ಸಾಧನೆಯ ಹಿಂದಿನ ಶಿಕ್ಷಕರ ಪ್ರೋತ್ಸಾಹ ಅಭಿನಂದನಾರ್ಹ

| Published : Sep 01 2025, 01:03 AM IST

ಸಾಧನೆಯ ಹಿಂದಿನ ಶಿಕ್ಷಕರ ಪ್ರೋತ್ಸಾಹ ಅಭಿನಂದನಾರ್ಹ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಯ ತುಡಿತ ಹಾಗೂ ಸಾಧಿಸಬೇಕೆಂಬ ಛಲಕ್ಕೆ ತಕ್ಕ ಪ್ರತಿಫಲ ನೀಡಿ, ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷರು ಹಾಗೂ ಖ್ಯಾತ ಉದ್ಯಮಿ ಟಿ. ಶಿವಕುಮಾರ್ ಅಭಿಪ್ರಾಯಪಟ್ಟರು. ಮುಂದಿನ ವರ್ಷಗಳಲ್ಲಿ ಇದೇ ರೀತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸುಸೂತ್ರವಾಗಿ ಮುನ್ನಡೆಸಲು ದಿ. ಗುತ್ತಮ್ಮ ಯಜಮಾನ್ ತಮ್ಮೇಗೌಡ ಹಾಗೂ ದಿ. ಗೌರಮ್ಮ ಟಿ.ಮಲ್ಲೇಶ್ ಹೆಸರಿನಲ್ಲಿ ಟ್ರಸ್ಟ್ ರಚಿಸುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಯ ತುಡಿತ ಹಾಗೂ ಸಾಧಿಸಬೇಕೆಂಬ ಛಲಕ್ಕೆ ತಕ್ಕ ಪ್ರತಿಫಲ ನೀಡಿ, ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಉಪಾಧ್ಯಕ್ಷರು ಹಾಗೂ ಖ್ಯಾತ ಉದ್ಯಮಿ ಟಿ. ಶಿವಕುಮಾರ್ ಅಭಿಪ್ರಾಯಪಟ್ಟರು.ಪಟ್ಟಣದ ಆರ್ಯ ಈಡಿಗರ ರಾಮಮಂದಿರದಲ್ಲಿ ದಿ. ಗುತ್ತಮ್ಮ ಯಜಮಾನ್ ತಮ್ಮೇಗೌಡ ಹಾಗೂ ದಿ. ಗೌರಮ್ಮ ಟಿ.ಮಲ್ಲೇಶ್ ಅವರ ಜ್ಞಾಪಕಾರ್ಥವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಿಕೆಗೆ ಪೂರಕವಾಗಿ ತಂದೆ ತಾಯಿ ನೀಡುವ ಪ್ರೋತ್ಸಾಹ ಹಾಗೂ ಅವರ ಶ್ರಮ ಮತ್ತು ಶಿಕ್ಷಕರ ಉತ್ತೇಜನ, ಮಾರ್ಗದರ್ಶನಕ್ಕೆ ಅಭಿನಂದಿಸಬೇಕಾದ್ದು ಎಲ್ಲರ ಜವಾಬ್ದಾರಿ ಎಂದು ನುಡಿದರು. ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸುತ್ತಿದ್ದಾರೆ ಇದು ಸಂತೋಷ ತಂದಿದೆ. ಹೆಣ್ಣುಮಕ್ಕಳಿಗೆ ಕಲಿಕೆಗೆ ಪೂರಕವಾದ ಅಗತ್ಯ ವ್ಯವಸ್ಥೆ ಕಲ್ಪಿಸಿ ಕೊಟ್ಟಲ್ಲಿ ಅವರುಗಳು ಉನ್ನತ್ತ ವ್ಯಾಸಂಗ ಜತೆಗೆ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ನಮ್ಮ ಹಿರಿಯರು ಪಾಲನೆ ಮಾಡುತ್ತಿದ್ದ ೧೮ ವರ್ಷ ತುಂಬಿದೆ ಮದುವೆ ಮಾಡಿ ಕೊಳಿಸೋಣವೆಂಬ ಮನಸ್ಥಿತಿ ಬಿಟ್ಟು ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡೋಣವೆಂದರು. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ಯೋಗ, ಪ್ರಾಣಾಯಾಮ, ಕ್ರೀಡೆ ಹಾಗೂ ಮನಸ್ಸಿಗೆ ಉಲ್ಲಾಸ ನೀಡುವ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿಸುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಮುನ್ನಡೆಯುತ್ತ ಯಶಸ್ವಿ ಜೀವನ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು. ಮುಂದಿನ ವರ್ಷಗಳಲ್ಲಿ ಇದೇ ರೀತಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸುಸೂತ್ರವಾಗಿ ಮುನ್ನಡೆಸಲು ದಿ. ಗುತ್ತಮ್ಮ ಯಜಮಾನ್ ತಮ್ಮೇಗೌಡ ಹಾಗೂ ದಿ. ಗೌರಮ್ಮ ಟಿ.ಮಲ್ಲೇಶ್ ಹೆಸರಿನಲ್ಲಿ ಟ್ರಸ್ಟ್ ರಚಿಸುವುದಾಗಿ ತಿಳಿಸಿದರು. ಹಿಂದುಳಿದ ವರ್ಗಗಳ ಎಲ್ಲಾ ಜನಾಂಗದ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ, ಈ ರೀತಿಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡುವ ಇಂಗಿತವಿದ್ದು, ಅಗತ್ಯ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿ, ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು. ಮೈಸೂರು ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಎಚ್.ಎನ್. ಗೀತಾಂಬ, ಪುರಸಭೆ ಮಾಜಿ ಅಧ್ಯಕ್ಷೆ ಸುಧಾನಳಿನಿ, ಹಾಸನ ಸೆಂಟ್ರಲ್ ಕಾಮರ್ಸ್ ಕಾಲೇಜು ಸಂಸ್ಥಾಪಕರಾದ ಮಹೇಶ್ ಮತ್ತು ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ದೊಡ್ಡಮಲ್ಲೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಎಂಜಿನಿಯರಿಂಗ್ ಹಾಗೂ ಇತರೆ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ೨೨ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಿ ಗೌರವಿಸಲಾಯಿತು.ಎಚ್.ಎನ್.ಜಯರಾಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿರೇಖಾ ಪ್ರಾರ್ಥಿಸಿದರು, ಎಚ್.ವಿ.ರವಿಕುಮಾರ್ ಸ್ವಾಗತಿಸಿ, ನಿರೂಪಿಸಿದರು ಹಾಗೂ ಪಾಪೇಗೌಡ ವಂದಿಸಿದರು.

ಹಿರಿಯರಾದ ಪುಟ್ಟಮ್ಮ, ವೆಂಕಟಸ್ವಾಮಿ, ದೇವರಮುದ್ದನಹಳ್ಳಿ ಗ್ರಾ.ಪಂ. ಮಾ. ಅಧ್ಯಕ್ಷ ಮರೀಗೌಡ, ಪುರಸಭೆ ಮಾಜಿ ಸದಸ್ಯ ಎಚ್.ವಿ.ಸುರೇಶ್, ಡಿಸಿಸಿ ಬ್ಯಾಂಕಿನ ಅರುಣಾ, ಶಿಕ್ಷಕಿ ಮಾಲತಿ, ಉದ್ಯಮಿ ಎಚ್.ಎಸ್.ಕಾಂತರಾಜು, ಎಚ್.ಸಿ.ನಾಗರಾಜು, ಇತರರು ಇದ್ದರು.