ಇಂಡಿಗನತ್ತದಲ್ಲಿ ಇಡೀ ಗ್ರಾಮವೇ ನೀರವ ಮೌನ

| Published : Apr 29 2024, 01:46 AM IST / Updated: Apr 29 2024, 08:29 AM IST

ಸಾರಾಂಶ

ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕುಗ್ರಾಮ ಇಂಡಿಗನತ್ತ ಗ್ರಾಮದಲ್ಲಿ ನಡೆದ ಘಟನೆಯಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

 ಹನೂರು ; ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕುಗ್ರಾಮ ಇಂಡಿಗನತ್ತ ಗ್ರಾಮದಲ್ಲಿ ನಡೆದ ಘಟನೆಯಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮ 132 ಮನೆಗಳು, 541 ಜನಸಂಖ್ಯೆಯಿರುವ ಕುಗ್ರಾಮದಲ್ಲಿ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಹಲವು ವರ್ಷಗಳಿಂದ ನಿವಾಸಿಗಳು ಜನಪ್ರತಿನಿಧಿ ಅಧಿಕಾರಿಗಳನ್ನು ಮನವಿ ಮಾಡುತ್ತಾ ಬಂದಿದ್ದಾರೆ.

 ಅಧಿಕಾರಿಗಳ ನಿರ್ಲಕ್ಷ್ಯವೇ ಗಲಭೆಗೆ ಕಾರಣ:

ಮತದಾನ ಬಹಿಷ್ಕಾರ ಎಚ್ಚರಿಕೆ ನಡುವೆಯೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಇಂಡಿಗನತ್ತ ಗ್ರಾಮದಲ್ಲಿ ಏ. 26ರಂದು ಲೋಕಸಭಾ ಚುನಾವಣೆ ಮತದಾನ ವೇಳೆಯಲ್ಲಿ ನಡೆದ ಗಲಬೆ ಕಾರಣ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು. ಚುನಾವಣೆ ಸಂದರ್ಭಗಳಲ್ಲಿ ಆಶ್ವಾಸನೆ ನೀಡಿ ನಂತರ ಗ್ರಾಮಗಳ ಹತ್ತಿರ ಸುಳಿಯದ ಅಧಿಕಾರಿ ವರ್ಗದ ನಿರ್ಲಕ್ಷ್ಯತನವೇ ಗ್ರಾಮದಲ್ಲಿ ಗಲಭೆಗೆ ಕಾರಣವಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.

ಗ್ರಾಮಸ್ಥರ ಸಹನೆಯ ಕಟ್ಟೆ ಹೊಡೆಯಿತು:

ಇಂಡಿಗನತ್ತ ಗ್ರಾಮದಲ್ಲಿ ಸ್ವಾತಂತ್ರ್ಯ ಬಂದ ದಿನದಿಂದಲೂ ಇಲ್ಲಿನ ಮೂಲ ನಿವಾಸಿಗಳು ಮತದಾನ ಮಾಡಿಕೊಂಡೆ ಬಂದಿದ್ದಾರೆ. ಚುನಾವಣಾ ವೇಳೆ ಮತದಾನ ಬಹಿಷ್ಕರಿಸುತ್ತಿದ್ದ ಗ್ರಾಮಸ್ಧರಿಗೆ ಅಧಿಕಾರಿಗಳು ಹೋಗಿ ಮೂಲ ಸೌಲಭ್ಯ ಕಲ್ಪಿಸುವ ಭರವಸೆ ನೀಡಿ ಮತದಾನ ಮಾಡಿಸುತ್ತಿದ್ದರು. ಅಧಿಕಾರಿಗ‍ಳ ಭರವಸೆ ಮಾತಿಗೆ ಬೆಲೆಕೊಟ್ಟು ಹಿಂದಿನ ಚುನಾವಣೆಗಳಲ್ಲೂ ಸಹ ಗ್ರಾಮಸ್ಥರು ಶಾಂತಿಯುತವಾಗಿ ಮತದಾನದಲ್ಲಿ ಭಾಗವಹಿಸಿದ್ದಾರೆ. ನಂತರ ಗ್ರಾಮದತ್ತ ಅಧಿಕಾರಿಗಳು ತೆರಳಿ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ವಿಫಲವಾಗಿರುವುದೇ ಗ್ರಾಮಸ್ಥರ ಸಹನ ಕಟ್ಟೆ ಒಡೆದು ವಿಕೋಪಕ್ಕೆ ತಿರುಗಿ ಏ. 26ರಂದು ನಡೆದ ಕಲ್ಲುತೂರಾಟ ಗಲಭೆಗೆ ಕಾರಣವಾಗಿದೆ.

