ವೀರರ ಶ್ರಮವನ್ನು ವ್ಯರ್ಥಗೊಳಿಸಬಾರದು: ಸಿ.ಸುಮಿತ್ರ

| Published : Aug 16 2025, 12:00 AM IST

ವೀರರ ಶ್ರಮವನ್ನು ವ್ಯರ್ಥಗೊಳಿಸಬಾರದು: ಸಿ.ಸುಮಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಎಂ.ದೊಡ್ಡಿ ಮುಖ್ಯರಸ್ತೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಜಾಥಾ ಹೋಗುವ ಮೂಲಕ ವಿವಿಧ ಮಹಾನ್ ನಾಯಕರ ಘೋಷಣೆಗಳನ್ನು ಕೂಗುತ್ತಾ, ಹಾಡಿ ನರ್ತಿಸುವುದರ ಮೂಲಕ ಜನರಲ್ಲಿ ದೇಶಭಕ್ತಿಯ ಜಾಗೃತಿಯನ್ನು ಉಂಟು ಮಾಡಿದರು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಭಾರತಕ್ಕೆ ಸ್ವಾತಂತ್ರ್ಯ ಗಳಿಸಲು ಹೋರಾಡಿದ ಅನೇಕ ವೀರರ ಶ್ರಮವನ್ನು ವ್ಯರ್ಥಗೊಳಿಸದೆ ನಾವು ಶೈಕ್ಷಣಿಕ ಕಲಿಕೆ ಮೂಲಕ ದೇಶವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಬೇಕು ಎಂದು ಭಾರತೀ ಪಿಯು ಕಾಲೇಜಿನ ಉಪನ್ಯಾಸಕಿ ಸಿ.ಸುಮಿತ್ರ ತಿಳಿಸಿದರು.

ಸ್ನೇಹ ವಿದ್ಯಾಸಂಸ್ಥೆ ವತಿಯಿಂದ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ದೇಶ, ಭಾಷೆಯ ಮೇಲೆ ಪ್ರಾಥಮಿಕ ಹಂತದಲ್ಲಿ ಮಕ್ಕಳಲ್ಲಿ ಮನವರಿಕೆ ಮಾಡಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಶಾಲಾ ಹಂತದಲ್ಲಿ ನಡೆದ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ಸ್ಪರ್ಧೆ ಹೀಗೆ ಹಲವು ಸ್ಪರ್ಧೆಗಳಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ನೀಡಲಾಯಿತು. ಜತೆಗೆ ವಿವಿಧ ವೇಷ ಭೂಷಣವನ್ನು ಹಾಕಿದ ಮಕ್ಕಳಿಗೂ ಕೂಡ ಬಹುಮಾನ ನೀಡಲಾಯಿತು. ಮಕ್ಕಳು ವಿವಿಧ ದೇಶಭಕ್ತಿ ಹಾಡುಗಳಿಗೆ ನೃತ್ಯವನ್ನು ಮಾಡಿ ರಂಜಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆ ಸಂಸ್ಥಾಪಕ ದಾಸೇಗೌಡ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷೆ ಶಶಿಕಲಾ ದಾಸೇಗೌಡ, ಮುಖ್ಯ ಶಿಕ್ಷಕ ರವಿಶಂಕರ್, ಶಿಕ್ಷಕರಾದ ಸ್ವರೂಪ, ಶ್ವೇತ, ಮಮತಾ, ರಶ್ಮಿ, ರೂಪಿಣಿ, ಉಷಾರಾಣಿ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.

ಜ್ಞಾನ ಮುದ್ರ ವಿದ್ಯಾಮಂದಿರದಲ್ಲಿ ಆಚರಣೆ:

ಕೆ.ಎಂ.ದೊಡ್ಡಿ: ಮೆಣಸಗೆರೆ ಗ್ರಾಮದಲ್ಲಿ ಜ್ಞಾನ ಮುದ್ರ ವಿದ್ಯಾಮಂದಿರ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನೋತ್ಸವವನ್ನು ಸಡಗರ- ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಿವೃತ್ತ ಯೋಧ ವಿ.ಸಿ. ವೆಂಕಟರಾಮು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ರಕ್ಷಣೆಯಲ್ಲಿ ಯೋಧರ ಪಾತ್ರ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಮಹಾನ್ ನಾಯಕರನ್ನು ಸ್ಮರಿಸಿದರು. ಈ ವೇಳೆ ಸಂಸ್ಥೆ ಅಧ್ಯಕ್ಷೆ ಡಾ.ಸೌಮ್ಯರಾಜೇಶ್, ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಟ್ರಸ್ಟಿ ತೇಜಸ್ವಿನಿ ತಿಪ್ಪಾರೆಗೌಡ, ಆಡಳಿತ ಅಧಿಕಾರಿ ಪ್ರಭಾವತಿ ಸುರೇಶ್, ಪ್ರಾಂಶುಪಾಲರಾದ ಶ್ರುತಿ, ದೈಹಿಕ ಶಿಕ್ಷಕ ಮನು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಹಲವು ದೇಶಭಕ್ತರ ವೇಷ ಭೂಷಣ ತೊಟ್ಟು ವೀರ ಗೀತೆಗಳಿಗೆ ಹಾಡಿ ನರ್ತಿಸಿದರು. ಕೆ.ಎಂ.ದೊಡ್ಡಿ ಮುಖ್ಯರಸ್ತೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಜಾಥಾ ಹೋಗುವ ಮೂಲಕ ವಿವಿಧ ಮಹಾನ್ ನಾಯಕರ ಘೋಷಣೆಗಳನ್ನು ಕೂಗುತ್ತಾ, ಹಾಡಿ ನರ್ತಿಸುವುದರ ಮೂಲಕ ಜನರಲ್ಲಿ ದೇಶಭಕ್ತಿಯ ಜಾಗೃತಿಯನ್ನು ಉಂಟು ಮಾಡಿದರು.

ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗದವರು, ವಾಹನ ಚಾಲಕರು ಉಪಸ್ಥಿತರಿದ್ದರು.