ತರಳಬಾಳು ಬೃಹನ್ಮಠವನ್ನು ಕಟ್ಟಿ, ಸಮಾಜ ಸಂಘಟಿಸಿದ ಶ್ರೇಯಸ್ಸು ಶಿವಕುಮಾರ ಶ್ರೀಗೆ ಸಲ್ಲುತ್ತದೆ: ನಿವೃತ್ತ ಶಿಕ್ಷಕ ಪುಟ್ಟಪ್ಪ ಟಿ.

| Published : Sep 16 2024, 01:46 AM IST / Updated: Sep 16 2024, 01:47 AM IST

ತರಳಬಾಳು ಬೃಹನ್ಮಠವನ್ನು ಕಟ್ಟಿ, ಸಮಾಜ ಸಂಘಟಿಸಿದ ಶ್ರೇಯಸ್ಸು ಶಿವಕುಮಾರ ಶ್ರೀಗೆ ಸಲ್ಲುತ್ತದೆ: ನಿವೃತ್ತ ಶಿಕ್ಷಕ ಪುಟ್ಟಪ್ಪ ಟಿ.
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ತರಳಬಾಳು ಜಗದ್ಗುರು ಬೃಹನ್ಮಠವನ್ನು ಸಮೃದ್ಧವಾಗಿ ಕಟ್ಟಿ, ಸಮಾಜವನ್ನು ಸಂಘಟಿಸಿದ ಶ್ರೇಯಸ್ಸು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಜಿಯವರಿಗೆ ಸಲ್ಲುತ್ತದೆ ಎಂದು ನಿವೃತ್ತ ಶಿಕ್ಷಕ ಪುಟ್ಟಪ್ಪ ಟಿ.ಹೇಳಿದರು.

ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನೆಡೆದ ಪ್ರಾದೇಶಿಕ ಹಂತದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭ

