ಸಾರಾಂಶ
ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಮಹಾರಾಷ್ಟ್ರದ ಟೊಯೊಟೊ ಕಿರ್ಲೋಸ್ಕರ್‌ನ ಜನರಲ್ ಮ್ಯಾನೇಜರ್ ಗುರುಪ್ರಸಾದ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕೌಶಲ ಜ್ಞಾನ ಹೊಂದಿರುವ ತಂತ್ರಜ್ಞರಿಗೆ ವಿಶ್ವದೆಲ್ಲಡೆ ವಿಫುಲ ಅವಕಾಶಗಳಿವೆ. ಇಂಥ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ಯಮಿಗಳಾದಾಗ ಅಥವಾ ಉದ್ಯೋಗಿಗಳಾದಾಗ ತಾವು ಬೆಳೆಯುವುದರ ಜತೆಗೆ ದೇಶದ ಆರ್ಥಿಕ ವ್ಯವಸ್ಥೆಯನ್ನು ಸದೃಢಗೊಳಿಸುವ ಸಾಮರ್ಥ್ಯ ಹೊಂದಬಲ್ಲರು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಎಸ್ಎನ್‌ಎಂ ಪಾಲಿಟೆಕ್ನಿಕ್ ಸಂಸ್ಥೆಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಮಹಾರಾಷ್ಟ್ರದ ಟೊಯೊಟೊ ಕಿರ್ಲೋಸ್ಕರ್‌ನ ಜನರಲ್ ಮ್ಯಾನೇಜರ್ ಗುರುಪ್ರಸಾದ್ ಮಾತನಾಡಿದರು.ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಕಾರ್ಯದರ್ಶಿ ಶಶಾಂಕ್ ಭಾಗವಹಿಸಿದ್ದರು. ಪ್ರಾಂಶುಪಾಲ ಜೆ.ಜೆ. ಪಿಂಟೊ ಸ್ವಾಗತಿಸಿದರು. ಎಸ್.ಪಿ. ಗುರುದಾಸ್ ನಿರೂಪಿಸಿದರು. ಉಪನ್ಯಾಸಕಿ ಸ್ವಪ್ನಾ ವಂದಿಸಿದರು.