋಳದ ಬೆಳೆಯೇ ನಾಶ

| Published : Jul 11 2025, 11:48 PM IST

ಸಾರಾಂಶ

ಬೆಳಗ್ಗೆ ಯಾರೂ ಇಲ್ಲದ ವೇಳೆ ಜಮೀನಿಗೆ ನುಗ್ಗಿ ಈ ಕೃತ್ಯವ್ಯಸಗಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ನಮ್ಮ ನಡುವೆ ಕೆಲ ಗೊಂದಲಗಳಿದ್ದು, ಇದರ ನಡುವೆ ನಾನು ಭೂಮಿ ಉಳಿಮೆ ಮಾಡುತ್ತಿದ್ದೇನೆ. ಅದನ್ನು ವಿರೋಧಿಸಿದ ನನ್ನ ಅಣ್ಣನ ಕುಟುಂಬ ಕೃತ್ಯ ಎಸಗಿದ್ದಾರೆ.

ಬೇಲೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೆಳೆದುನಿಂತಿದ್ದ ಜೋಳ ಬೆಳೆಯನ್ನು ನಾಶ ಮಾಡಿರುವ ಘಟನೆ ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ರವಿ ಎಂಬುವರು ತಮ್ಮ ಕೂಡು ಕುಟುಂಬದ ಆಸ್ತಿಯಲ್ಲಿ ಬೆಳೆದಿದ್ದ ಜೋಳದ ಬೆಳೆಯನ್ನು ಅವರ ಅಣ್ಣ ರಂಗಸ್ವಾಮಿ ಕುಟುಂಬಸ್ಥರು ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗ್ಗೆ ಯಾರೂ ಇಲ್ಲದ ವೇಳೆ ಜಮೀನಿಗೆ ನುಗ್ಗಿ ಈ ಕೃತ್ಯವ್ಯಸಗಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ನಮ್ಮ ನಡುವೆ ಕೆಲ ಗೊಂದಲಗಳಿದ್ದು, ಇದರ ನಡುವೆ ನಾನು ಭೂಮಿ ಉಳಿಮೆ ಮಾಡುತ್ತಿದ್ದೇನೆ. ಅದನ್ನು ವಿರೋಧಿಸಿದ ನನ್ನ ಅಣ್ಣನ ಕುಟುಂಬ ಕೃತ್ಯ ಎಸಗಿದ್ದಾರೆ. ಬೆಳೆದು ನಿಂತ ಬೆಳೆ ಹಾಳು ಮಾಡುವ ಬದಲು ನಾಲ್ವರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಿತ್ತು. ಇದೀಗ ಸಾವಿರಾರು ರು.ಪ್ರಮಾಣದ ಬೆಳೆ ನಷ್ಟವಾಗಿದೆ. ಈ ಕೃತ್ಯ‌ ಎಸಗಿದವರ ವಿರುದ್ಧ ಕ್ರಮ ಆಗಬೇಕು ಎಂದು ಬೆಳೆ ಕಳೆದುಕೊಂಡ ರವಿ ಆಗ್ರಹಿಸಿದ್ದಾರೆ.