ಸಾರಾಂಶ
ಚನ್ನಪಟ್ಟಣ: ಶಾಸಕರಿಗೆ 50 ಕೋಟಿ ಅನುದಾನ ನೀಡಿದ ವಿಚಾರ ಬಜೆಟ್‌ನಲ್ಲೇ ತೀರ್ಮಾನ ಮಾಡಲಾಗಿತ್ತು. ಅದಕ್ಕೆ 8 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದೆವು.
ಚನ್ನಪಟ್ಟಣ: ಶಾಸಕರಿಗೆ 50 ಕೋಟಿ ಅನುದಾನ ನೀಡಿದ ವಿಚಾರ ಬಜೆಟ್‌ನಲ್ಲೇ ತೀರ್ಮಾನ ಮಾಡಲಾಗಿತ್ತು. ಅದಕ್ಕೆ 8 ಸಾವಿರ ಕೋಟಿಯನ್ನು ಮೀಸಲಿಟ್ಟಿದ್ದೆವು.
ಪಿಡಬ್ಲ್ಯೂಡಿ ಅಡಿ ರಸ್ತೆ, ಸೇತುವೆ ಹಾಗೂ ಶಾಸಕರ ವಿವೇಚನೆಗೆ ಅನುಗುಣವಾಗಿ ಹಣ ಕೊಟ್ಟಿದ್ದೇವೆ. ಬಿಜೆಪಿ-ಜೆಡಿಎಸ್‌ನವರು ತಾಳ್ಮೆಯಿಂದ ಇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ತಾಲೂಕಿನ ಹೊಂಗನೂರು ಗ್ರಾಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಚ್.ಎಂ.ವೆಂಕಟಪ್ಪ 14 ಕೋಟಿ ವೆಚ್ಚದಲ್ಲಿ ಕಣ್ವ ಫೌಂಡೇಷನ್‌ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೊದಲು ನೀವು ಕೊಟ್ಟಿರೋದೇನು ಮೊದಲು ಹೇಳಿ. ನನಗೆ ಸ್ಯಾಂಕ್ಷನ್ ಆಗಿದ್ದ ಮೆಡಿಕಲ್ ಕಾಲೇಜು ಕಿತ್ತುಕೊಳ್ಳಲಿಲ್ವಾ.? ಅದನ್ನ ಮರೆತುಬಿಟ್ಟಿದ್ದೀರಾ? ಆದರೆ ನಾವು ಆ ಕೆಲಸ ಮಾಡಲ್ಲ. ಈಗ ಪ್ರಾರಂಭ ಆಗಿದೆ ಎಲ್ಲರಿಗೂ ಅನುದಾನ ಕೊಡುತ್ತೇವೆ ಎಂದರು.ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ರೀತಿ ಯಾವುದೇ ಬಾಂಬ್ ಬೆದರಿಕೆ ಇಲ್ಲ. ಎಲ್ಲರು ಮುನ್ನೆಚ್ಚರಿಕೆಯಿಂದ ಇರಿ. ನಮ್ಮ ಪೊಲೀಸ್ ಅಧಿಕಾರಿಗಳು ಅದನ್ನ ನೋಡಿಕೊಳ್ಳುತ್ತಾರೆ ಎಂದರು.
ಸಣ್ಣಪುಟ್ಟ ಅಂಗಡಿಗಳಿಗೆ ಜಿಎಸ್ಟಿ ತೆರಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಇದರ ಬಗ್ಗೆ ನಾವು ರಿಸರ್ಚ್ ಮಾಡುತ್ತಿದ್ದೇವೆ ಎಂದರು.