ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವದು ಖಂಡನೀಯ. ಇವರನ್ನು ಕೂಡಲೇ ಬಿಜೆಪಿ ಪಕ್ಷಕ್ಕೆ ಪುನರ್ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿಯ ಶಕ್ತಿಯನ್ನು ಉಳಿಸಿಕೊಳ್ಳಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಅಭಿಮಾನಿ ಬಳಗದ ಸದಸ್ಯರಾದ ಎಸ್.ಎ.ಯರನಾಳ, ಸುರೇಶ ಚಿಂಚೋಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವದು ಖಂಡನೀಯ. ಇವರನ್ನು ಕೂಡಲೇ ಬಿಜೆಪಿ ಪಕ್ಷಕ್ಕೆ ಪುನರ್ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿಯ ಶಕ್ತಿಯನ್ನು ಉಳಿಸಿಕೊಳ್ಳಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಅಭಿಮಾನಿ ಬಳಗದ ಸದಸ್ಯರಾದ ಎಸ್.ಎ.ಯರನಾಳ, ಸುರೇಶ ಚಿಂಚೋಳಿ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ನರೇಂದ್ರ ಮೋದಿ, ನಡ್ಡಾ, ಅಮಿತಾ ಷಾ ಅವರು ಗೊತ್ತಿಲ್ಲದ್ದ ಸಮಯದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಚಿವ ಸಂಪುಟದಲ್ಲಿ ಯತ್ನಾಳ ಅವರು ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುವ ಜೊತೆಗೆ ಬಿಜೆಪಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಲೋಕಸಭಾ ಸದಸ್ಯರೊಬ್ಬರು ಯಾವ ರೀತಿ ಜನಸೇವೆ ಮಾಡಬೇಕೆಂಬುವದನ್ನು ರಾಜ್ಯದಲ್ಲಿಯೇ ಮಾದರಿಯಾಗುವಂತೆ ಕಾರ್ಯನಿರ್ವಹಿಸಿದ್ದಾರೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬ ಧ್ವನಿ ಎತ್ತಿರುವದು ಮೊದಲು ಯತ್ನಾಳ. ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಇವರ ಪಾತ್ರ ಪರಿಗಣಿಸದೇ ಇವರನ್ನುಉಚ್ಚಾಟನೆ ಮಾಡಿರುವುದು ಗಂಭೀರ ವಿಷಯವಾಗಿದೆ. ಇವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವವರೆಗೂ ನಮ್ಮ ಹೋರಾಟ ನಿಲ್ಲದು. ಮುಂದಿನ ದಿನಗಳಲ್ಲಿ ವಿವಿಧ ರೀತಿಯಲ್ಲಿ ಹೋರಾಟ ಆರಂಭವಾಗಲಿದೆ ಎಂದು ಎಚ್ಚರಿಸಿದರು.ವಿಜಯಪುರ ನಗರದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ, ಕುಡಿಯುವ ನೀರು ವ್ಯವಸ್ಥೆ ಸೇರಿದಂತೆ ವಿಜಯಪುರ ನಗರದ ಅಭಿವೃದ್ಧಿ ಮಾಡಿದ್ದಾರೆ. ಇವರು ಯಡಿಯೂರಪ್ಪನವರ ಕುಟುಂಬ ರಾಜಕಾರಣ ಕುರಿತು ಮಾತನಾಡಿರುವದು ತಪ್ಪಾ ಎಂದ ಅವರು, ಪಂಚಮಸಾಲಿ ಸಮಾಜವನ್ನು ೨ ಎ ವರ್ಗಕ್ಕೆ ಸೇರಿಸಬೇಕೆಂದು ನಡೆದ ಹೋರಾಟದ ಮುಂಚೂಣಿ ವಹಿಸಿದ್ದು ತಪ್ಪಾ. ಇದು ಜಾತಿವಾದವಲ್ಲ. ಇವರು ಸರ್ವ ಸಮಾಜಕ್ಕೆ ಬೇಕಾದ ಜನನಾಯಕರು. ಇಂತಹ ಶಕ್ತಿಯನ್ನು ಕಳೆದುಕೊಂಡರೆ ಬಿಜೆಪಿ ಸರ್ವನಾಶವಾಗುವುದು ಶತಸಿದ್ಧ. ಕೂಡಲೇ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿದರು.ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಪಂಚಮಸಾಲಿ ಶ್ರೀಗಳ ಕುರಿತು ಮಾತನಾಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವರನ್ನು ಮೆಚ್ಚಿಸಲು ಅವರು ಆ ರೀತಿ ಮಾತನಾಡಿರಬಹುದು. ಇದು ಸರಿಯಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಸುರೇಶ ಚಿಂಚೋಳಿ, ರವಿ ಪಟ್ಟಣಶೆಟ್ಟಿ, ಜಗದೀಶ ಕೊಟ್ರಶೆಟ್ಟಿ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಅವಟಿ, ಅಶೋಕ ಗುಳೇದ, ಎನ್.ಎಸ್.ಪಾಟೀಲ, ಕೆ.ಬಿ.ನಡಕಟ್ಟಿ ಇದ್ದರು.