ಗ್ಯಾರಂಟಿಗಳ ಜತೆಗೆ ಮೂಲಸೌಲಭ್ಯಗಳ ಭಾಗ್ಯ

| Published : Mar 14 2024, 02:08 AM IST

ಸಾರಾಂಶ

ದೇವನಹಳ್ಳಿ: ಇಲ್ಲಿನ ತಾಲೂಕು ಪಂಚಾಯಿತಿ ವ್ಯಾಪ್ತಿಯ ಪ್ರೌಢಶಾಲೆಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್‌.ಮುನಿಯಪ್ಪ ಉದ್ಘಾಟಿಸಿದರು.

ದೇವನಹಳ್ಳಿ: ಇಲ್ಲಿನ ತಾಲೂಕು ಪಂಚಾಯಿತಿ ವ್ಯಾಪ್ತಿಯ ಪ್ರೌಢಶಾಲೆಗಳಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಅಂಗನವಾಡಿ ಕೇಂದ್ರಗಳಿಗೆ ಸಾಧನಾ ಸಲಕರಣೆಗಳ ವಿತರಣಾ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್‌.ಮುನಿಯಪ್ಪ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಜೊತೆಗೆ 3 ಮುಖ್ಯವಾದ ಮೂಲಸೌಲಭ್ಯಗಳನ್ನು ಸಹ ನೀಡುತ್ತಿದೆ. ಭಾರತದ ಯಾವುದೇ ರಾಜ್ಯದಲ್ಲಿ ಇಷ್ಟೊಂದು ಸಲಕರಣೆಗಳನ್ನು ನೀಡಿರುವುದು ಅಂದರೆ ನಮ್ಮ ಕರ್ನಾಟಕದಲ್ಲಿ ಮಾತ್ರ. ಅಂಗನವಾಡಿ ಕೇಂದ್ರದ ಮಕ್ಕಳಿಗಾಗಿ ಆಟದ ಸಲಕರಣೆಗಳು, ಪಂಚಾಯಿತಿ ವ್ಯಾಪ್ತಿಯ ಶಾಲೆಗಳಿಗೆ ಡೆಸ್ಕ್‌ಗಳ ವಿತರಣೆ, 11 ಪ್ರಾಥಮಿಕ ಕೇಂದ್ರಗಳಿಗೆ ಅಗತ್ಯ ಬೆಡ್‌ಗಳ ಖರೀದಿಸಲು ಹಣ ಬಿಡುಗಡೆ ಮಾಡಿದೆ ಎಂದರು.

ಮುದ್ದೇನಹಳ್ಳಿಯ ಸಾಯಿಬಾಬ ಸಂಸ್ಥೆಯವರು ರಾಜ್ಯದ ಎಲ್ಲ ಸರ್ಕಾರಿ ಶಾಲೆಯ ಲಕ್ಷಾಂತರ ಮಕ್ಕಳಿಗೆ ಹಾಲಿನ ಜೊತೆಯಲ್ಲಿ ಮಿಕ್ಸ್‌ ಮಾಡುವ ರಾಗಿ ಮಾಲ್ಟ್‌ ನೀಡಿರುವುದರಿಂದ ಶಾಲಾ ಮಕ್ಕಳಿಗೆ ಹೆಚ್ಚಿನ ಪೌಷ್ಟಿಕಾಂಶದ ಆಹಾರ ದೊರಕುತ್ತಿದೆ ಎಂದರು.

ಮೊದಲ ಹಂತದಲ್ಲಿ 30 ಪಂಚಾಯಿತಿಗಳಿಗೆ ಸೌಲಭ್ಯ ನೀಡಲಾಗುತ್ತಿದೆ. ಅಲ್ಲದೆ ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು ಎರಡು ಹಂತಗಳಲ್ಲಿ ನೀಡಲಾಗುವುದು. ಯಾವುದೇ ಕಾರಣಕ್ಕೂ ನೀರಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಇದಕ್ಕಾಗಿ 25 ಕೋಟಿ ರು. ಮೀಸಲಿರಿಸಿದೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದರು.

ಸಮಾರಂಭದಲ್ಲಿ ಬಯಪ ಅಧ್ಯಕ್ಷ ಶಾಂತಕುಮಾರ್‌, ಸದಸ್ಯರಾದ ಪ್ರಸನ್ನಕುಮಾರ್‌, ರಾಮಚಂದ್ರಪ್ಪ, ತಹಸೀಲ್ದಾರ್‌ ಶಿವರಾಜ್‌, ಜಿಪಂಮಾಜಿ ಅಧ್ಯಕ್ಷ ಬಿ. ರಾಜಣ್ಣ, ತಾಪಂ ಇಒ ಶ್ರೀನಾಥಗೌಡ, ಮಾಜಿ ಅಧ್ಯಕ್ಷರಾದ ವೆಂಕಟೇಶ್‌, ಮುದಗುರ್ಕಿ ನಾರಾಯಣಸ್ವಾಮಿ ಇತರರಿದ್ದರು.