ಸಾರಾಂಶ
ರಾಣಿಬೆನ್ನೂರು: ಸಹಕಾರಿ ಕ್ಷೇತ್ರ ಬೆಳೆದಾಗ ಮಾತ್ರ ದೇಶ ಪ್ರಗತಿ ಹೊಂದುತ್ತದೆ ಎಂದು ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಹೇಳಿದರು.ನಗರದ ಕುರುಬಗೇರಿ ಕ್ರಾಸ್‌ನ ಗುರು ಮಾರ್ಕಂಡೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಗಳು ಬೆಳೆಯಬೇಕೆಂದರೆ ಸರಿಯಾದ ರೀತಿಯಲ್ಲಿ ಆಡಳಿತ ನೀಡಿದಾಗ ಮಾತ್ರ ಸಾಧ್ಯವಾಗುತ್ತದೆ. ಇದರ ಜೊತೆಗೆ ಸಿಬ್ಬಂದಿಗಳು, ಪಿಗ್ಮಿ ಏಜೆಂಟರು, ನಿರ್ದೇಶಕರ ನಿಸ್ವಾರ್ಥ ಸೇವೆ ಹಾಗೂ ಸಾಲವನ್ನು ಪಡೆದ ಶೇರುದಾರರು ಸಾಲ ಮುಟ್ಟಿಸುವುದು ಸರಿಯಾಗಿ ಮುಟ್ಟಿಸಿದಾಗ ಮಾತ್ರ ಹಣಕಾಸು ಸಂಸ್ಥೆ ಉತ್ತಮ ಸ್ಥಿತಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪದ್ಮಶಾಲಿ ಸಮಾಜದ ವಿದ್ಯಾರ್ಥಿಗಳಾದ ಶ್ರೇಯಾ ಕರಡಿಮನಿ, ಸಂಜನಾ ಸುರೇಶ ಬಾದಾಮಿ, ಸುಜಾತ, ಸಹನ ಗುರುರಂ, ಚೈತ್ರ ಮಂಚಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪದ್ಮಶಾಲಿ ಸಮಾಜ ಮಾಜಿ ಅಧ್ಯಕ್ಷ ಕೆ.ಕೆ.ಹಳ್ಳಳ್ಳಿ, ನಾಗರಾಜ ಅಗಡಿ, ಲಕ್ಷ್ಮಣ್ ಕಡ್ಲಿಬಾಳ, ಶಂಕ್ರಣ್ಣ ಗರಡಿಮನಿ, ನಿರ್ದೇಶಕರಾದ ನೀಲಪ್ಪ ಕುಮಾರಪ್ಪನವರ, ಎಲ್ಲಪ್ಪ ಗುತ್ತಲ, ಪ್ರಕಾಶ್ ಅಗಡಿ, ಶಂಕ್ರಣ್ಣ ಗರಡಿಮನಿ, ಚೈತ್ರ ಹುಬ್ಬಳ್ಳಿ, ವಸುಂದರ ಸಬ್ಬ, ಬಸವರಾಜ ನೇಕರ, ಹನುಮಂತಪ್ಪ ಅಗಡಿ, ಸುರೇಶ ಬಾದಾಮಿ, ಕರಬಸಪ್ಪ ಕೋಗಳೆ, ರಮೇಶ್ ಮೆಡಪಲ್ಲಿ, ಗೋವಿಂದಪ್ಪ ಗುರಮ್, ಶಂಕ್ರಪ್ಪ ನೇಕಾರ, ಪ್ರೇಮನಾಥ್ ಲದ್ವಾ, ಕುಮಾರ ಹಿರೇಮಠ, ಮಂಜುಳ ರೋಗಣ್ಣನವರ, ಜಗದೀಶ್ ಅಗಡಿ, ಗುರುರಾಜ ಕುಮಾರಪ್ಪನವರ, ಮಹಾಂತೇಶ ಮಲ್ಲೂರು, ಕರಬಸಪ್ಪ ಹಳ್ಳಳ್ಳಿ, ವ್ಯವಸ್ಥಾಪಕ ಪ್ರೇಮನಾಥ್ ಲದ್ವಾ ಸೇರಿದಂತೆ ಮತ್ತಿತರು ಇದ್ದರು.