ದೇಶದ ರಕ್ಷಣಾ ನಿಧಿಗೆ ಸಹಕಾರಿ ಸಂಘ ೨.೫ ಲಕ್ಷ ರು. ದೇಣಿಗೆ

| Published : May 20 2025, 01:20 AM IST

ಸಾರಾಂಶ

ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನದ ವಿರುದ್ಧ ಪರಿಣಾಮಕಾರಿ ಸೇನಾ ಕಾರ್ಯಚಾರಣೆ ನಡೆಸಿದ ಭಾರತೀಯ ರಕ್ಷಣಾ ಪಡೆಗೆ ಬೆಂಬಲ ಸೂಚಿಸಿ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘ, ದೇಶದ ರಕ್ಷಣಾ ನಿಧಿಗೆ ೨.೫ ಲಕ್ಷ ರು. ದೇಣಿಗೆ ಹಸ್ತಾಂತರಿಸಿತು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನದ ವಿರುದ್ಧ ಪರಿಣಾಮಕಾರಿ ಸೇನಾ ಕಾರ್ಯಚಾರಣೆ ನಡೆಸಿದ ಭಾರತೀಯ ರಕ್ಷಣಾ ಪಡೆಗೆ ಬೆಂಬಲ ಸೂಚಿಸಿ ಉಪ್ಪಿನಂಗಡಿಯ ಸಹಕಾರಿ ವ್ಯವಸಾಯಿಕ ಸಂಘ, ದೇಶದ ರಕ್ಷಣಾ ನಿಧಿಗೆ ೨.೫ ಲಕ್ಷ ರು. ದೇಣಿಗೆ ಹಸ್ತಾಂತರಿಸಿತು.ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು, ನಿವೃತ್ತ ಬಿಎಸ್‌ಎಫ್ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ ಅವರಿಗೆ ಚೆಕ್ ಹಸ್ತಾಂತರಿಸಿ, ದೇಶದ ಪ್ರತಿಯೋರ್ವ ರಾಷ್ಟ್ರ ಮೊದಲು ಉಳಿದೆಲ್ಲವೂ ಬಳಿಕ ಎನ್ನುವ ತತ್ವದ ಪಾಲನೆ ಮಾಡಬೇಕು. ದೇಶದ ಹಿತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಮನೋಸಂಕಲ್ಪ ನಮ್ಮದಾಗಿರಬೇಕು. ಈ ನಿಟ್ಟಿನಲ್ಲಿ ಉಪ್ಪಿನಂಗಡಿ ಸಹಕಾರಿ ಸಂಘದ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ನಿರ್ದೇಶಕರು ತಮ್ಮ ಮೀಟಿಂಗ್ ಭತ್ಯೆಯನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ದಯಾನಂದ ಸರೋಳಿ, ಸದಸ್ಯರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ರಾಘವ ನಾಯ್ಕ, ಸಂಘದ ಮಾಜಿ ಅಧ್ಯಕ್ಷ ಯಶವಂತ ಜಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ., ಸಿಬ್ಬಂದಿ ಪುಷ್ಪರಾಜ ಶೆಟ್ಟಿ, ಪ್ರವೀಣ್ ಆಳ್ವ ಮತ್ತಿತರರು ಭಾಗವಹಿಸಿದ್ದರು.