ಕನ್ನಡಪ್ರಭ ವಾರ್ತೆ, ತರೀಕೆರೆ

ತರಳಬಾಳು ಜಗದ್ಗುರು ಬೃಹನ್ಮಠವನ್ನು ಸಮೃದ್ಧವಾಗಿ ಕಟ್ಟಿ, ಸಮಾಜವನ್ನು ಸಂಘಟಿಸಿದ ಶ್ರೇಯಸ್ಸು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಜಿಯವರಿಗೆ ಸಲ್ಲುತ್ತದೆ ಎಂದು ನಿವೃತ್ತ ಶಿಕ್ಷಕ ಪುಟ್ಟಪ್ಪ ಟಿ.ಹೇಳಿದರು.ನೇರಲಕೆರೆ ಶ್ರೀ ಅಮೃತೇಶ್ವರ ಪ್ರೌಢಶಾಲೆ ಆವರಣದಲ್ಲಿ ನಡೆದ ಶ್ರೀ ಮುದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ ೧೧೦೮ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಯವರ 32ನೇ ಶ್ರದ್ಧಾಂಜಲಿ, ಬೀರೂರು ಮತ್ತು ಚಿಕ್ಕಮಗಳೂರು ಪ್ರಾದೇಶಿಕ ಹಂತದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭದಲ್ಲಿ ಪ್ರಧಾನ ಉಪನ್ಯಾಸ ನೀಡಿದರು.ಲಿಂಗೈಕ್ಯ ಶ್ರೀಗಳು ಗ್ರಾಮೀಣ ಭಾಗದಲ್ಲಿ ಶಾಲಾ-ಕಾಲೇಜ್‌ಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ವಿದ್ಯಾ ಭ್ಯಾಸಕ್ಕೆ ಪ್ರೇರಣೆ ನೀಡಿದರು. ಶ್ರೀಗಳ ಆದರ್ಶಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಜೀವನವನ್ನು ಪಾವನ ಮಾಡಿಕೊಳ್ಳೋಣ ಎಂದು ಹೇಳಿದರು. ಬೀರೂರು ವಲಯದ ಪ್ರಾದೇಶಿಕ ಅಧಿಕಾರಿ ಹಾಲೇಶ್ ಕೆ ಟಿ ಮಾತನಾಡಿ ಶ್ರೀಗಳು ಒಬ್ಬ ವ್ಯಕ್ತಿಯಾಗಿರಲಿಲ್ಲ. ಅವರೊಂದು ಶಕ್ತಿ. ನಮ್ಮಂತ ಪದವೀಧರರು ಕೆಲಸ ಪಡೆಯಲು ಅವರು ಕಟ್ಟಿ ಬೆಳೆಸಿದ ಶಾಲಾ-ಕಾಲೇಜುಗಳು ಆಧಾರವಾಗಿರುವ ವಿಷಯವನ್ನು ಸ್ಮರಿಸಿದರು. ನಾವೆಲ್ಲರೂ ಅವರ ಆದರ್ಶಗಳ ಹಾದಿಯಲ್ಲಿ ನಡೆಯೋಣ ಎಂದರು. ಚಿಕ್ಕಮಗಳೂರು ವಲಯದ ಪ್ರಾದೇಶಿಕ ಅಧಿಕಾರಿ ಸಂತೋಷ್‌ಕುಮಾರ್ ಜಿ ಮಾತನಾಡಿ ಶ್ರೀಗಳು ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾವೆಲ್ಲ ಸಾಗೋಣ ಎಂದು ಹೇಳಿದರು.ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಟಿ. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶ್ರೀಗಳು ನಮ್ಮೆಲ್ಲರ ಜೀವನಕ್ಕೆ ದಿಕ್ಕನ್ನು ತೋರಿಸಿದ್ದಾರೆ. ಶ್ರೀಗಳು ನಡೆದಾಡಿದ ಪ್ರದೇಶಗಳು ಇಂದು ತೆಂಗು-ಕಂಗಿನಿಂದ ನಳ-ನಳಿಸುತ್ತಿರುವುದನ್ನು ನೆನಪಿಸಿಕೊಳ್ಳುತ್ತಾ ಅವರು ನಮ್ಮೆಲ್ಲರ ಬಾಳಿನ ಭಾಗ್ಯಧಾತರು ಎಂದು ಹೇಳಿದರು.ಮುಖಂಡರಾದ ಷಡಕ್ಷರಪ್ಪ, ಚಿಟ್ಟಕ್ಕಿ ಬಸಪ್ಪ, ಮತ್ತಿತರರು ಮಾತನಾಡಿದರು. ಸ್ಥಳೀಯ ಸಲಹಾ ಸಮಿತಿ ಸದಸ್ಯರಾದ ಈಶ್ವರಪ್ಪ ಎನ್ ಪಿ, ಬಸವರಾಜಪ್ಪ ಎನ್ ಟಿ, ಮಲ್ಲೇಶಪ್ಪ ಎಸ್, ಓಂಕಾರಪ್ಪ, ಬಸವರಾಜ್ ಎನ್ ಎಂ, ನಾಗರಾಜಪ್ಪ, ಪಾರ್ವತಮ್ಮ ಪ್ರಕಾಶ್, ಹಿರಿಯ ಶಿಕ್ಷಕರಾದ ಖಜರ್ ಖಾನ್, ಶಿಕ್ಷಕಿ ಮಂಜುಳ ಮಲ್ಲಿಗವಾಡ, ಶಿಕ್ಷಕ ಸತೀಶ್ ನಂದಿಹಳ್ಳಿ ಮತ್ತಿತರರು ಭಾಗವಹಿಸಿದ್ದರು.

15ಕೆಟಿಆರ್.ಕೆ.9ಃ

ತರೀಕೆರೆ ಸಮೀಪದ ನೇರಲಕೆರೆ ಗ್ರಾಮದ ಶ್ರೀ ಅಮೃತೇಶ್ವರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಪುಟ್ಟಪ್ಪ ಟಿ, ಶಾಲಾ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಪ್ಪ ಟಿ, ಬೀರೂರು ವಲಯದ ಪ್ರಾದೇಶಿಕ ಅಧಿಕಾರಿ ಹಾಲೇಶ್ ಕೆ ಟಿ ಮತ್ತಿತರರು ಇದ್ದರು.