ಇಡಿ ತನಿಖೆ ಸಿಎಂ ಮನೆಯಂಗಳಕ್ಕಲ್ಲ, ಕುತ್ತಿಗೆಗೆ ಬಂದಿದೆ

| Published : Dec 06 2024, 08:58 AM IST

ಇಡಿ ತನಿಖೆ ಸಿಎಂ ಮನೆಯಂಗಳಕ್ಕಲ್ಲ, ಕುತ್ತಿಗೆಗೆ ಬಂದಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಸೈಟ್ ಹಗರಣದ ಇಡಿ ತನಿಖೆ ಇದೀಗ ಮುಖ್ಯಮಂತ್ರಿ ಮನೆ ಅಂಗಳಕ್ಕೆ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುತ್ತಿಗೆಗೆ ಬಂದಿದ್ದು, ಕಳ್ಳ ಮಾಲು ವಾಪಾಸ್ಸು ಕೊಟ್ಟರೆ ಕೇಸೇ ಇಲ್ವಾ? ನಮಗೆ ಗೊತ್ತಿದೆ, ನಿಮ್ಮನ್ನು ಬಗ್ಗಿಸ್ತೀವಿ, ಜಗ್ಗೀಸ್ತೀವಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಗುಟುರು ಹಾಕಿದ್ದಾರೆ.

ಕನ್ನಡಪ್ರಭ ವಾರ್ತೆ ದಾವಣಗೆರೆ ಮುಡಾ ಸೈಟ್ ಹಗರಣದ ಇಡಿ ತನಿಖೆ ಇದೀಗ ಮುಖ್ಯಮಂತ್ರಿ ಮನೆ ಅಂಗಳಕ್ಕೆ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುತ್ತಿಗೆಗೆ ಬಂದಿದ್ದು, ಕಳ್ಳ ಮಾಲು ವಾಪಾಸ್ಸು ಕೊಟ್ಟರೆ ಕೇಸೇ ಇಲ್ವಾ? ನಮಗೆ ಗೊತ್ತಿದೆ, ನಿಮ್ಮನ್ನು ಬಗ್ಗಿಸ್ತೀವಿ, ಜಗ್ಗೀಸ್ತೀವಿ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಗುಟುರು ಹಾಕಿದ್ದಾರೆ. ಹರಿಹರ ತಾ. ಭಾನುವಳ್ಳಿ ಗ್ರಾಮದ ಹಿಂದೂ ರುದ್ರಭೂಮಿಗೆ ಗುರುವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ತನಿಖೆ ಇದೀಗ ಸಿಎಂ ಸಿದ್ದರಾಮಯ್ಯ ಮನೆ ಅಂಗಳಲ್ಲ, ಕುತ್ತಿಗೆಗೆ ಬಂದು ನಿಂತಿದೆ. ನಾನು ಯಾರಿಗೂ ಬಗ್ಗೋದಿಲ್ಲ, ಜಗ್ಗೋದಿಲ್ಲ ಎಂದವರು ಯಾಕೆ ಸೈಟ್‌ಗಳನ್ನು ವಾಪಾಸ್ಸು ಕೊಟ್ಟರು ಎಂದು ಪ್ರಶ್ನಿಸಿದರು. ಕಳ್ಳ ಮಾಲನ್ನು ವಾಪಾಸ್ಸು ಕೊಟ್ಟರೆ ಕೇಸ್ ಇಲ್ಲವೇ? ಕಾಂಗ್ರೆಸ್‌ನಲ್ಲಿ ನ್ಯಾಯ ಅಘೋಷಿತವಾಗಿದೆ. ಯಾವ ಬುಕ್‌ ನಲ್ಲೂ ಇಲ್ಲದ ನ್ಯಾಯ ಕಾಂಗ್ರೆಸ್ಸಿನವರಿಗೆ ಇರುತ್ತದೆ. ಯಾರು ಬೇಕಾದ್ರೂ ಕದಿಯಿರಿ. ಸಿಕ್ಕಿ ಹಾಕಿಕೊಂಡರೆ ಮಾಲು ಸಮೇತ ವಾಪಾಸ್ಸು ಕೊಡಬೇಕು. ನಿಮ್ಮ ಮೇಲೆ ಕೇಸ್‌ ಇಲ್ಲ. ಇದು ಕಾಂಗ್ರೆಸ್ಸಿನ ನೀತಿ ಎಂದು ಅವರು ವ್ಯಂಗ್ಯವಾಡಿದರು.

