ನಾಡಿನ ಏಕತೆ, ಭಾಷೆ, ಸಂಸ್ಕೃತಿ ಉಳಿವು ಹಾಗೂ ನೆಲ, ಜಲಕ್ಕೆ ಧಕ್ಕೆಯಾದ ವೇಳೆಯಲ್ಲಿ ಕಾನೂನಾತ್ಮಕವಾಗಿ ಚಳವಳಿ ರೂಪಿಸಿಕೊಂಡು ಕನ್ನಡ ಹಿರಿತನ ಕಾಪಾಡುವಲ್ಲಿ ಸೇನಾ ಕಾರ್ಯಕರ್ತರ ಪಾತ್ರ ಪ್ರಮುಖವಾಗಿ ಎಂದು ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಹೇಳಿದರು.

ಚಿಕ್ಕಮಗಳೂರು: ನಾಡಿನ ಏಕತೆ, ಭಾಷೆ, ಸಂಸ್ಕೃತಿ ಉಳಿವು ಹಾಗೂ ನೆಲ, ಜಲಕ್ಕೆ ಧಕ್ಕೆಯಾದ ವೇಳೆಯಲ್ಲಿ ಕಾನೂನಾತ್ಮಕವಾಗಿ ಚಳವಳಿ ರೂಪಿಸಿಕೊಂಡು ಕನ್ನಡ ಹಿರಿತನ ಕಾಪಾಡುವಲ್ಲಿ ಸೇನಾ ಕಾರ್ಯಕರ್ತರ ಪಾತ್ರ ಪ್ರಮುಖವಾಗಿ ಎಂದು ಕನ್ನಡಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಹೇಳಿದರು.