ನಿರುದ್ಯೋಗಿ ಅವಿದ್ಯಾವಂತರೆ ತುಂಬಿರುವ ಗ್ರಾಮ:

ಗ್ರಾಮದಲ್ಲಿ ನಿರುದ್ಯೋಗಿ ಅವಿದ್ಯಾವಂತರೇ ಹೆಚ್ಚಾಗಿರುವ ಕಾರಣ ಇಲ್ಲಿನ ಗಲಭೆಗೆ ಕಾರಣ ಎನ್ನಲಾಗಿದೆ. ಜೊತೆಗೆ ಇಂಡಿಗನತ್ತ ಹಾಗೂ ಮೆಂದರೆ ಗ್ರಾಮಗಳಿಗೆ ಒಂದೇ ಕಡೆ ಮತಗಟ್ಟೆ ತೆರೆದಿರುವುದು ಗಲಭೆಯೂ ಸಹ ಕಾರಣವಾಗಿದೆ. ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದ ನಂತರ ಗ್ರಾಮಸ್ಥರಿಗೆ ಮತದಾನ ಮಾಡುವಂತೆ ಯಾವೊಬ್ಬ ಅಭ್ಯರ್ಥಿಯು ಸಹ ಗ್ರಾಮಕ್ಕೆ ತೆರಳಿ ಮತಯಾಚನೆ ಮಾಡದೇ ಇರುವುದು ಅಧಿಕಾರಿಗಳು ಮಾತ್ರ ಚುನಾವಣೆ ಸಂದರ್ಭದಲ್ಲಿ ಗ್ರಾಮಗಳಿಗೆ ತೆರಳಿ ಮತದಾನ ಮಾಡುವಂತೆ ಪ್ರೇರೇಪಿಸಿದ್ದರು.

ಗ್ರಾಮಸ್ಥರಿಗೆ ಏನು ತಿಳಿಯದ ಅವಿದ್ಯಾವಂತರ ಇಲ್ಲಿನ ಮೂಲ ನಿವಾಸಿಗಳು ಮತದಾನ ಮಾಡುತ್ತಿದ್ದರು. ಈ ಬಾರಿ ಮೂಲಭೂತ ಸೌಲಭ್ಯ ಕಲ್ಪಿಸದೆ ಮತದಾನ ಮಾಡುವುದಿಲ್ಲ ಎಂದು ಮೊದಲೇ ತಿಳಿಸಿದ್ದರೂ ಸಹ ಎರಡು ಗ್ರಾಮಗಳ ಮತಗಟ್ಟೆ ಸಂಖ್ಯೆ 145 ಕೇಂದ್ರವನ್ನು ಇಂಡಿಗನತ್ತ ಗ್ರಾಮದಲ್ಲಿ ತೆರೆದಿರುವುದರಿಂದ ಗ್ರಾಮಸ್ಥರು ಒಗ್ಗಟ್ಟಾಗಿ ಮತದಾನವನ್ನು ಬಹಿಷ್ಕರಿಸಿದ್ದರು. ಈ ವೇಳೆಯಲ್ಲಿ ಅಧಿಕಾರಿಗಳು ಮೆಂದರೆ ಗ್ರಾಮದ ಆದಿವಾಸಿ ಜನಾಂಗದವರನ್ನು ಮತದಾನ ಮಾಡುವಂತೆ ಗ್ರಾಮಕ್ಕೆ ಕರೆತಂದಾಗ ಇಡೀ ಗ್ರಾಮವೇ ಸಹನೆ ಕಟ್ಟೆ ಹೊಡೆದು ಗಲಭೆಗೆ ಕಾರಣ ಅಧಿಕಾರಿಗಳೆಂದು ನಿವಾಸಿಗಳು ದೂರಿದ್ದಾರೆ. 

ಗ್ರಾಮಸ್ಥರಿಗೆ ಕಾನೂನು ಅರಿವು ನೆರವು:

ನಿರುದ್ಯೋಗಿ ಅವಿದ್ಯಾವಂತರೆ ತುಂಬಿರುವ ಗ್ರಾಮದಲ್ಲಿ ವಾಸಿಸುವ ನಿವಾಸಿಗಳಿಗೆ ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳು ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಮತದಾನಕ್ಕೆ ಮುಂದಾಗಬೇಕಾಗಿತ್ತು. ಈ ವೇಳೆಯಲ್ಲಿ ಪೊಲೀಸ್ ಇಲಾಖೆ ಕಂದಾಯ ಇಲಾಖೆ ಮಂದಾರೆ ಗ್ರಾಮದ ನಿವಾಸಿಗಳನ್ನು ಮತದಾನ ಮಾಡುವಂತೆ ಗ್ರಾಮಕ್ಕೆ ತೆರಳಿ ಪ್ರೇರೇಪಿಸಿ ಕರೆತಂದ ಕಾರಣವೇ ಗಲಭೆಗೆ ಕಾರಣರಾಗಿದ್ದಾರೆ. 

