ಸಾರಾಂಶ
ಪಟ್ಟಣದ ಲಯನ್ಸ್ ಕ್ಲಬ್ ನಲ್ಲಿ ಅಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಡಾ. ಅರ್ಚಿತಾ ಚಾಲೆ ನೀಡಿ ಮಾತನಾಡಿ, ಮಾನವನ ದೇಹದ ಅಂಗಾಂಗಗಳಲ್ಲಿ ಕಣ್ಣು ಬಹಳ ಮುಖ್ಯವಾದ ಅಂಗವಾಗಿದೆ.
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಪಟ್ಟಣದ ಲಯನ್ಸ್ ಕ್ಲಬ್ ನಲ್ಲಿ ಅಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಡಾ. ಅರ್ಚಿತಾ ಚಾಲೆ ನೀಡಿ ಮಾತನಾಡಿ, ಮಾನವನ ದೇಹದ ಅಂಗಾಂಗಗಳಲ್ಲಿ ಕಣ್ಣು ಬಹಳ ಮುಖ್ಯವಾದ ಅಂಗವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಕಣ್ಣಿನ ಸಂರಕ್ಷಣೆಯ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು, ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಜವಾಬ್ದಾರಿ ಅರಿಯಬೇಕು ಎಂದರು.ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಸ್ ನಾಗರಾಜು ಕೊಂಗರಹಳ್ಳಿ ಮಾತನಾಡಿ, ನಮ್ಮ ಲಯನ್ಸ್ ಕ್ಲಬ್ ವತಿಯಿಂದ ಸುಮಾರು 231 ಕಣ್ಣಿನ ಶಿಬಿರ ಕ್ಯಾಂಪನ್ನು ಉಚಿತವಾಗಿ ಹಮ್ಮಿಕೊಂಡಿದ್ದು, ಪೈಕಿ 1ಲಕ್ಷಕ್ಕಕ್ಕೂ ಅಧಿಕ ಮಂದಿ ಚಿಕಿತ್ಸೆಗೆ ಒಳಗಾಗಿದ್ದು, ಅದರಲ್ಲಿ 15 ಸಾವಿರಕ್ಕೂ ಹೆಚ್ಚು ಜನರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ ಎಂದರು.
ಬಾನುವಾರ ನಡೆದ ಶಿಬಿರದಲ್ಲಿ 32 ಮಂದಿ ಚಿಕಿತ್ಸೆಗೆ ಒಳಪಟ್ಟಿದ್ದು, ಇವರ ಪೈಕಿ 25 ಮಂದಿಯನ್ನು ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ಲಯನ್ ವೆಸ್ಟ್ ಐ ಆಸ್ಪತ್ರೆಗೆಕಳುಹಿಸಲಾಗಿದೆ ಎಂದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಚಿಕ್ಕಬಸವಯ್ಯ, ಪದಾಧಿಕಾರಿಗಳಾದ ಮಂಜುನಾಥ್, ಆನಂದ್ ರಾಮಶೆಟ್ಟಿ, ಜಯಪ್ರಕಾಶ್, ಚನ್ನಮಾದೇಗೌಡ ಇನ್ನಿತರಿದ್ದರು ಇದ್ದರು.