ನಗರದಲ್ಲಿ ಜಿಲ್ಲಾ ಕನ್ನಡ ಸೇನೆಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಡಿನಲ್ಲಿ ಹಲವಾರು ಕನ್ನಡಪರ ಸಂಘಟನೆಗಳಿವೆ. ಈ ಪೈಕಿ ಕನ್ನಡಸೇನೆ ಸ್ವಾರ್ಥಕ್ಕಾಗಿ ಆಸೆ ಪಡದೇ ಪ್ರತಿ ಹೋರಾಟವನ್ನು ಪ್ರಾಮಾಣಿಕತೆಯಿಂದ ನಡೆಸಿಕೊಂಡು ಬಂದಿದೆ. ಇತ್ತೀಚೆಗೆ ರಾಜ್ಯದಲ್ಲಿ ಒಂದೇ ಹೆಸರಿನ ಅನೇಕ ಕನ್ನಡಪರ ಸಂಘಟನೆಗಳಿದ್ದು, ಕನ್ನಡಸೇನೆ ಮಾತ್ರ ಯಾವುದೇ ಬಣಗಳಿಲ್ಲದೇ ಒಂದೇ ಹೆಸರಿನಲ್ಲಿ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ ಎಂದರು. ಕೆಲವು ಸಂಘಟನೆಗಳು ಬಿಲ್ಡರ್, ರಾಜಕಾರಣಿಗಳ ಮನೆ ಬಾಗಿಲಿಗೆ ಭೇಟಿ ನೀಡಿ ವಸೂಲಿ ದಂಧೆ ಮಾಡುತ್ತಿರುವುದು ಶೋಭೆ ತರುವುದಿಲ್ಲ. ಆದರೆ, ಕನ್ನಡಸೇನೆ ಕಾರ್ಯಕ್ರಮ ಅಥವಾ ನಾಡು, ನುಡಿ ಹೋರಾಟದಲ್ಲಿ ನಯಾಪೈಸೆ ಕೇಳದೇ ಪ್ರಾಮಾಣಿಕವಾಗಿ ಸ್ವಂತ ಖರ್ಚಿನಿಂದಲೇ ಹೋರಾಟ ರೂಪಿಸಿ ಗಟ್ಟಿಕಾಳುಗಳಂತೆ ನಿಂತಿದೆ ಎಂದರು.ಕಳೆದ ತಿಂಗಳು ಜಿಲ್ಲೆಯಲ್ಲಿ ಸೇನೆ ಅದ್ಧೂರಿ ಮಟ್ಟದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಿದೆ. ಈ ಓಡಾಟದಲ್ಲಿ ಅನೇಕ ಸೇನಾ ಕಾರ್ಯಕರ್ತರ ಶ್ರಮ ಬಹಳಷ್ಟಿದ್ದು ಇವರನ್ನು ಇಂದು ಅಭಿನಂದಿಸಿ ಗೌರವಿಸುವ ಮೂಲಕ ಇನ್ನಷ್ಟು ಹೆಚ್ಚಿನ ಜವಾಬ್ದಾರಿಯನ್ನು ನೀಡುತ್ತಿದೆ ಎಂದು ಹೇಳಿದರು.ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಸೇನೆ ಜಿಲ್ಲೆಯಲ್ಲಿ ಸ್ಥಾಪಿಸುವ ಕಾಲಘಟ್ಟದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿ ಇಂದು ದೊಡ್ಟಮಟ್ಟದಲ್ಲಿ ನಿಲ್ಲಲು ರಾಜ್ಯಾಧ್ಯಕ್ಷ ಮಾರ್ಗದರ್ಶನ, ಕಾರ್ಯಕರ್ತರ ಶ್ರಮ, ನಿರಂತರ ಕೆಲಸವೇ ಪ್ರಮುಖ ಕಾರಣವಾಗಿದೆ. ಸಂಘಟನೆಯಲ್ಲಿ ಕಾರ್ಯನಿರ್ವಹಿಸಿದ ಅನೇಕರು ಜನಪ್ರತಿನಿಧಿಗಳಾಗಿ ಅನೇಕ ಹುದ್ದೆ ಅಲಂಕರಿಸಿದ್ದಾರೆ ಎಂದು ತಿಳಿಸಿದರು.ಕನ್ನಡಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚೈತ್ರಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ತಿಂಗಳು ರಾಜ್ಯೋತ್ಸವ ಆಚರಿಸಲು ಸತತ ಒಂದು ತಿಂಗಳ ತಯಾರಿ ನಡೆಸಿ ಜಿಲ್ಲಾ, ನಗರ, ಆಟೋ ಘಟಕ ಹಾಗೂ ಮಹಿಳಾ ಘಟಕದಿಂದ ಸಭೆ ನಡೆಸಿ ಪೂರ್ವಭಾವಿ ತಯಾರಿ ನಡೆಸಿದ ಪರಿಣಾಮ ಕಾರ್ಯಕ್ರಮ ಅಭೂತವಾಗಿ ಮೂಡಿ ಬರಲು ಸಾಧ್ಯವಾಗಿದ್ದು, ಕಾರ್ಯಕ್ರಮಕ್ಕೆ ಶ್ರಮಿಸಿದ ಅರ್ಹ ಕಾರ್ಯಕರ್ತರನ್ನು ಗೌರವಿಸುವುದು ಸೇನೆ ಕರ್ತವ್ಯ ಎಂದರು.

ಕನ್ನಡಸೇನೆ ಮುಖಂಡ ಎಚ್.ಪಿ.ಮಂಜೇಗೌಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕನ್ನಡಸೇನೆ ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಕನ್ನಡಸೇನೆ ಮುಖಂಡ ಪ್ರವೀಣ್ ಬೆಟ್ಟಗೆರೆ, ಚಿಕ್ಕಮಗಳೂರು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎನ್.ಕೆ.ಗೋಪಿ, ಸೇನೆ ನಗರಾಧ್ಯಕ್ಷ ಸತೀಶ್, ಜಿಲ್ಲಾ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಮುಖಂಡರುಗಳಾದ ಹೇಮಂತ್, ಶಂಕರೇಗೌಡ ಉಪಸ್ಥಿತರಿದ್ದರು.