ಗ್ರಾಮವನ್ನೇ ತೊರೆದ ಜನತೆ:

ಅ. 26ರಂದು ಮತದಾನ ವೇಳೆ ನಡೆದ ಗಲಬೆಯಲ್ಲಿ ಅಧಿಕಾರಿಗಳ ಮತ್ತು ಎರಡು ಗ್ರಾಮಸ್ಥರ ನಡುವೆ ನಡೆದ ಗಲಭೆಗೆ ಕಾರಣವೇ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಗ್ರಾಮದ 541 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 250ರಿಂದ 300 ಜನರ ಮೇಲೆ ಮೂರು ಪ್ರಕರಣ ದಾಖಲಾಗಿದೆ. ಇದರಿಂದಾಗಿ ಇಲ್ಲಿನ ಜನತೆ ಬಂಧನ ಭೀತಿಯಿಂದ ವಯಸ್ಸಾದ ಹಿರಿಯರು ಹಾಗೂ ಮಕ್ಕಳನ್ನು ಬಿಟ್ಟು ತಲೆಮರೆಸಿಕೊಂಡಿದ್ದಾರೆ.ಇದರಿಂದಾಗಿ ಗ್ರಾಮದಲ್ಲಿ ಪೊಲೀಸರು ಮನೆಮನೆ ಶೋಧನೆ ಮಾಡಿ ಪುರುಷರನ್ನು ಮತ್ತು ಮಹಿಳೆಯರನ್ನು ಬಂಧಿಸಿ ವಶಕ್ಕೆ ಪಡೆಯುತ್ತಿರುವುದು ಗ್ರಾಮದಲ್ಲಿ ಜನತೆ ಇಲ್ಲದೆ ನಿರಸ ಮೌನ ಆವರಿಸಿದೆ.

ಇಂದು ಮರು ಮತದಾನ

ಏ. 26ರಂದು ನಡೆದ ಘಟನೆಯಿಂದ ಇಂಡಿಗನತ್ತ ಗ್ರಾಮದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಮದಲ್ಲಿ ಜಿಲ್ಲಾಡಳಿತವಾಗಲಿ ಚುನಾವಣಾ ಅಧಿಕಾರಿಗಳಾಗಲಿ, ಶಾಂತಿ ಸಭೆ ನಡೆಸದೆ ಎರಡು ಗ್ರಾಮಗಳ ನಡುವೆ ನಡೆದಿರುವ ಗಲಭೆಗೆ ಕಾರಣ ತಿಳಿಯದೆ ಸೋಮವಾರ 29ರಂದು ಮರು ಮತದಾನಕ್ಕೆ ಆದೇಶ ನೀಡಿದ್ದು, ಗ್ರಾಮದಲ್ಲಿ ಜನರೇ ಇಲ್ಲದೆ ಮತದಾನ ನಡೆಯುತ್ತದೆ ಎಂಬುದೇ ಕಾದು ನೋಡಬೇಕಾಗಿದೆ. ಇದರಿಂದಾಗಿ ಗ್ರಾಮದಲ್ಲಿ ಮತದಾನ ಎಷ್ಟರ ಮಟ್ಟಿಗೆ ನಡೆಯುತ್ತದೆ ಎಂಬುದು ಪ್ರಶ್ನೆಯಾಗಿದೆ. ಗ್ರಾಮದಲ್ಲಿ ಎಲ್ಲಿ ನೋಡಿದರಲ್ಲಿ 150ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುವ ಮೂಲಕ ಪೊಲೀಸ್ ಸರ್ಪಗಾವಲಿನಲ್ಲಿ ಬೀಗಿ ಪಹರೆ ಮಾಡಲಾಗಿದೆ.

ಇಂಡಿಗನತ್ತ ಗ್ರಾಮದ ಜನ ಕನಿಷ್ಠ ಮೂಲಭೂತ ಸೌಲಭ್ಯವಿಲ್ಲದೆ ಬದುಕುತ್ತಿದ್ದು, ಪ್ರತಿ ಚುನಾವಣೆ ವೇಳೆ ಸೌಲಭ್ಯ ಕೇಳಿ ಚುನಾವಣೆ ಬಹಿಷ್ಕಾರ ಮಾಡಲು ಮುಂದಾದಾಗ ಅಧಿಕಾರಿಗಳು ಭರವಸೆ ನೀಡಿ ಯಾವುದೇ ಸೌಲಭ್ಯ ನೀಡದಿರುವುದೇ ಘಟನೆಗೆ ಕಾರಣವಾಗಿದೆ. ಗ್ರಾಮದಲ್ಲಿ ಮತದಾನ ವೇಳೆ ನಡೆದ ಗಲಭೆ ಬಗ್ಗೆ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಗ್ರಾಮದಲ್ಲಿ ಬಂಧನ ಭೀತಿಯಿಂದ ಹೊರಗಿರುವ ಈ ಸಂದರ್ಭದಲ್ಲಿ ಎರಡು ಗ್ರಾಮಗಳ ನಡುವೆ ಶಾಂತಿ ಸಭೆ ನಡೆಸದೆ ಮರು ಮತದಾನಕ್ಕೆ ದಿನಾಂಕ ನಿಗದಿಪಡಿಸಿರುವುದು ಸರಿಯಲ್ಲ.

-ಉಮೇಶ್ ಆನಾಪುರ, ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