ನಮಗೆ ಗೊತ್ತಿಗೆ ಸಿದ್ದರಾಮಯ್ಯನವರೆ ನಿಮ್ಮನನ್ನು ಜಗ್ಗುಸ್ತೀವಿ, ಬಗ್ಗೀಸ್ತೀವಿ. ಮುಡಾ ಹಗರಣದಲ್ಲಿ ಘಟಾನುಘಟಿಗಳೇ ಇದ್ದಾರೆಂಬುದಾಗಿ ಸ್ವತಃ ಇಡಿ ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಇದರಲ್ಲಿ ಬಿಜೆಪಿಯವರೂ ಇದ್ದಾರೆಂದು. ಯಾರೇ ಇದ್ದರೂ ಕಳ್ಳ ಕಳ್ಳನೇ. ಸಿದ್ದರಾಮಣ್ಣನೂ ಕೂಡ ಕಳ್ಳನೇ. ಬೇರೆಯವರು ಕದ್ದಿದ್ದರೂ ಕಳ್ಳನೇ ಅಲ್ಲವೇ ಎಂದು ಅವರು ಲೇವಡಿ ಮಾಡಿದರು.

ರಾಜ್ಯದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಲು ಕಾಂಗ್ರೆಸ್‌ ಸರ್ಕಾರದಿಂದ ಆಗುತ್ತಿಲ್ಲ. ಈಗ ಹಾಸನದಲ್ಲಿ ತಮ್ಮದೇ ಭ್ರಷ್ಟಾಚಾರದ ಗುಂಡಿಗಳನ್ನು ಮುಚ್ಚಲು ಸಮಾವೇಶ ಆಯೋಜಿಸುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಜನತೆ ಕಾಂಗ್ರೆಸ್ ವಿರುದ್ಧ ತೀವ್ರ ಕೋಪಗೊಂಡಿದ್ದಾರೆ. ಜನರು ಯಾವಾಗ ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಾರೆಂಬುದೂ ಗೊತ್ತಿದೆ. ಸದ್ಯಕ್ಕೆ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಗೆದ್ದು ಬೀಗುತ್ತಿದ್ದಾರೆ ಎಂದು ಅವರು ಹೇಳಿದರು.

ಉಪ ಚುನಾವಣೆಗಳಲ್ಲಿ ಜನರ ಮನಸ್ಸು ಯಾವಾಗಲೂ ಆಡಳಿತ ಮಾಡುವ ಪಕ್ಷದ ಕಡೆಗೇ ಇರುತ್ತದೆ. ಶಿಗ್ಗಾಂವಿ, ಸೊಂಡೂರು, ಚನ್ನಪಟ್ಟಣ ಕ್ಷೇತ್ರ ಉಪ ಚುನಾವಣೆಗಳಲ್ಲಿ ಆಗಿದ್ದು ಸಹ ಇದೇ. ಉಪ ಚುನಾವಣೆಯಲ್ಲಿ ಆಡಳಿತ ಪಕ್ಷದ ಕಡೆಗೆ ಮತದಾರರು ಮತ ನೀಡುತ್ತಾರೆ. ನಾವೂ ಅಧಿಕಾರದಲ್ಲಿದ್ದಾಗ 18 ಉಪ ಚುನಾವಣೆ ಮಾಡಿದ್ದೆವು. ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಕಾಂಗ್ರೆಸ್ಸಿಗೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ತಿಳಿಸಿದರು. ಸಿದ್ರಾಮಣ್ಣ ಸುಳ್ಳು ಹೇಳೋದರಲ್ಲಿ ನಿಸ್ಸೀಮರು!ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ಮಹಾ ನಿಸ್ಸೀಮರಾಗಿದ್ದು, ಜೆಡಿಎಸ್‌ನಲ್ಲಿದ್ದಾಗ ಹೇಳುತ್ತಿದ್ದುದಕ್ಕಿಂತಲೂ ಹೆಚ್ಚು ಸುಳ್ಳುಗಳನ್ನು ಕಾಂಗ್ರೆಸ್‌ ಸೇರಿದ ಮೇಲೆ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ಸಿನವರಿಗಿಂತ ಜಾಸ್ತಿ ಸುಳ್ಳು ಹೇಳುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ದೂರಿದರು. ಹರಿಹರ ತಾ. ಭಾನುವಳ್ಳಿ ಗ್ರಾಮದ ಹಿಂದೂ ರುದ್ರಭೂಮಿ ವಕ್ಫ್‌ ಆಸ್ತಿಯಾಗಿ ದಾಖಲಾದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನಲ್ಲಿದ್ದಾಗ ಸಿದ್ದರಾಮಯ್ಯ ಸುಳ್ಳು ಹೇಳುತ್ತಿರಲಿಲ್ಲವೇ ಅಂತಾ ಯಾರೋ ಕೇಳಿದ್ದರು. ಕಾಂಗ್ರೆಸ್ ಗೆ ಬಂದ ಮೇಲೆ ಜಾಸ್ತಿ ಸುಳ್ಳು ಹೇಳುತ್ತಿದ್ದಾರೆ ಎಂದರು.

