ಸಾರಾಂಶ
ನರಗುಂದ: ಉದಾತ್ತ ಸೇವಾ ಮನೋಭಾವದಿಂದ ಮಾಡುವ ಯಾವುದೇ ಕೆಲಸ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ರಾಷ್ಟ್ರೀಯ ಸೇವಾ ಯೋಜನೆ ಇಂತಹ ಸೇವೆಯನ್ನು ಸಮುದಾಯಕ್ಕೆ ನೀಡಲು ಒಂದು ಒಳ್ಳೆಯ ವೇದಿಕೆಯನ್ನು ನೀಡುತ್ತದೆ. ಮೇಲಾಗಿ ದೇಶದ ಅಭಿವೃದ್ಧಿ ಗ್ರಾಮಗಳ ಮೇಲೆ ನಿಂತಿದೆ ಎಂದು ಚಿಕ್ಕನರಗುಂದ ಗ್ರಾಪಂ ಸದಸ್ಯ ಮುತ್ತುರಡ್ಡಿ ರಾಯರಡ್ಡಿ ಹೇಳಿದರುಅವರು ತಾಲೂಕಿನ ಅರಷಿಣಗೋಡಿ ಗ್ರಾಮದಲ್ಲಿ ಪಟ್ಟಣದ ಶ್ರೀ ಯಡಿಯೂರ ಸಿದ್ಧಲಿಂಗೇಶ್ವರ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಆನಂತರ ಮಾತನಾಡಿ, ದೇಶದ ಅಭಿವೃದ್ಧಿ ಗ್ರಾಮಗಳ ಮೇಲೆ ನಿಂತಿದೆ. ಅಂತಹ ಗ್ರಾಮಗಳನ್ನು ಉದ್ಧಾರ ಮಾಡುವಲ್ಲಿ ಯುವಕರ ಪಾತ್ರ ಮುಖ್ಯವಾಗಿದೆ ಎಂದರು. ಎಸ್ ವೈ ಎಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅಜ್ಜನಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಗ್ರಾಮಗಳ ಕಡೆಗೆ ತಿರುಗಬೇಕಿದೆ. ಅಲ್ಲಿನ ಆಚರಣೆ, ಸಂಪ್ರದಾಯ ಮತ್ತು ಸಂಸ್ಕೃತಿ ಅರಿಯಬೇಕು ಎಂದರು. ಪ್ರಾಂಶುಪಾಲ ಪ್ರೊ ಆರ್.ಬಿ. ಪಾಟೀಲ್ ಮಾತನಾಡಿ, ಎನ್.ಎಸ್.ಎಸ್ ಎಂಬುದು ನಮ್ಮ ಸುತ್ತಲಿನ ಸಮುದಾಯದ ಸುಧಾರಣೆಗಾಗಿ ಕೆಲಸ ಮಾಡುವ ವಿದ್ಯಾರ್ಥಿಗಳ ಸ್ವಯಂಸೇವಾ ಗುಂಪಾಗಿದೆ. ಅವರು ತಮ್ಮ ಸುತ್ತಲಿನ ಸುಧಾರಿತ ಸಮಾಜಕ್ಕಾಗಿ ಶ್ರಮಿಸುವ ಸಮಾಜ ಸೇವಕರು ಎನ್.ಎಸ್.ಎಸ್. ನ ಧ್ಯೇಯವಾಕ್ಯ ನಾನಲ್ಲ, ನೀನು, ಇದು ಪ್ರಜಾಪ್ರಭುತ್ವದ ಜೀವನದ ಸಾರವನ್ನು ಪ್ರತಿಬಿಂಬಿಸುತ್ತದೆ ಮತ್ತು ನಿಸ್ವಾರ್ಥ ಸೇವೆಯ ಅಗತ್ಯವನ್ನು ಎತ್ತಿ ಹಿಡಿಯುತ್ತದೆ. ಈ ಯೋಜನೆಯ ಒಟ್ಟಾರೆ ಉದ್ದೇಶ ಸಮುದಾಯದಿಂದ ಸಮುದಾಯಕ್ಕೆ ಶಿಕ್ಷಣ ಮತ್ತು ಸೇವೆಗಳನ್ನು ನೀಡುವುದಾಗಿದೆ ಎಂದರು. ಪದವಿ ಕಾಲೇಜಿನ ಪ್ರಾಚಾರ್ಯರಾದ ಜಿ.ವಿ. ಕಲ್ಲೇದ ಮಾತನಾಡಿ, ಜೀವನದ ಪರಿಣಾಮವಾಗಿ ಸಾಮಾಜಿಕ ಸಹಭಾಗಿತ್ವದ ಕೊರತೆಯಿಂದ ಸಹಬಾಳ್ವೆಯ ಬದುಕು ಎನ್ನುವುದು ಗ್ರಾಮೀಣ ಪ್ರದೇಶದಿಂದಲೂ ಮರೀಚಿಕೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಹಾಗಾಗಿ ವಿದ್ಯಾರ್ಥಿ ಜೀವನದಿಂದಲೇ ಸಾಮಾಜಿಕ ಸೇವೆಯ ಮನೋಭಾವ ಮತ್ತು ಸಹ ಬಾಳ್ವೆಯ ಜೀವನ ಶೈಲಿಯನ್ನು ಮರಳಿ ರೂಪಿಸಿಕೊಳ್ಳಲು ಈ ರಾಷ್ಟ್ರೀಯ ಸೇವಾ ಯೋಜನೆಯು ಉತ್ತಮ ಅನುಭವಗಳನ್ನು ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಎಂ. ಪಿ. ಕ್ಯಾತನಗೌಡ್ರ ಸ್ವಯಂಸೇವಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಕಾರ್ಯಕ್ರಮದಲ್ಲಿ ಚಿಕ್ಕನರಗುಂದ ಗ್ರಾಪಂ ಅಧ್ಯಕ್ಷೆ ಮಲ್ಲವ್ವ ಮರೆಣ್ಣವರ, ಉಪಾಧ್ಯಕ್ಷೆ ಶೃತಿ ಬ್ಯಾಳಿ, ಸದಸ್ಯರುಗಳಾದ ಶರಣಪ್ಪ ಹಳೇಮನೆ ಹಾಗೂ ಎಸ್‌ವೈಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಹೇಶಗೌಡ ಪಾಟೀಲ, ನಿರ್ದೇಶಕರಾದ ಈರನಗೌಡ ಪಾಟೀಲ, ಶಿವನಗೌಡ ಪಾಟೀಲ, ಬೋಧಕ ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ಮುಂತಾದವರು ಇದ್ದರು.
ಶ್ವೇತಾ ಹಾದಿಮನಿ ಸ್ವಾಗತಿಸಿದರು. ಪವಿತ್ರ ಚನ್ನಪ್ಪಗೌಡ್ರ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ಚನ್ನಪ್ಪಗೌಡ್ರ ವಂದಿಸಿದರು.