ಜನಪದಕ್ಕೆ ಜಿಲ್ಲೆಯ ಕೊಡುಗೆ ಅಪಾರ: ಸಚಿವ ತಿಮ್ಮಾಪೂರ

| Published : Oct 03 2025, 01:07 AM IST

ಜನಪದಕ್ಕೆ ಜಿಲ್ಲೆಯ ಕೊಡುಗೆ ಅಪಾರ: ಸಚಿವ ತಿಮ್ಮಾಪೂರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಂದು ಹೆಣ್ಣು ಮಕ್ಕಳನ್ನು ಗೌರವಿಸಬೇಕು. ಅದಕ್ಕೆ ನಮ್ಮ ಸರ್ಕಾರ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಗ್ಯಾರಂಟಿ ಯೋಜನೆಗಳು ಜಾರಿಗೆ ಮಾಡಿದೆ

ಕನ್ನಡಪ್ರಭ ವಾರ್ತೆ ಲೋಕಾಪುರ

ಗ್ರಾಮೀಣ ಭಾಗದ ಜಾನಪದ ಕಲೆಗಳು ಇಂದಿಗೂ ಜೀವಂತವಾಗಿರಲು ಜಿಲ್ಲೆಯ ಕಲಾವಿದರ ಕೊಡುಗೆ ಅಪಾರವಿದೆ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ಜಾನಪದ ಪರಿಷತ್ತು ಮಹಿಳಾ ವಲಯ ಘಟಕದ ವತಿಯಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅ.5 ರಂದು ನಡೆಯಲಿರುವ ತಾಲೂಕು ಮಟ್ಟದ ಮಹಿಳಾ ಜಾನಪದ ಸಮ್ಮೇಳನದ ಲಾಂಛನವನ್ನು ಬುಧವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಹಳ್ಳಿಗಳ ಜನಪದ ಹಾಡುಗಳು ಸಮಾಜ ಸುಧಾರಣೆ ಹಾಗೂ ಮನುಷ್ಯ ನಿಜ ಜೀವನದಲ್ಲಿ ಯಾವ ರೀತಿ ಜೀವನ ಸಾಗಿಸಬೇಕೆಂಬುದು ತಿಳಿಸಿಕೊಡುತ್ತದೆ. ಲೋಕಾಪುರ ಪಟ್ಟಣ ಕಲಾವಿದರ ತವರೂರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಠಾಣಿಕೇರಿ ಗ್ರಾಮದ ನಾಡೋಜ ಪ್ರಶಸ್ತಿ ಪುರಸ್ಕೃತೆ ಯಲ್ಲವ್ವ ರೊಡ್ಡಪ್ಪನವರ ಅವರನ್ನು ಸಂಘಟಕರು ಆಯ್ಕೆ ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.

ಹೆಣ್ಣು ಅಬಲೆ ಅಲ್ಲ. ಸಮಾಜದಲ್ಲಿ ಸಬಲರಾಗಿ ಬೆಳೆಯಬೇಕು. ಪ್ರತಿಯೊಂದು ಹೆಣ್ಣು ಮಕ್ಕಳನ್ನು ಗೌರವಿಸಬೇಕು. ಅದಕ್ಕೆ ನಮ್ಮ ಸರ್ಕಾರ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಗ್ಯಾರಂಟಿ ಯೋಜನೆಗಳು ಜಾರಿಗೆ ಮಾಡಿದೆ ಎಂದು ಹೇಳಿದರು.

ಜಿಲ್ಲಾ ಬಿಡಿಸಿಸಿ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಲೋಕಾಪುರ ಭಾಗದಲ್ಲಿ ಮಹಿಳೆಯರು ಸಂಘಟಕರಾಗಿ ಅದ್ಧೂರಿಯಾಗಿ ಮಹಿಳಾ ಸಮ್ಮೇಳನ ಮಾಡುತ್ತಿರುವದು ಹೆಮ್ಮೆಯ ಸಂಗತಿ. ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು, ಮುಖಂಡರು, ಮಹಿಳೆಯರು, ಯುವಕರು, ಮಕ್ಕಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಮ್ಮೇಳನದ ಮೆರವಣಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಅಶೋಕ ಕಿವಡಿ, ಯುವ ಮುಖಂಡ ಗುರುರಾಜ ಉದಪುಡಿ, ಆನಂದ ಹಿರೇಮಠ, ಬೀರಪ್ಪ ಮಾಯನ್ನವರ, ಗೋವಿಂದ ಕೌಲಗಿ, ಭೀಮನಗೌಡ ಪಾಟೀಲ, ಸಿಂಧೂರ ಆನೆಗುದ್ದಿ, ಅಬ್ದುಲ್‌ರಹಿಮಾನ್ ತೊರಗಲ್, ಎಸ್.ಎಂ. ರಾಮದುರ್ಗ, ಫಯಾಜ್‌ ಮನಿಯಾರ, ಚಂದ್ರಕಾಂತ ರಂಗಣ್ಣವರ, ಶ್ರೀಕಾಂತ ನರಹಟ್ಟಿ, ಸಮ್ಮೇಳನದ ಸರ್ವಾಧ್ಯಕ್ಷ ನಾಡೋಜ ಪ್ರಶಸ್ತಿ ಪುರಸ್ಕೃತೆ ಯಲ್ಲವ್ವ ರೊಡ್ಡಪ್ಪನವರ, ಕಜಾಪ ವಲಯ ಘಟಕದ ಮಹಿಳಾ ಅಧ್ಯಕ್ಷೆ ರೇಖಾ ನರಹಟ್ಟಿ, ಮಂಜುಳಾ ಸಂಬಾಳದ, ಶಕುಂತಲಾ ಹುಲ್ಲನ್ನವರ, ಇಮಾಂಬು ಮಹಾಲಿಂಗಪೂರ, ಪಟ್ಟಣದ ಹಿರಿಯರು, ಮುಖಂಡರು,ಯುವಕರು, ಕಜಾಪ ಮಹಿಳಾ ಪದಾಧಿಕಾರಿಗಳು ಇದ್ದರು.

ಜಾನಪದ ಸಾಹಿತ್ಯದಲ್ಲಿ ನಮ್ಮ ನಾಡಿನ ಸಂಸ್ಕೃತಿ ಸಂಪ್ರದಾಯ ಅಡಗಿದೆ. ಪ್ರತಿಯೊಬ್ಬರು ಕಲಾವಿದರಿಗೆ ಗೌರವ ನೀಡುವುದರ ಜೊತೆಗೆ ಗ್ರಾಮೀಣ ಭಾಗದ ಜನಪದ ಕಲೆಯನ್ನು ಬೆಳೆಸಿ ಉಳಿಸಲು ಮುಂದಾಗಬೇಕು. ಶಿವಾನಂದ ಉದಪುಡಿ, ಜಿಲ್ಲಾ ಬಿಡಿಸಿಸಿ ಮಾಜಿ ಉಪಾಧ್ಯಕ್ಷ