ಹಿಂದೂ ಸ್ಮಶಾನ ಭೂಮಿ ವಕ್ಫ್‌: ಛಲವಾದಿ ತಂಡದಾವಣಗೆರೆ: ವಕ್ಫ್‌ ಭೂ ಕಬಳಿಕೆ ವಿರುದ್ಧ ರಾಜ್ಯ ವ್ಯಾಪ್ತಿ ಪ್ರವಾಸ ಕೈಗೊಂಡ ಬಿಜೆಪಿ ಮೂರು ತಂಡಗಳ ಪೈಕಿ ಒಂದಾದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡವು ಹರಿಹರ ತಾ. ಭಾನುವಳ್ಳಿ ಗ್ರಾಮದ ಸ್ಮಶಾನಕ್ಕೆ ಮೀಸಲಾದ 4 ಎಕರೆ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿತ್ತು.

ಹರಿಹರ ತಾ. ಭಾನುವಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಮೀಸಲಾದ 4 ಎಕರೆ ಜಾಗ ವಕ್ಫ್ ಆಸ್ತಿಯಾಗಿ ಪಹಣಿಯಲ್ಲಿ ಹೆಸರು ಬಂದ ಹಿನ್ನೆಲೆಯಲ್ಲಿ ವಿಪ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಭೇಟಿ ನೀಡಿದ್ದ ವೇಳೆ ಸ್ಮಶಾನ ಸ್ಮಶಾನಕ್ಕೆ ಮೀಸಲಾದ 4 ಎಕರೆ ಸೇರಿದಂತೆ ಒಟ್ಟು 6.24 ಎಕರೆ ಜಾಗ ಈಗ ವಕ್ಫ್‌ ಆಸ್ತಿಯಾಗಿ ಪಹಣಿಯಲ್ಲಿ ದಾಖಲಾದ ಬಗ್ಗೆ ಗ್ರಾಮಸ್ಥರು ಬಿಜೆಪಿ ನಾಯಕರ ತಂಡದ ಗಮನಕ್ಕೆ ತಂದರು.

ಭಾನುವಳ್ಳಿ ಗ್ರಾಮದಲ್ಲಿ ಒಟ್ಟು 6.24 ಎಕರೆ ಜಾಗ ವಕ್ಫ್ ಹೆಸರಿಗೆ ಸೇರಿದ್ದು, ಈ ಪೈಕಿ 4 ಎಕರೆಯಲ್ಲಿ 3.37 ಎಕರೆ ಹಿಂದೂ ರುದ್ರಭೂಮಿ ಇದೆ. ಗ್ರಾಮಸ್ಥರು ಹಿಂದಿನಿಂದಲೂ ಇಲ್ಲಿ ಯಾರೇ ಮೃತಪಟ್ಟರೂ ಇದೇ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುತ್ತಾ ಬಂದಿದ್ದೇವೆ. ಇದೀಗ ಅದೇ ಜಾಗವನ್ನು ವಕ್ಫ್ ಆಸ್ತಿಯಾಗಿ ಮಾಡಿರುವ ಬಗ್ಗೆ ಹಿಂದೆ ಆಕ್ಷೇಪ ವ್ಯಕ್ತಪಡಿಸಿದಾಗ ಉಪ ವಿಭಾಗಾ ಧಿಕಾರಿಗಳ ತಂಡ ಭೇಟಿ ನೀಡಿ, ಪ್ರತ್ಯೇಕಗೊಳಿಸಲು ತೀರ್ಮಾನಿಸಿತ್ತು ಎಂದು ತಿಳಿಸಿದರು.